ದಾಂಧಲೆ ನಡೆಸಿದವರನ್ನು ರಕ್ಷಿಸಲು ಹೊರಟ ಡೊನಾಲ್ಡ್ ಟ್ರಂಪ್

0
583

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಕ್ಯಾಪಿಟಲ್ ಹಿಲ್ ಬಿಲ್ಡಿಂಗ್‍ನ ಅಹಿತಕರ ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ಅವರನ್ನು ಕಾನೂನು ಕ್ರಮಗಳಿಂದ ರಕ್ಷಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕ್ರಮ ಆರಂಭಿಸಿದ್ದು ಕ್ಷಮಿಸುವ ಹಕ್ಕು ಅಧ್ಯಕ್ಷರಿಗಿದೆ ಎಂದು ವಾದಿಸುತ್ತಿದ್ದಾರೆ.

ಈ ವಿಷಯದಲ್ಲಿ ವೈಟ್ ಹೌಸ್ ಕೌನ್ಸಿಲ್ ಪ್ಯಾಟ್ ಸಿಲೊಲೊನ್, ಸಹಾಯಕರು, ವಕೀಲರ ಸಹಿತ ಕಾನೂನು ತಜ್ಞರ ಸಲಹೆಯನ್ನು ಕೇಳಿದ್ದಾರೆ ಎಂದು ಸಿಎನ್‍ಎನ್ ವರದಿ ಮಾಡಿದೆ.

ಟ್ರಂಪ್ ಸ್ವಯಂ ಕ್ಷಮಾದಾನ ಮಾಡಿದರೆ ಅದು ಅಮೆರಿಕದರ ಇತಿಹಾಸದಲ್ಲಿ ಮೊದಲ ಘಟನೆಯಾಗಲಿದೆ ಎಂದು ವರದಿಯಾಗಿದೆ.

ಇದೇ ವೇಳೆ ಸ್ವಯಂ ಕ್ಷಮೆ ನೀಡುವ ಅಧಿಕಾರ ಅಧ್ಯಕ್ಷರಿಗಿದೆಯೇ ಎಂಬ ವಿಷಯದಲ್ಲಿ ಕಾನೂನು ತಜ್ಞರಲ್ಲಿ ಭಿನ್ನಾಭಿಪ್ರಾಯವಿದೆ. ಅಧ್ಯಕ್ಷನಿಗೆ ಸ್ವಯಂ ಕ್ಷಮೆ ನೀಡಲು ಆಗುವುದಿಲ್ಲ ಎಂದು ಜಸ್ಟಿಸ್ ಡಿಪಾರ್ಟ್‍ಮೆಂಟ್ ಕಾನೂನು ವಿವರ ನೀಡಿದೆ. ಆದರೆ ಅವರಿಗೆ ಆ ಸ್ಥಾನವನ್ನು ಕೈಬಿಟ್ಟು ಉಪಾಧ್ಯಕ್ಷರಿಗೆ ಹೊಣೆವಹಿಸಿಕೊಟ್ಟು ಕ್ಷಮೆ ನೀಡಲು ಹೇಳಬಹುದು . ಆದರೆ ಇದು ಕಾನೂನು ಟಿಪ್ಪಣಿಗೆ ಜೋಡಣೆಯಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಜಗತ್ತಿನ ಅತ್ಯಂತ ಹಳೆಯ ಪ್ರಜಾಪ್ರಭುತ್ವ ಎನ್ನಲಾಗುವ ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಜನರ ತೀರ್ಪನ್ನು ಮೀರಿ ನಿಲ್ಲಲು ಅಧ್ಯಕ್ಷರೇ ಅಕ್ರಮಕ್ಕೆ ಕರೆ ನೀಡಿದ್ದಾರೆ.

ಡೆಮಾಕ್ರಟಿಕ್ ಪಾರ್ಟಿಯ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‍ರ ಗೆಲುವನ್ನು ಒಪ್ಪಿಕೊಳ್ಳದೆ ಚುನಾವಣೆಯಲ್ಲಿ ಮೋಸ ಆಗಿದೆ ಎಂದು ನಿರಂತರ ಆಕ್ಷೇಪಿಸುತ್ತಿದ್ದ ಡೊನಾಲ್ಡ್ ಟ್ರಂಪ್, ವೈಟ್ ಹೌಸ್ ಸಮೀಪ ಒಟ್ಟುಗೂಡಿದ ಬೆಂಬಲಿಗರಿಗೆ ಕ್ಯಾಪಿಟಲ್‍ಗೆ ಹೋಗಲು ಹೇಳಿದ್ದರು. ಇದರ ವೀಡಿಯೊ ಈಗ ಬಹಿರಂಗವಾಗಿದೆ.