ಬಿಜೆಪಿ‌ ಸೇರ್ಪಡೆಗೊಂಡವರ ವಿರುದ್ಧ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

0
347

ಸನ್ಮಾರ್ಗ ವಾರ್ತೆ

ಕೊಲ್ಕತಾ,ಡಿ. 26: ಪಶ್ಚಿಮ ಬಂಗಾಳದ ಬಿಜೆಪಿ ಚುನಾವಣಾ ಸಮಿತಿ ಕಚೇರಿ ಮುಂದೆ ತೃಣಮೂಲ ಕಾಂಗ್ರೆಸ್ ಕಾರ್ಯಕತರು ಪ್ರತಿಭಟನೆ ನಡೆಸಿದ್ದು, ತೃಣಮೂಲದ ಬಂಡುಕೋರ ನಾಯಕ ಸುನೀಲ್ ಮೊಂಡಲ್ ಕಚೇರಿಗೆ ಭೇಟಿ ನೀಡಲು ಬಂದಾಗ ಘಟನೆ ನಡೆದಿದೆ. ಕಪ್ಪು ಬಾವುಟದೊಂದಿಗೆ ಬಂದ ಕಾರ್ಯಕರ್ತರು ಮೊಂಡಲ್ ವಾಹನದ ಸುತ್ತಲೂ ನೆರೆದು ಘೋಷಣೆ ಕೂಗಿದ್ದಾರೆ.

ಅಮಿತ್ ಶಾ ಬಂಗಾಳಕ್ಕೆ ಬಂದಾಗ ಬಿಜೆಪಿಗೆ ಹೋದ ಬಂಡುಕೋರ ನಾಯಕರಿಗೆ ಅಭಿನಂದನೆ ಸಲ್ಲಿಸಲು ಬಿಜೆಇ ಕಚೇರಿಗೆ ಮೊಂಡಲ್ ಬಂದಿದ್ದರು. ಮಮತಾ ಬ್ಯಾನರ್ಜಿ ಸರಕಾರದಲ್ಲಿ ಮುಖ್ಯ ಸ್ಥಾನದಲ್ಲಿದ್ದ ಸುವೇಂದು ಅಧಿಕಾರಿ ಬಿಜೆಪಿಗೆ ಬರಲಿದ್ದಾರೆ ಎಂದು ಹೇಳಲಾಗಿತ್ತು. ಬಿಜೆಪಿ ಕಚೇರಿಗೆ ಸಮೀಪ ತೃಣಮೂಲ ಕಾರ್ಯಕರ್ತರು ಒಂದು ವೇದಿಕೆ ಸಜ್ಜುಗೊಳಿಸಿದ್ದಾರೆ. ಪೊಲೀಸರ ಅನುಮತಿ ಪಡೆದ ಬಳಿಕವೇ ಸ್ಟೇಜ್ ಕಟ್ಟಿದ್ದಾರೆಯೇ ಎಂದು ತಿಳಿದು ಬಂದಿಲ್ಲ. ಅಲ್ಲಿಗೆ ಬಂದು ತೃಣಮೂಲ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ಕಚೇರಿ ನಡುವೆ ಪೊಲೀಸರು ಬ್ಯಾರಿಕೇಡ್ ಇಟ್ಟಿದ್ದು ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಂಸದ ಸೌಗತ್ ರಾಯ್ ಹೇಳಿದರು.

ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಇರುವುದರ ಪ್ರತೀಕ ಇದು ಎಂದು ಬಿಜೆಪಿ ಸಂಸದ ಅರ್ಜುನ್ ಸಿಂಗ್ ಹೇಳಿದ್ದಾರೆ. ಮಮತಾ ಬ್ಯಾನರ್ಜಿ ಪುನಃ ಅಧಿಕಾರಕ್ಕೆ ಬರದಂತೆ ತಡೆಯಲು ಬಿಜೆಪಿ ಶತಾಯ ಗತಾಯ ಪ್ರಯತ್ನಿಸುತ್ತಿದ್ದು ಅಮಿತ್ ಶಾ ಸಂದರ್ಶನದ ವೇಳೆ ತೃಣಮೂಲ ಕಾಂಗ್ರೆಸ್ಸಿನ ಹಲವು ನಾಯಕರು ಬಿಜೆಪಿಗೆ ಪಕ್ಷಾಂತರಗೊಂಡಿದ್ದಾರೆ.