ಸಹಕಾರಿ ಬ್ಯಾಂಕುಗಳು ಇನ್ನು ಆರ್‌ಬಿಐ ಅಧೀನದಲ್ಲಿ: ಲೋಕಸಭೆಯಲ್ಲಿ ಮಸೂದೆ ಜಾರಿ

0
232

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.17: ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕಿನ ಅಧೀನದಲ್ಲಿ ತರುವ ನಿಟ್ಟಿನಲ್ಲಿ 1949 ಬ್ಯಾಂಕಿಂಗ್ ನಿಯಂತ್ರಣ ಕಾನೂನಿನ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಜಾರಿಗೊಳಿಸಲಾಗಿದೆ. ಇದರೊಂದಿಗೆ ಸಹಕಾರಿ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ನಿಯಂತ್ರಣಕ್ಕೊಳಗಾಗಲಿದೆ.

ದೇಶದ 1,482 ಅರ್ಬನ್ ಸಹಕಾರಿ ಬ್ಯಾಂಕುಗಳ ಸಹಿತ 1540 ಸಹಕಾರಿ ಸಂಸ್ಥೆಗಳು ರಿಸರ್ವ್ ಬ್ಯಾಂಕಿನ ವ್ಯಾಪ್ತಿಯೊಳಗೆ ಸೇರಿಕೊಳ್ಳಲಿದೆ. ಸಹಕಾರಿ ಬ್ಯಾಂಕುಗಳಲ್ಲಿ 8.6 ಕೋಟಿ ರೂಪಾಯಿ ಠೇವಣಿಯಿದ್ದು, ಅವುಗಳನ್ನು ರಿಸರ್ವ್ ಬ್ಯಾಂಕಿನ ಅಧೀನಗೊಳಿಸಲು ಕೇಂದ್ರ ಸಚಿವ ಸಂಪುಟ ತೀರ್ಮಾನಿಸಿತ್ತು. ಈ ಹಿಂದೆ ಶೆಡ್ಯೂಲ್ ಬ್ಯಾಂಕುಗಳು ರಿಸರ್ವ್ ಬ್ಯಾಂಕಿನ ಅಧೀನದಲ್ಲಿದ್ದವು.

ಠೇವಣಿಗೆ ಸುರಕ್ಷೆ ಒದಗಿಸುವುದಕ್ಕಾಗಿ ಸಹಕಾರಿ ಬ್ಯಾಂಕುಗಳನ್ನು ರಿಸರ್ವ್ ಬ್ಯಾಂಕಿನ ಅಧೀನಕ್ಕೊಳಪಡಿಸಿರುವುದೆಂದು ಸಹಕಾರಿ ರಿಜಿಸ್ಟ್ರಾರ್‌‌ರ ಅಧಿಕಾರ ಮೊಟಕುಗೊಳ್ಳದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಗೆ ತಿಳಿಸಿದರು.

ಸಹಕಾರಿ ಬ್ಯಾಂಕುಗಳ ರಿಜಿಸ್ಟ್ರಾರ್‌ರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ರಿಸರ್ವ್ ಬ್ಯಾಂಕ್ ನಿಯಂತ್ರಣ ಇರಲಿದೆ ಎಂದು ಅವರು ತಿಳಿಸಿದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here