ವಿಭಜಿಸಲ್ಪಡುವ ಪ್ರಜಾಪ್ರಭುತ್ವ ಬೇಡದವರು ಉತ್ತರ ಕೊರಿಯಕ್ಕೆ ಹೋಗಿರಿ- ಮೇಘಾಲಯ ರಾಜ್ಯಪಾಲ

0
836

ಸನ್ಮಾರ್ಗ ವಾರ್ತೆ-

ಶಿಲ್ಲಾಂಗ್, ಡಿ.14: ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಮೇಘಾಲಯದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ವೇಳೆ ಅಲ್ಲಿನ ಗವರ್ನರ್ ವಿವಾದ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ವಿಭಜಿಸಲ್ಪಡುವ ಪ್ರಜಾಪ್ರಭುತ್ವ ಬೇಡದವರು ಉತ್ತರಕೊರಿಯಕ್ಕೆ ಹೋಗಬೇಕಾಗಿದೆ ಎಂದು ರಾಜ್ಯಪಾಲ ತಥಾಗತ ರಾಯ್ ಟ್ವೀಟ್ ಮಾಡಿದ್ದಾರೆ.

ಈಗಿನ ವಿವಾದಲ್ಲಿ ಎರಡು ವಿಷಯಗಳನ್ನು ಕಡೆಗಣಿಸಬಾರದು. 1. ದೇಶ ಒಮ್ಮೆ ಧರ್ಮದ ಹೆಸರಿನಲ್ಲಿ ವಿಭಜಿಸಲ್ಪಟ್ಟಿದೆ. 2. ಪ್ರಜಾಪ್ರಭುತ್ವ ಅನಿವಾರ್ಯ ವಿಭಜನೆಯಾಗಿದೆ. ನಿಮಗೆ ಅದು ಬೇಡದಿದ್ದರೆ ಉತ್ತರ ಕೊರಿಯಕ್ಕೆ ಹೋಗಿ ಎಂದು ರಾಜ್ಯಪಾಲರು ಟ್ವೀಟ್ ಮಾಡಿದ್ದಾರೆ. ರಾಜ್ಯಪಾಲರ ಅಧಿಕೃತ ವಸತಿ ರಾಜ್‍ಭವನದ ಪ್ರವೇಶ ದ್ವಾರದವರೆಗೆ ಪ್ರತಿಭಟನಾ ಕಾರರು ಬಂದಿದ್ದರು. ಇದಕ್ಕಿಂತ ಸ್ವಲ್ಪ ಮುಂಚೆ ರಾಜ್ಯಪಾಲರು ಟ್ವೀಟ್ ಮಾಡಿದ್ದರು. ಲಾಠಿಚಾರ್ಜು ನಡೆಸಿ, ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ರಾಜಭವನದಿಂದ ಹೊರತಳ್ಳಲಾಗಿತ್ತು.