ಟ್ರಂಪ್ ಬೆಂಬಲಿಗರಿಂದ ಸಶಸ್ತ್ರ ಗಲಭೆ ಸಾಧ್ಯತೆ: FBI ಮುನ್ನೆಚ್ಚರಿಕೆ

0
169

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಕ್ಯಾಪಿಟಲ್ ಹಿಲ್ ದಾಳಿಯ ಬೆನ್ನಿಗೆ, ನಿಯೋಜಿತ ಅಧ್ಯಕ್ಷ ಜೊ ಬೈಡನ್ ಅಧಿಕಾರ ವಹಿಸಿಕೊಳ್ಳಲಿರುವ ಜನವರಿ 20ರವರೆಗೆ ಅಮೆರಿಕದಲ್ಲಿ ಟ್ರಂಪ್ ಬೆಂಬಲಿಗರಾದ ಬಲಪಂಥೀಯ ತೀವ್ರವಾದಿಗಳು ಸಶಸ್ತ್ರ ಗಲಭೆಗಿಳಿಯಬಹುದು ಎಂದು ಅಮೆರಿಕದ ತನಿಖಾ ಏಜೆನ್ಸಿ ಎಫ್‍ಬಿಐ ಮುನ್ನೆಚ್ಚರಿಕೆ ನೀಡಿದೆ.

ವಾಷಿಂಗ್ಟನ್‌ಡಿಸಿಯಲ್ಲದೆ 50 ರಾಜ್ಯಗಳ ರಾಜಧಾನಿಗಳಲ್ಲಿ ಗಲಭೆಗೆ ಸಿದ್ಧತೆ ನಡೆಯುತ್ತಿದೆ ಎಂಬುದಾಗಿ ವರದಿಯಾಗಿದೆ.

ಎಫ್‍ಬಿಐ ಮುನ್ನೆಚ್ಚರಿಕೆ ಬಂದ ಮೇಲೆ ಜುನವರಿ 24ರವರೆಗೆ ರಾಜಧಾನಿ ವಾಷಿಂಗ್ಟನ್‍ನಲ್ಲಿ ಅಧ್ಯಕ್ಷ ಟ್ರಂಪ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಆನ್‍ಲೈನ್ ಶೃಂಖಲೆ ಮೂಲಕ ಟ್ರಂಪ್ ಬೆಂಬಲಿಸುವ ತೀವ್ರವಾದಿಗಳು ಗಲಭೆಗೆ ಕರೆ ನೀಡಿದ್ದಾರೆ.

ಜನವರಿ 16 ರಿಂದ 20ರವರೆಗೆ ಗಲಭೆ ನಡೆಸಲು ಕರೆ ನೀಡಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ. ಕ್ಯಾಪಿಟಲ್ ಕಟ್ಟಡದ ಹೊರಗೆ ಪ್ರಮಾಣವಚನ ಕಾರ್ಯಕ್ರಮ ಇಡಲು ಬೈಡನ್ ಸಜ್ಜಾಗಿದ್ದಾರೆ. ಈ ವಿಷಯದಲ್ಲಿ ತಮಗೆ ಭಯವಿಲ್ಲ ಎಂದೂ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದರ ನಡುವೆ, ಹೋಮ್ ಲ್ಯಾಂಡ್ ಸುರಕ್ಷಾ ಸೇನೆಯ ಆ್ಯಕ್ಟಿಂಗ್ ಕಾರ್ಯದರ್ಶಿ ಚಾಡ್ ವೋಲ್ಫ್ ರಾಜೀನಾಮೆ ನೀಡಿದ್ದು ಪೀಟರ್ ಗೇಯ್ನರ್‌ಗೆ ಹೊಣೆಯನ್ನು ವಹಿಸಿಕೊಡಲಾಗಿದೆ.