ಭಾರತದಲ್ಲಿ ಶೇ.260ರಷ್ಟು ಇಂಧನ ತೆರಿಗೆ! ಕೇಂದ್ರದ ತೆರಿಗೆ ಲೂಟಿ ನೀತಿಯನ್ನು ಬಹಿರಂಗ ಗೊಳಿಸಿದ ಸಂಸದ ಶಶಿ ತರೂರ್

0
675

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಮೆರಿಕದಲ್ಲಿ ಶೇ.20, ಜಪಾನಿನಲ್ಲಿ ಶೇ.45 ಮತ್ತು ಭಾರತದಲ್ಲಿ ಶೇ.260 ತೆರಿಗೆಯನ್ನು ವಿಧಿಸಲಾಗುತ್ತಿರುವ ಕುರಿತಾದ ಲೆಕ್ಕವನ್ನು ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಬಹಿರಂಗಗೊಳಿಸಿದ್ದಾರೆ.

ವಿಶ್ವದ ಇತರ ದೇಶದಲ್ಲಿ ಇಂಧನಗಳಿಗೆ ವಿಧಿಸಲಾದ ತೆರಿಗೆಯ ಲೆಕ್ಕದ ಜೊತೆಗೆ ಭಾರತದ ತೆರಿಗೆ ದರವನ್ನು ಸೇರಿಸಿ ಟ್ವೀಟ್ ಮಾಡಿ ಜನರು ಶೋಷಣೆಗೆ ತುತ್ತಾಗುತ್ತಿರುವುದನ್ನು ಅವರು ಬಯಲಿಗೆಳೆದಿದ್ದಾರೆ.

ಕಚ್ಚಾ ತೈಲಕ್ಕೆ ಬೆಲೆ ಕಡಿಮೆ ಮಾಡಿಯೂ ಭಾರತದಲ್ಲಿ ಪೆಟ್ರೋಲ್‍ನ ದರ ನೂರು ರೂಪಾಯಿ ದಾಟಲು ಕಾರಣವಾದ ಬೃಹತ್ ತೆರಿಗೆ ಈಡುಗೊಳಿಸುತ್ತಿರುವುದಕ್ಕೆ ಕಾರಣವೆಂದು ಅವರು ಹೇಳಿದ್ದಾರೆ. ಶೇ.20ರಷ್ಟು ತೆರಿಗೆ ಹಾಕುವ ಅಮೆರಿಕದಲ್ಲಿ ಒಂದು ಲೀಟರ್ ಪೆಟ್ರೋಲ್‍ನ ದರ 56.55 ರೂಪಾಯಿ ಆಗಿದೆ. ಜಪಾನಿನಲ್ಲಿ ಶೇ.45ರಷ್ಟು ತೆರಿಗೆ ತೆರಿಗೆ ಹಾಕಲಾಗುತ್ತಿದೆ. ಇಂಗ್ಲೆಂಡಿನಲ್ಲಿ, ಇಟಲಿಯಲ್ಲಿ ಶೇ.62ರಷ್ಟು, ಜರ್ಮನಿಯಲ್ಲಿ ಶೇ. 65ರಷ್ಟು ತೆರಿಗೆ ಹಾಕಲಾಗುತ್ತಿದೆ.

ಭಾರತದ ನೆರೆಯ ದೇಶಗಳಲ್ಲಿಯೂ ಇಂಧನವನ್ನು ಅತೀ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಶ್ರೀಲಂಕಾದಲ್ಲಿ ಕಳೆದ ದಿವಸದ ಪೆಟ್ರೊಲ್, ಡೀಸೆಲ್ ದರ ತಲಾ 60.29ರೂ, 38.9ರೂ ಆಗಿತ್ತು. ನೇಪಾಳದಲ್ಲಿ69.01ರೂ, 58.32ರೂ, ಪಾಕಿಸ್ತಾನದಲ್ಲಿ 51.13ರೂ, 53.02ರೂ, ಬಾಂಗ್ಲಾದೇಶದಲ್ಲಿ 76.43ರೂ, 55.78ರೂ ಆಗಿತ್ತು.