ಐತಿಹಾಸಿಕ ತಪ್ಪನ್ನು ನಾವು ಸರಿಪಡಿಸಿದೆವು: ತ್ರಿವಳಿ ತಲಾಕ್ ಕುರಿತು ಅಮಿತ್‍ ಶಾ

0
424

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.19: ತರ್ಕ ರಹಿತ ಆಚಾರಗಳಲ್ಲಿ ಬದಲಾವಣೆ ಆಗಬೇಕಿದೆ. ಮುತ್ತಲಾಕನ್ನು ಕ್ರಿಮಿನಲ್ ಅಪರಾಧ ಮಾಡಿರುವುದು ಐತಿಹಾಸಿಕ ತಪ್ಪಿನ ತಿದ್ದುಪಡಿಯಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಲಿಂಗಸಮಾನತೆಯ ಭರವಸೆ ಕೊಡುವುದಕ್ಕಾಗಿ ಈ ಕಾನೂನು ನಿರ್ಮಿಸಲಾಯಿತು. ಮುತ್ತಲಾಕ್ ನಿಷೇಧ; ಐತಿಹಾಸಿಕ ತಪ್ಪು ತಿದ್ದುಪಡಿ ಎಂಬ ವಿಷಯದಲ್ಲಿ ಹೊಸದಿಲ್ಲಿ ಮಾವ್‍ಲಂಕರ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಮಿತ್ ಶಾ ಹೇಳಿದರು.

ಮುತ್ತಲಾಕ್ ಕ್ರಿಮಿನಲ್‍ ಕಾನೂನು ಮಾಡುವುದು ಬೇಡ, ಸಿವಿಲ್ ಕಾನೂನು ಮಾಡಿದರೆ ಸಾಕು ಎಂದು ಕಾಂಗ್ರೆಸ್ ಹೇಳುತ್ತಿದೆ.ಅಸದುದ್ದೀನ್ ಉವೈಸಿ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಕರಾರು ಆಗಿದೆ. ಆ ಒಪ್ಪಂದವನ್ನು ಹೇಗೆ ಕ್ರಿಮಿನಲ್ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ. ಸತಿ ಸಹಗಮನ, ಬಾಲ್ಯವಿವಾಹ ನಿಷೇಧಿಸಿದಾಗ ಯಾರೂ ಅದನ್ನು ವಿರೋಧಿಸಿರಲಿಲ್ಲ ಎಂದು ಶಾ ಹೇಳಿದರು. ಮುಸ್ಲಿಂ ಆಗಿಯೂ ಗುಲಾಮ್ ನಬಿ ಆಝಾದ್ ಮುತ್ತಲಾಕ್ ವಿರೋಧಿಸಿ ಬಿಜೆಪಿ ವಿರೋಧವಿದ್ದಾರೆ ಎಂದು ಶಾ ಆರೋಪಿಸಿದರು.

ಇಸ್ಲಾಮಿಕ್ ಕಾನೂನಿನಲ್ಲಿ ನಾವು ಹಸ್ತಕ್ಷೇಪ ಮಾಡುತ್ತಿದ್ದೇವೆ ಎಂದು ಆರೋಪಿಸಲಾಗುತ್ತಿದೆ. ಆದರೆ, ಪವಿತ್ರ ಕುರ್‍ಆನ್ ಮುತ್ತಲಾಕನ್ನು ಅಂಗೀಕರಿಸುವುದಿಲ್ಲ. 19 ದೇಶಗಳು ಇದನ್ನು ನಿಷೇಧಿಸಿದೆ. 1965ರಲ್ಲಿ ಹಲವು ದೇಶಗಳು ಇದನ್ನು ನಿಷೇಧಿಸಿವೆ. ಇದಕ್ಕಾಗಿ ಶಾಬಾನು ಹೋರಾಟ ಮಾಡಿದರು ಎಂದು ಶಾ ಹೇಳಿದರು.

ಆದರೆ, 400 ಸೀಟುಗಳೊಂದಿಗೆ ಪ್ರಧಾನಿಯಾದ ರಾಜೀವ್ ಗಾಂಧಿ ಸುಪ್ರೀಂಕೋರ್ಟಿನ ತೀರ್ಪನ್ನು ಬುಡಮೇಲು ಗೊಳಿಸಿ ಕಾನೂನು ತಂದರು. ಸುಪ್ರೀಂಕೋರ್ಟು ಮುತ್ತಲಾಕ್ ನಿಷೇಧಿಸಿದ ನಂತರವೂ ದೇಶದಲ್ಲಿ ಮುತ್ತಲಾಕ್ ನೀಡುವುದು ನಡೆಯುತ್ತಿತ್ತು. ಅದನ್ನು ಕ್ರಿಮಿನಲ್ ಕಾನೂನು ಮಾಡಿದರೆ ಕೊನೆಗೊಳಿಸಲು ಸಾಧ್ಯ ಎಂದು ಶಾ ಹೇಳಿದರು. ದಿಲ್ಲಿ ಮುಸ್ಲಿಂ ಪ್ರದೇಶದಿಂದ ನೂರಾರು ಮಹಿಳೆಯರನ್ನು ಕಾರ್ಯಕ್ರಮಕ್ಕೆ ತಂದು ಅಮಿತ್ ಶಾ ಭಾಷಣ ನೀಡಿದರು.