ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತ ಪಡಿಸಬೇಕು; ಮೋದಿಗೆ ತರೂರ್ ಬಹಿರಂಗ ಪತ್ರ

0
513

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ಸಂವಿಧಾನದಲ್ಲಿ ನೀಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ಖಚಿತಗೊಳಿಸಬೇಕೆಂದು ಸಂಸದ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಪ್ರಧಾನಿಗೆ ಪತ್ರ ಬರೆದ ಪ್ರಮುಖ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಿಕೊಳ್ಳಲಾದ ಘಟನೆಯಲ್ಲಿ ತಾನು ತೀವ್ರ ಅಸ್ವಸ್ಥಗೊಂಡಿರುವೆ. ರಾಷ್ಟ್ರದ ಪ್ರಧಾನ ವಿಷಯಗಳನ್ನು ಯಾವನೆ ಪ್ರಜೆ ಪ್ರಧಾನಿಯ ಗಮನಕ್ಕೆ ತರುವ ಹಕ್ಕನ್ನು ಹೊಂದಿದ್ದಾನೆ ಎಂದು ತರೂರ್ ಹೇಳಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಾವು ಬೆಂಬಲಿಸುವಿರಿ ಎಂದು ತಾನು ಭಾವಿಸಿದ್ದೇನೆ. ಮನ್‍ ಕಿ ಬಾತ್- ಮೌನ್‍ ಕಿಬಾತ್ ಆಗಬಾರದು. ಬೇರೆ ಬೇರೆ ಚಿಂತನೆ, ಆದರ್ಶಗಳು ಮತ್ತು ಸಹವರ್ತಿತ್ವ ಭಾರತದ ಸಂಕಲ್ಪದ ಪಂಚಾಂಗ ಕಲ್ಲು ಆಗಿದೆ. ಇದು ಭಾರತವನ್ನು ಉಜ್ವಲವಾದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನೆಲೆಯೂರಿಸಿದೆ. ತಮ್ಮ ಆಶಯಗಳನ್ನು ಟೀಕಿಸಲು ಮತ್ತು ವಿರೋಧಿಸಲು ಹೋದವರನ್ನು ದೇಶದ್ರೋಹಿಗಳೆಂದು ಮುದ್ರೆಯೊತ್ತಬಾರದೆಂದು ಅವರು ಹೇಳಿದ್ದಾರೆ.

2016ರಲ್ಲಿ ಅಮೆರಿಕ ಕಾಂಗ್ರೆಸ್‍ನಲ್ಲಿ ಮೋದಿಯವರ ಭಾಷಣವನ್ನು ಪತ್ರದಲ್ಲಿ ತರೂರ್ ನೆನಪಿಸಿದ್ದಾರೆ. ಪವಿತ್ರ ಗ್ರಂಥ ಸಂವಿಧಾನವನ್ನು ಮೋದಿ ಅಂದು ವಿವರಿಸಿದ್ದರು. ನಂಬಿಕೆ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಮೂಲಭೂತ ಹಕ್ಕುಗಳಾಗಿವೆ ಎಂದು ಅಂದು ಹೇಳಿದ್ದರು.

ಭಿನ್ನಾಭಿಪ್ರಾಯಕ್ಕೆ ಸ್ಥಾನವಿಲ್ಲದ ಪ್ರಜಾಪ್ರಭುತ್ವ ಅಸ್ತಿತ್ವವಿಲ್ಲ ಎಂದು ಐವತ್ತು ಮಂದಿ ಪ್ರಮುಖ ವ್ಯಕ್ತಿಗಳು ಸಹಿ ಹಾಕಿದ ಪತ್ರ ಹೇಳುತ್ತಿದೆ ಎಂದು ತರೂರ್ ಹೇಳಿದರು. ದೇಶದ ಗುಂಪು ಹತ್ಯೆ ದಾಳಿಗಳ ವಿರುದ್ಧ ಪ್ರಧಾನಿಗೆ ಈ ಪ್ರಮುಖರು ಪತ್ರ ಬರೆದಿದ್ದು ಬಿಹಾರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಡೂರ್ ಗೋಪಾಲಕೃಷ್ಣನ್, ಮಣಿರತ್ನ, ಅನುರಾಗ್ ಕಶ್ಯಪ್, ರಾಮಚಂದ್ರ ಗುಹ, ಅಪರ್ಣಾ ಸೇನ್ ಮುಂತಾದವರು ಪ್ರಕರಣ ದಾಖಲಿಸಲ್ಪಟ್ಟವರಲ್ಲಿ ಒಳಗೊಂಡಿದ್ದಾರೆ.