ಅಂಗನವಾಡಿಗಳನ್ನು ತೆರೆಯಲು ಸುಪ್ರೀಂ ಕೋರ್ಟ್ ಆದೇಶ

0
177

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಅಂಗನವಾಡಿಗಳನ್ನು ಈ ತಿಂಗಳೇ ತೆರೆಯಬೇಕೆಂದು ಸುಪ್ರೀಂಕೋರ್ಟು ಹೇಳಿದೆ. ಕಂಟೈನ್‍ಮೆಂಟ್ ಝೊನ್ ಹೊರತುಪಡಿಸಿ ಅಂಗನವಾಡಿಗಳನ್ನು ತೆರೆಯಬಹುದು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರಗಳು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೋರ್ಟು ಹೇಳಿತು.

ಗರ್ಭಿಣಿಯರಿಗೆ ಮತ್ತು ಮಕ್ಕಳಿಗೆ ಪೋಷಕಾಹಾರ ಲಭ್ಯತೆಯ ಕುರಿತು ಸಲ್ಲಿಸಿದ ಅರ್ಜಿಯ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ವಿಷಯದಲ್ಲಿ ಅಂತಿಮ ತೀರ್ಮಾನವನ್ನು ರಾಜ್ಯಗಳು ತಳೆಯಬೇಕೆಂದು ಕೋರ್ಟು ಸೂಚಿಸಿದೆ.