ಶ್ರೀನಗರದಲ್ಲಿ ಸಿಆರ್‌ಪಿಎಫ್ ಮೇಲೆ ಗುಂಡು ಹಾರಾಟ

0
105

ಸನ್ಮಾರ್ಗ ವಾರ್ತೆ

ಶ್ರೀನಗರ,ಸೆ.21: ಜಮ್ಮು ಕಾಶ್ಮೀರದ ನೌಗಾಮ್‍ನಲ್ಲಿ ಪಟ್ರೋಲಿಂಗ್ ನಡೆಸುತ್ತಿದ್ದ ಸಿಆರ್‌ಪಿಎಫ್ ಯೋಧರ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ನೌಗಾಮ್‍ನಲ್ಲಿ ಪಟ್ರೊಲಿಂಗ್ ನಡೆಸುತ್ತಿದ್ದ ಸಿಆರ್‌ಪಿಎಫ್ 110ನೇ ಬ್ಯಾಟಲ್ ಮೇಲೆ ಅಡಗಿ ಕೂತು ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ.
ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ಗುಂಡು ಹಾರಾಟದಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ವರದಿಯಾಗಿದೆ. ಘಟನೆ ನಡೆದ ಬಳಿಕ ಪ್ರದೇಶವನ್ನು ಸಿಆರ್‌ಪಿಎಫ್ ಸುತ್ತುವರಿದಿದೆ. ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.