ರೈಲ್ವೆ ಟಾಯ್ಲೆಟ್‍ನಲ್ಲಿ ವಿದ್ಯಾರ್ಥಿನಿಯ ವೀಡಿಯೊ ಕ್ಲಿಕ್ಕಿಸಿದ ಟಿಟಿಇ ಬಂಧನ

0
399

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ.20: ಚಲಿಸುತ್ತಿರುವ ರೈಲಿನಲ್ಲಿ ಟಾಯ್ಲೆಟ್‍ಗೆ ಹೋಗಿದ್ದ ವಿದ್ಯಾರ್ಥಿನಿಯ ವೀಡಿಯೊವನ್ನು ತನ್ನ ಮೊಬೈಲ್‍ನಲ್ಲಿ ಚಿತ್ರೀಕರಿಸಿದ ಟ್ರೈನ್ ಟಿಕೆಟ್ ಎಕ್ಸಾಮಿನರ್‌ನನ್ನು ಬಂಧಿಸಲಾಗಿದೆ. ಸೇಲಂ ಸೂರಮಂಗಲಂ ಎಸ್.ಮೇಘನಾಥನ್(26) ಬಂಧಿತ ಟಿಟಿಇ ಆಗಿದ್ದಾನೆ.

ಕೊಯಮತ್ತೂರಿನ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಗುರುವಾರ ಬೆಳಗ್ಗೆ ರೈಲಿನಲ್ಲಿ ಚೆನ್ನೈಗೆ ಹೋಗುವಾಗ ಘಟನೆ ನಡೆದಿತ್ತು. ಟಾಯ್ಲೆಟ್ ಉಪಯೋಗಿಸುತ್ತಿದ್ದಾಗ ಕಿಟಕಿಯ ಮೂಲಕ ಒಬ್ಬರ ಕೈಯಲ್ಲಿ ಮೊಬೈಲ್ ಫೋನ್ ನೋಡಿ ವಿದ್ಯಾರ್ಥಿನಿ ಟಾಯ್ಲೆಟ್‍ನಿಂದ ಹೊರಬಂದಿದ್ದಳು.

ಆರೋಪಿಯನ್ನು ಸಹೋದ್ಯೋಗಿಗಳು ಹಿಡಿದು ಹತ್ತಿರದ ಅರಕೋಣಂ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಟಿಟಿಇಯ ಕೈಯಲ್ಲಿದ್ದ ಮೊಬೈಲ್‍ನಲ್ಲಿ ವಿದ್ಯಾರ್ಥಿನಿಯ ಫೋಟೊಗಳು ದೊರಕಿವೆ. ರೈಲಿನ ಫುಟ್ ಬೋರ್ಡಿನಲ್ಲಿ ನಿಂತು ಆತ ಫೋಟೊ ತೆಗೆದಿದ್ದಾನೆ. ಈತನನ್ನು ಅರಕೋಣಂ ಜ್ಯುಡಿಶಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ರಿಮಾಂಡ್ ಮಾಡಲಾಗಿದೆ.