ಸೌದಿಯೊಂದಿಗೆ ಸಂಬಂಧ ಸುಧಾರಣೆಗೆ ಚರ್ಚೆ: ಉರ್ದುಗಾನ್

0
339

ಸನ್ಮಾರ್ಗ ವಾರ್ತೆ

ಅಂಕಾರ,ನ.23: ಸೌದಿ ಅರೇಬಿಯದೊಂದಿಗೆ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ದೊರೆ ಸಲ್ಮಾನ್‍ರೊಂದಿಗೆ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಫೋನ್ ಮಾಡಿ ಚರ್ಚಿಸಿದ್ದಾರೆ. ಪತ್ರಕರ್ತ ಜಮಾಲ್ ಕಶೋಗಿ ಕೊಲೆಯ ಬಳಿಕ ಟರ್ಕಿ ಮತ್ತು ಸೌದಿಯ ನಡುವೆ ಅಪರೂಪಕ್ಕೊಮ್ಮೆ ಸಂಪರ್ಕವಿತ್ತು.

ರಿಯಾದ್‍ನಲ್ಲಿ ಶನಿವಾರ ಮತ್ತು ರವಿವಾರ ನಡೆಯುವ ಜಿ20 ಶೃಂಗದ ಹಿನ್ನೆಲೆಯಲ್ಲಿ ಉರ್ದುಗಾನ್ ದೊರೆ ಸಲ್ಮಾನ್‍ರೊಂದಿಗೆ ಫೋನ್ ಮೂಲಕ ಮಾತಾಡಿದರು. ಎರಡು ದೇಶಗಳು ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ದೊರೆ ಸಲ್ಮಾನ್ ಮತ್ತು ಉರ್ದುಗಾನ್‍ರು ಚರ್ಚಿಸಿದರು.

ಲಿಬಿಯ ಮತ್ತು ಸಿರಿಯ ಘರ್ಷಣೆಯಲ್ಲಿನ ನೀತಿಗಳು ಸಹಿತ ಸೌದಿ ಮತ್ತು ಟರ್ಕಿಯ ನಡುವೆ ಅಸಹಮತ ಇತ್ತು. ಆದರೆ, 2018ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಕರ್ತ ಜಮಾಲ್ ಕಶೋಗಿ ಇಸ್ತಾಂಬುಲ್ ಸೌದಿ ಕಾನ್ಸುಲೇಟ್‍ನಲ್ಲಿ ಕೊಲೆಯಾದ ಬಳಿಕ ಎರಡು ದೇಶಗಳ ನಡುವಿನ ಸಂಬಂಧ ಹಳಸಿಕೊಂಡಿತ್ತು.