ಮೋದಿ, ಅಮಿತ್ ಶಾಗೆ ಕ್ಲೀನ್ ಚಿಟ್; ಚುನಾವಣಾ ಆಯೋಗದಲ್ಲಿ ಭಿನ್ನಮತ ತೀವ್ರ: ಸಭೆಯಿಂದ ಹೊರಗುಳಿದ ಆಯೋಗ ಸದಸ್ಯ ಅಶೋಕ್ ಲವಾಸ್

0
533

ಹೊಸದಿಲ್ಲಿ,ಮೇ 18ಕ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಅಧ್ಯಕ್ಷ ಅಮಿತ್ ಶಾಗೆ ಕ್ಲೀನ್ ಚಿಟ್ ನೀಡಿದ ವಿಷಯದಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ಭಿನ್ನಮತ ತೀವ್ರವಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳಲ್ಲಿ ಇಬ್ಬರಿಗೂ ಕ್ಲೀನ್ ಚಿಟ್ ನೀಡಲಾಗಿತ್ತು. ಇದನ್ನು ಪ್ರತಿಭಟಿಸಿ ಆಯೋಗದ ಸದಸ್ಯ ಅಶೋಕ್ ಲವಾಸ್ ಸಭೆಯಿಂದ ದೂರ ಉಳಿದರು.

ನೀತಿ ಸಂಹಿತೆ ಉಲ್ಲಂಘನೆ ಸಂಬಂಧಿಸಿದ ದೂರಿನಲ್ಲಿ ತೀರ್ಮಾನ ಮಾಡುವ ಸಭೆಯಿಂದ ಅಶೋಕ್ ದೂರ ಉಳಿದರು. ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರ, ಅಶೋಕ್ ಲವಾಸ್ ಮತ್ತು ಸುಶೀಲ್ ಚಂದ್ರ ಇನ್ನಿಬ್ಬರು ಸಮಿತಿಯ ಸದಸ್ಯರು. ಚುನಾವಣಾ ಆಯೋಗ ಒಕ್ಕೊರಲ ನಿರ್ಧಾರವನ್ನು ಹೊರಡಿಸಬೇಕು. ಆದರೆ ಭಿನ್ನಾಭಿಪ್ರಾಯ, ಸಹಮತ ಇಲ್ಲದ ಸಂದರ್ಭದಲ್ಲಿ ಬಹುಮತದ ಅಭಿಪ್ರಾಯವನ್ನು ತಿಳಿಸಬಹುದು.

ಆಯೋಗದ ಆದೇಶಗಳಲ್ಲಿ ಅಲ್ಪಬಹುಮತದ ಅಭಿಪ್ರಾಯ ಎಂದು ನಮೂದಿಸದ್ದನ್ನು ಪ್ರತಿಭಟಿಸಿ ಅವರು ಸಭೆಯಿಂದ ಹೊರಗೆ ಉಳಿದರು. ಇದನ್ನು ಅಶೋಕ್ ಲವಾಸ್ ಚುನವಣಾ ಆಯುಕ್ತರಿಗೆ ಮೇ ನಾಲ್ಕರಂದು ಬರೆದ ಪತ್ರದಲ್ಲಿ ತಿಳಿಸಿದ್ದರು. ಆದರೆ ಇವರ ಅಭಿಪ್ರಾಯವನ್ನು ಮುಖ್ಯ ಚುನಾವಣಾ ಆಯುಕ್ತರು ಒಪ್ಪಿಕೊಂಡಿಲ್ಲ. ನೀತಿ ಸಂಹಿತೆ ಉಲ್ಲಂಘನೆ ತೀರ್ಮಾನಗಳು ಕಾನೂನು ಕ್ರಮಗಳಲ್ಲ ಆದ್ದರಿಂದ ಹಾಗೆ ಆದೇಶದಲ್ಲಿ ದಾಖಲಿಸಬೇಕಾಗಿಲ್ಲ ಎಂದು ಅರೋರ ಅಭಿಪ್ರಾಯ ವ್ಯಕ್ತಪಡಿಸಿದ್ದರು.