ಸಿದ್ದೀಕ್ ಕಪ್ಪನ್ ವೀಡಿಯೊ ಕಾನ್ಫೆರೆನ್ಸ್ ಮೂಲಕ ತಾಯಿಯೊಂದಿಗೆ ಮಾತಾಡಬಹುದು: ಸುಪ್ರೀಂ ಕೋರ್ಟು

0
194

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ:ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ ಜಾಮೀನು ಆಗ್ರಹಿಸಿ ಕೇರಳದ ಪತ್ರಕರ್ತರ ಸಂಘ ನೀಡಿದ ಅರ್ಜಿಯಲ್ಲಿ ಮುಂದಿನ ವಾರ ಅಂತಿಮ ವಾದ ಆಲಿಸುವುದಾಗಿ ಕೋರ್ಟು ಹೇಳಿದ್ದು, ಸಿದ್ದೀಕ್ ಕಪ್ಪನ್ ತಮ್ಮ ರೋಗಗ್ರಸ್ತ ತಾಯಿಯೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ಮಾತಾಡಬಹುದು ಎಂದು ಸುಪ್ರೀಂ ಕೋರ್ಟು ಅನುಮತಿ ನೀಡಿದೆ.

ಅರ್ಜಿಯಲ್ಲಿ ಶೀಘ್ರ ವಾದ ಆಲಿಸಬೇಕೆಂದು ವಕೀಲರು ಆಗ್ರಹಿಸಿದ್ದು ಕೋರ್ಟು ಒಪ್ಪಿಕೊಂಡಿದೆ. ಕಪಿಲ್ ಸಿಬಲ್ ಸಿದ್ದೀಕ್‍ರಿಗಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ನಿರಪರಾಧಿತ್ವ ಸಾಬೀತುಪಡಿಸಲು ಸುಳ್ಳು ಪತ್ತೆ ಪರೀಕ್ಷೆ ಸಹಿತ ಯಾವುದೇ ವೈಜ್ಞಾನಿಕ ಪರೀಕ್ಷೆಗೂ ಸಿದ್ಧ ಎಂದು ಸಿದ್ದೀಕ್ ಕಪ್ಪನ್ ಹೇಳಿದರು.

ಅಕ್ಟೋಬರ್‌ನಲ್ಲಿ ಹಾಥ್ರಸ್‍ನಲ್ಲಿ ದಲಿತ ಬಾಲಕಿ ಸಾಮೂಹಿಕ ಅತ್ಯಾಚಾರ, ಹತ್ಯೆ ಘಟನೆಯ ವರದಿಗಾರಿಕೆಗೆ ತೆರಳಿದ ವೇಳೆ ಸಿದ್ದೀಕ್ ಕಪ್ಪನ್‍ರನ್ನು ತಡೆದ ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದರು.