ಅಮೆರಿಕನ್ ಸೇನೆಗೆ ಹಿಂದೆಡೆ: ಟರ್ಕಿ ಸೈನ್ಯ ಸಿರಿಯಾಕ್ಕೆ

0
450

ಸನ್ಮಾರ್ಗ ವಾರ್ತೆ

ಅಂಕಾರ,ಅ.9: ಕುರ್ದ್ ಬಂಡುಕೋರರ ವಿರುದ್ಧ ಹೋರಾಡಲು ಸಿರಿಯ-ಇರಾಕ್ ಗಡಿಗೆ ಟರ್ಕಿ ಸೇನೆಯನ್ನು ಕಳುಹಿಸಲು ಸಜ್ಜಾಗಿದೆ. ಸಿರಿಯದಲ್ಲಿ ಅಮೆರಿಕ ಸೇನೆಯನ್ನು ಹಿಂಪಡೆಯಲು ತೀರ್ಮಾನವಾದ ನಂತರ ಪರಿಸ್ಥಿತಿಯನ್ನು ಪರಿಗಣಿಸಿ ಉತ್ತರ ಗಡಿಗೆ ಟರ್ಕಿ ಸೇನೆಯನ್ನು ಕಳುಹಿಸುತ್ತಿದೆ.

ಗಡಿಯಲ್ಲಿ ಸಿರಿಯದ ಸೈನ್ಯದ ಜೊತೆಗೆ ಟರ್ಕಿ ಸೇನೆ ಕೂಡಲೇ ಸೇರಲಿದೆ ಎಂದು ಟರ್ಕಿ ಕಮ್ಯೂನಿಕೇಷನ್ ಡೈರಕ್ಟರ್ ಫಹ್ರತೈನ್ ಅಲ್‍ತೂಮ್ ತಿಳಿಸಿದರು. ಟರ್ಕಿಯ ಐಎಸ್ ವಿರುದ್ಧ ಹೋರಾಟ ತಡೆಯುವುದನ್ನು ನಿಲ್ಲಿಸಿ. ಇಲ್ಲದಿದ್ದರೆ ಪಕ್ಷ ಬದಲಿಸುವುದು ಇನ್ನು ಕುರ್ದ್‍ಗಳಿಗೆ ಇರುವ ಅವಕಾಶವಾಗಿದೆ ಎಂದು ಅವರು ತಿಳಿಸಿದರು.

ಸಿರಿಯದ ಡೆಮಕ್ರಾಟಿಕ್ ಪೋರ್ಸ್ ಜೊತೆ ಅಮೆರಿಕ ಸೇನೆಯ ಸಹಾಯಕರು ಕುರ್ದ್ ಭಿನ್ನಮತೀಯರು ಹೋರಾಡುತ್ತಾರೆ. ಸಿರಿಯದಿಂದ ಕುರ್ದ್ ಬಂಡುಕೋರರನ್ನು ತೆರವುಗೊಳಿಸುವುದು ಟರ್ಕಿಯ ಸೈನಿಕ ಕ್ರಮದ ಉದ್ದೇಶವಾಗಿದೆ.

ಇರಾಕ್-ಸಿರಿಯದ ಗಡಿಯಲ್ಲಿರುವ ಕುರ್ದ್‌ಗಳ ಸಂಚರಿಸುವ ಮಾರ್ಗವನ್ನು ತಡೆಯುವುದು ಟರ್ಕಿಯ ಮುಖ್ಯ ಉದ್ದೇಶವಾಗಿದೆ. ಸಿರಿಯದ ಈಶಾನ್ಯದಲ್ಲಿ ಕುರ್ದ್ ಅಲ್ಪಸಂಖ್ಯಾತ ವಿಭಾಗದ ಪ್ರಭಾವವಿದೆ. ಟರ್ಕಿ ಕುರ್ದ‌ಗಳ ವಿರುದ್ಧ ಕ್ರಮ ಜರಗಿಸುವುದನ್ನು ಜಾಗತಿಕ ರಾಷ್ಟ್ರಗಳು ವಿರೋಧಿಸಿ ರಂಗಪ್ರವೇಶಿಸಿವೆ.