ಟರ್ಕಿಯಲ್ಲಿ 20 ವರ್ಷಕ್ಕಿಂತ ಕೆಳಗಿನವರಿಗೆ ಕರ್ಫ್ಯೂ

0
272

ಸನ್ಮಾರ್ಗ ವಾರ್ತೆ

ಇಸ್ತಾಂಬುಲ್, ಎ.7: ಟರ್ಕಿಯಲ್ಲಿ ಕೊರೊನಾ ವ್ಯಾಪಿಸುವುದನ್ನು ತಡೆಯಲು ಟರ್ಕಿಯಲ್ಲಿ 20 ವರ್ಷಕ್ಕಿಂತ ಕೆಳಗಿನವರಿಗೆ ಕರ್ಫ್ಯೂ ಹೇರಲಾಗಿದೆ. ಶುಕ್ರವಾರ ಮಧ್ಯರಾತ್ರೆಯಿಂದ ಇದು ಜಾರಿಗೆ ಬರಲಿದೆ ಎಂದು ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಟೆಲಿವಿಷನ್ ಸಂದೇಶ ನೀಡಿದ್ದಾರೆ. ಇಸ್ತಾಂಬುಲ್, ಅಂಕಾರ ಸಹಿತ 31 ನಗರ ಗಡಿಯನ್ನು ಮುಚ್ಚಿಡಲಾಗುವುದು. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ವಾಹನ ಸಂಚಾರವನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಲಾಗಿದೆ. ಜನಸಂಚಾರ ಅಧಿಕವಿರುವ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ಕಡ್ಡಾಯವಾಗಿದೆ.

ಇದೇ ವೇಳೆ , ಕೊರೊನಾದಿಂದ ಟರ್ಕಿಯಲ್ಲಿ 425 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕ ಹೇಳಿದ್ದಾರೆ. ಟರ್ಕಿಯಲ್ಲಿ ಇದುವರೆಗೆ 20,921 ಮಂದಿಗೆ ಕೊರೊನಾ ದೃಢಪಟ್ಟಿದೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.