ಭಯೋತ್ಪಾದನೆ: ಅಮೇರಿಕ ಮಾದರಿಯನ್ನು ನಾವು ಅನುಸರಿಸಬೇಕು- ಬಿಪಿನ್ ರಾವತ್

0
559

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 16: ಭಯೋತ್ಪಾದನೆಯ ವಿರುದ್ಧ ಭಾರತದ ಯುದ್ಧ ಕೊನೆಯಾಗುವುದಿಲ್ಲ ಎಂದು ಜಂಟಿ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದರು. ಭಯೋತ್ಪಾದನೆಯ ವಿರುದ್ಧ ಹೋರಾಟ ಮುಂದುವರಿಯಲಿದೆ. ಅದರ ಬೇರುಗಳು ಯಾರ ಅಂಗಳದವರೆಗೆ ಬರುವವರೆಗೂ ಯುದ್ಧ ಮುಂದುವರಿಯಲಿದೆ ಎಂದು ಜನರಲ್ ರಾವತ್ ಹೇಳಿದರು. ಭಯೋತ್ಪಾದನೆ ಸಂಘಟನೆಗಳಿಗೆ ಬೆಂಬಲ ನೀಡುವ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಂಟಿಯಾಗಿದೆ ಎಂದು ಜನರಲ್ ರಾವತ್ ಹೇಳಿದರು. 9/11 ವಲ್ರ್ಡ್ ಟ್ರೇಡ್ ಸೆಂಟರ್ ದಾಳಿಯ ಬಳಿಕ ಭಯೋತ್ಪಾನದೆಯ ವಿರುದ್ಧ ಅಮೆರಿಕ ಅನುಸರಿಸಿದ ಮಾರ್ಗವನ್ನು ಅನುಸರಿಸಬೇಕು. ಜಾಗತಿಕ ಮಟ್ಟದ ಹೋರಾಟ ಭಯೋತ್ಪಾದನೆಯನ್ನು ಕೊನೆಗೊಳಿಸಲಿದೆ. ಆದ್ದರಿಂದ ಭಯೋತ್ಪಾದಕ ಸಂಘಟನೆಗಳು ಮತ್ತು ಅವರಿಗೆ ಸಹಾಯ ಮಾಡುವವರನ್ನು ಒಂಟಿಗೊಳಿಸಬೇಕೆಂದು ರಾವತ್ ಹೇಳಿದರು.

ಭಯೋತ್ಪಾದಕರಿಗೆ ಹಣಕಾಸ ಸಹಾಯ, ಬೆಂಬಲವನ್ನುನೀಡುವ ದೇಶಗಳ ಇರುವಷ್ಟರವರೆಗೆ ಭಯೋತ್ಪಾದನೆ ಇರುತ್ತದೆ. ಚ್ಛಾಯ ಯುದ್ಧಕ್ಕಾಗಿ ಅವರು ಭಯೋತ್ಪಾದಕರನ್ನು ಉಪಯೋಗಿಸುತ್ತಿದ್ದಾರೆ, ಆಯುಧಗಳನ್ನು ತಯಾರಿಸಿ ಕೊಡುತ್ತಾರೆ . ಅಗತ್ಯಕ್ಕೆ ಹಣವನ್ನು ಕೊಡುತ್ತಾರೆ. ಇದು ಮುಂದುವರಿದರೆ ಭಯೋತ್ಪಾದನೆ ನಿಯಂತ್ರಿಸಲು ಆಗುವುದಿಲ್ಲ ಎಂದು ರಾವತ್ ಹೇಳಿದರು. ಭಯೋತ್ಪಾದನೆಯನ್ನು ಪ್ರಾಯೋಜಿಸುವ ದೇಶ ಅದರ ಜವಾಬ್ದಾರಿ ವಹಿಸಿಕೊಳ್ಳಬೇಕು. ಅಂತಹ ದೇಶಗಳನ್ನು ಫೈನಾನ್ಶಿಯಲ್ ಆಕ್ಷನ್ ಟಾಸ್‍ಪೋರ್ಸ್ ಕಪ್ಪುಪಟ್ಟಿಗೆ ಸೇರಿಸಿದ್ದು ಒಳ್ಳೆಯ ಬೆಳವಣಿಗೆ. ರಾಜತಾಂತ್ರಿಕ ಮಟ್ಟದಲ್ಲಿ ಅವರನ್ನು ಒಂಟಿಗೊಳಿಸಬೇಕೆಂದು ರಾವತ್ ಅಭಿಪ್ರಾಯ ವ್ಯಕ್ತಪಡಿಸಿದರು.