“ಬಿಜೆಪಿ ತ್ರಿವಳಿ ತಲಾಕ್ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸದೇ ಇರುವುದರ ಹಿಂದಿನ ಉದ್ದೇಶವಾದರೂ ಏನು?”-ಮುಸ್ಲಿಮ್ ಲಾ ಬೋರ್ಡ್ ಪ್ರಶ್ನೆ

0
755

ನವದೆಹಲಿ: ಅಖಿಲ ಭಾರತೀಯ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ವಿವಾದಾತ್ಮಕ ತ್ರಿವಳಿ ತಲಾಕ್ ಮಸೂದೆಯನ್ನು ಇದುವರೆಗೂ ಸಂಸತ್ತಿನ ವರಿಷ್ಠ ಸಮಿ ತಿಗೆ ಕಳುಹಿಸದೇ ಇರುವುದರ ಹಿಂದಿನ ಉದ್ದೇಶವಾದರೂ ಏನು? ಎಂದು ಪ್ರಶ್ನಿಸಿದೆ.

ಬಿಜೆಪಿಯ ಈ ನಡೆಗೆ ರಾಜ್ಯ ಸಭೆಯಲ್ಲಿ ವಿರೋಧ ಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಇದಾದ ಬೆನ್ನಲ್ಲೇ ಸರಕಾರವು ಮತ್ತೊಮ್ಮೆ ತ್ರಿವಳಿ ತಲಾಕ ಸುಗ್ರಿವಾಜ್ಞೆಯನ್ನು ಹೊರಡಿಸಿದ್ದು ತ್ರಿವಳಿ ತಲಾಕನ್ನು ಕ್ರಿಮಿನಲ್ ಪ್ರಕರಣವಾಗಿಯೇ ಇರಿಸಿ ಜಾಮೀನು ರಹಿತ ಜೈಲು ಶಿಕ್ಷೆಗೆ ಅನುಮೋದನೆಯನ್ನು ನೀಡಿದ್ದನ್ನು ಪರಿಷ್ಕರಿಸಿತಲ್ಲದೇ ಮ್ಯಾಜಿ ಸ್ಟ್ರೇಟ್ ನ್ಯಾಯಾಲಯದಲ್ಲಿ ಪ್ರಕರಣದ ಆಧಾರದ ಮೇಲೆ ಜಾಮೀನನ್ನು ನೀಡಬಹುದೆಂಬ ನಿಯಮವನ್ನು ಹೊರಡಿಸಿತು.

ಬಿಜೆಪಿಯ ಈ ನಡೆಯನ್ನು ಪ್ರಶ್ನಿಸಿದ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ತ್ರಿವಳಿ ತಲಾಕ್ ಬಿಲ್‍ಗೆ ಸಂಬಂಧಿಸಿದಂತೆ ತನ್ನ ಈ ಹಿಂದಿನ ನಿಲುವನ್ನು ಸಮರ್ಥಿಸಿಕೊಂಡಿದ್ದು, “ಬಿಜೆಪಿ ಸರಕಾರಕ್ಕೆ ಮುಸ್ಲಿಮ್ ಮಹಿಳೆ ಯರ ಕಲ್ಯಾಣದ ಕುರಿತಾದ ಯಾವುದೇ ಆಸಕ್ತಿ ಇಲ್ಲ. ಆದರೆ ಬಿಜೆಪಿಯ ಆಸಕ್ತಿಯು ಮುಸ್ಲಿಮ್ ಪುರುಷರನ್ನು ಜೈಲಿ ಗಟ್ಟಲು ಹಾಗೂ ಮುಸ್ಲಿಮರ ಕೌಟುಂಬಿಕ ಜೀವನವನ್ನು ಹಾಳುಗೆಡ ಹುದರಲ್ಲಿ ಆಸಕ್ತಿ ಇದೆ. ಒಂದು ವೇಳೆ ತ್ರಿವಳಿ ತಲಾಕ್ ಮಸೂದೆ ಜಾರಿಗೊಳ್ಳು ವುದೇ ಆದಲ್ಲಿ ದೇಶಕ್ಕೆ ಇದೊಂದು ಶಾಪವಾಗಿ ಪರಿಣಮಿಸಲಿದೆ. ಇಷ್ಟೆಲ್ಲ ವಿಷಯಗಳ ನಡುವೆಯೂ ಸರಕಾರವು ಆಯ್ಕೆ ಸಮಿತಿಗೆ ಈ ಮಸೂದೆಯನ್ನು ಕಳುಹಿಸಿ ಕೊಡದೇ ಇರುವುದರ ಹಿಂದಿನ ಉದ್ದೇಶವಾದರೂ ಏನು? ದೇಶದಲ್ಲಿ ಅಭಿವೃದ್ದಿ, ಭ್ರಷ್ಟಾಚಾರ ಮುಕ್ತ ರಾಜಕೀಯದ ಅಗತ್ಯತೆ ಇದೆಯೇ ಹೊರತು ತ್ರಿವಳಿ ತಲಾಕ್‍ನ ರಾಜಕೀಕರಣದ ಅಗತ್ಯತೆ ಇಲ್ಲ” ಎಂದು ಅದು ತಿಳಿಸಿದೆ.