‘ನಿಮ್ಮ ಅವಸಾನವಾಗಲಿದೆ’- ಇರಾನ್‍ಗೆ ಯುದ್ಧ ಬೆದರಿಕೆಯೊಡ್ಡಿದ ಡೊನಾಲ್ಡ್ ಟ್ರಂಪ್‍

0
569

ವಾಷಿಂಗ್ಟನ್,ಮೇ 20: ಅಮೆರಿಕ ಇರಾನ್ ವಿರುದ್ಧ ಯುದ್ಧ ಬೆದರಿಕೆಯೊಡ್ಡಿದ್ದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಅಮೆರಿಕದೊಂದಿಗೆ ಯುದ್ಧ ಮಾಡುವುದು ಇರಾನ್‍ನ ಯತ್ನವಾದರೆ ಅದು ಅವರ ಅವಸಾನಕ್ಕೆ ಕಾರಣವಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಮೆರಿಕವನ್ನು ಇನ್ನು ಮುಂದೆ ಬೆದರಿಸಲು ಶ್ರಮಿಸಿಬೇಡಿ ಎಂದೂ ಟ್ರಂಪ್ ಹೇಳಿದರು. ಎರಡು ದೇಶಗಳ ನಡುವೆ ಭಯಾನಕ ಯುದ್ಧ ಸ್ಥಿತಿ ನೆಲೆಯೂರಿದ್ದು ಟ್ರಂಪ್‍ರ ಹೇಳಿಕೆ ಅದನ್ನು ಇನ್ನಷ್ಟು ತೀವ್ರತೆಗೆ ತಂದು ನಿಲ್ಲಿಸಿತು. ಇರಾನ್‍ನೊಂದಿಗೆ ಯುದ್ಧವನ್ನು ಬಯಸಿಲ್ಲ ಎಂದು ಟ್ರಂಪ್ ನಿನ್ನೆ ಹೇಳಿದ್ದರು. ಇದರ ಬೆನ್ನಿಗೆ ಇರಾನ್‍ಗೆ ಸವಾಲೊಡ್ಡಿದ್ದಾರೆ. ಅಮೆರಿಕದೊಂದಿಗೆ ಯುದ್ಧಕ್ಕೆ ಯತ್ನಿಸಿದರೆ ಅದು ಇರಾನ್‍ನ ಅಧಿಕೃತ ಅವಸಾನವಾಗಲಿದೆ. ಇನ್ನು ಮೇಲೆ ಅಮೆರಿಕವನ್ನು ಬೆದರಿಸಲು ನೋಡಬೇಡಿ ಎಂದು ಟ್ರಂಪ್ ಟ್ವಿಟರ್‍‌ನಲ್ಲಿ ಬರೆದರು.

ಇರಾನ್ ವಿರುದ್ಧ ದಿಗ್ಬಂಧ ಬಲಪಡಿಸಿ ತೈಲಾಧಾರಿತ ಇರಾನಿನ ಆರ್ಥಿಕತೆಯನ್ನು ನಾಶಪಡಿಸುವುದು ಅಮೆರಿಕದ ಉದ್ದೇಶವಾಗಿದೆ. ಈಗಾಗಲೇ ಗಲ್ಫ್ ಕ್ಷೇತ್ರಕ್ಕೆ ಯುದ್ಧ ವಿಮಾನಗಳು ಮತ್ತು ಹಡಗುಗಳನ್ನು ಅಮೇರಿಕ ಕಳುಹಿಸಿದೆ. ಟ್ರಂಪ್‍ಗೆ ತೀರ ಟೀಕಾ ಪ್ರಹಾರ ಹರಿದು ಬಂದಿದೆ. ನೀವು ನಮ್ಮನ್ನು ಕೊಲ್ಲಲು ಬಂದಿದ್ದಾರಾ ಎಂದು ಕೆಲವರು ಕೇಳಿದ್ದಾರೆ. ಬರಾಕ್ ಒಬಾಮ ಆಡಳಿತದ ಕಾಲದಲ್ಲಿ ಇರಾನ್‌ಗೆ ದಾಳಿ ಮಾಡುವುದನ್ನು ವಿರೋಧಿಸಿದ್ದ ಟ್ರಂಪ್‍ರ ಟ್ವೀಟ್‍ಗಳ ಸ್ಕ್ರೀನ್‍ಶಾಟ್‍ಗಳನ್ನು ಕೆಲವರು ಟ್ವಿಟರ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.