ಬೈಡನ್, ಕಮಲಾ ಹ್ಯಾರಿಸ್ ವೈಟ್ ಹೌಸ್‍ಗೆ ಟಿಕೆಟ್ ದೃಢ ಪಡಿಸಿಕೊಂಡಿದ್ದಾರೆ: ನ್ಯಾನ್ಸಿ ಪೆಲೊಸಿ

0
177

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ನ.7: ಅಮೆರಿಕ ಅಧ್ಯಕ್ಷರಾಗಿ ಜೊ ಬೈಡನ್ ಚುನಾಯಿತರಾಗಿದ್ದಾರೆ ಎಂದು ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೊಸಿ ಹೇಳಿದರು. ಮುಖ್ಯ ರಾಜ್ಯಗಳಲ್ಲಿ ಬೈಡನ್ ಮುನ್ನಡೆ ಸಾಧಿಸಿದ ನಂತರ ಪೆಲೊಸಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬೈಡನ್,ಹ್ಯಾರಿಸ್ ವೈಟ್ ಹೌಸ್ ಟಿಕೆಟ್ ಪಡೆದುಕೊಂಡಿರುವುದು ಸ್ಪಷ್ಟವಾಗಿದೆ ಎಂದು ಪೆಲೊಸಿ ಹೇಳಿದರು. ಬೈಡನ್‍ಗೆ ನಿರ್ಣಾಯಕ ರಾಜ್ಯ ಪೆನ್‍ಸಿಲ್ವೇನಿಯದಲ್ಲಿ ಲೀಡ್ ಪಡೆದುಕೊಂಡ ಬೆನ್ನಿಗೆ ಜಯದ ಸುದ್ದಿಯೊಂದಿಗೆ ಪೆಲೊಸಿ ರಂಗಪ್ರವೇಶಿಸಿದರು.

ಎಲ್ಲರನ್ನು ಒಂದಾಗಿಸಿ ಕರೆದುಕೊಂಡು ಹೋಗಲು ಬೈಡನಿರಿಂದ ಸಾಧ್ಯವಾಗಬಹುದು. ಅಮೆರಿಕ ಚುನಾವಣೆಯಲ್ಲಿ ನಿರ್ಣಾಯಕವೆನಿಸಿದ ಬೈಡನ್ ನಿನ್ನೆ ಮುನ್ನಡೆ ಪಡೆದುಕೊಂಡರು. 14,500 ಮತಗಳ ಲೀಡ್ ಬೈಡನ್‍ರಿಗಿದೆ.

ಇದಲ್ಲದೆ ಅರಿಝೋನ, ಜಾರ್ಜಿಯ, ನೆವಾ ರಾಜ್ಯಗಳಲ್ಲಿಯೂ ಬೈಡನ್ ಮುಂದಿದ್ದಾರೆ. ಈ ರಾಜ್ಯಗಳ ಮತ ಎಣಿಕೆ ಇನ್ನೂ ಮುಗಿದಿಲ್ಲ.