ಇದು ಹಿಂದುತ್ವದ ವಿಜಯ; ಮೋದಿಯದಲ್ಲ- ಸುಬ್ರಮಣಿಯನ್ ಸ್ವಾಮಿ

0
80

ಹೊಸದಿಲ್ಲಿ,ಮೇ 23: ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ವಿಜಯದತ್ತ ಸಾಗುತ್ತಿದ್ದು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಇದು ಹಿಂದುತ್ವದ ವಿಜಯ, ಮೋದಿ ಅಲೆಯಲ್ಲ ಎಂದು ವಿಶ್ಲೇಷಿಸಿದ್ದಾರೆ. ಜಾತಿಗಳ ಮೇಲೆ ಹಿಂದುತ್ವ ಗಳಿಸಿದ ವಿಜಯವಿದು. ಜಾತಿಯನ್ನು ಮೀರಿ ಹಿಂದುಗಳು ಬೆಳೆದಿದ್ದಾರೆ ಎನ್ನುವುದು ಚುನಾವಣಾ ಫಲಿತಾಂಶ ತೋರಿಸಿಕೊಡುತ್ತಿದೆ. ಹೊಸತಲೆಮಾರಿನ ಮತದಾರರು ಬಿಜೆಪಿ ವಿಜಯದಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅವರು ಜಾತಿ ಚಿಂತನೆಗಳಿಗೆ ಅವಕಾಶ ನೀಡಿಲ್ಲ ಎಂದು ಸ್ವಾಮಿ ಹೇಳಿದರು.

ಮೋದಿ ಸರಕಾರದ ಆರ್ಥಿಕ ನೀತಿ ಮತ್ತು ವೈಫಲ್ಯಗಳನ್ನು ಜನರು ಕ್ಷಮಿಸಿದ್ದಾರೆ. ಬದಲಾಗಿ ಅವರ ಭ್ರಷ್ಟಾಚಾರ ವಿರುದ್ಧ ಆಡಳಿತ, ಬಾಂಗ್ಲಾದೇಶಿ ವಲಸೆಗಾರರ ವಿರುದ್ಧ ಸ್ವೀಕರಿಸಿದ ನಿಲುವು ವಿಜಯದಲ್ಲಿ ದೊಡ್ಡ ಪಾತ್ರ ವಹಿಸಿದೆ. ಚುನಾವಣೆಯ ನಡುವೆ ಪುಲ್ವಾಮ ದಾಳಿ ನಡೆದಿಲ್ಲವಾದರೆ ಬಿಜೆಪಿಗೆ 160 ಸೀಟು ಸಿಗುತ್ತಿರಲಿಲ್ಲ. ಆರ್ಥಿಕ ನೀತಿಯಲ್ಲಿ ಬಿಜೆಪಿ ವಿಫಲವಾಗಿತ್ತು ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದರು.