ತುರ್ಕಿ – ನವಯುಗದ ಆರಂಭ

0
372

@ ಪ್ರೊ| ಮುಹ್ಸಿನ್ ಉಸ್ಮಾನಿ


ತುರ್ಕಿಯಲ್ಲಿ ರಜಬ್ ಉರ್ದುಗಾನ್ ಚುನಾ ವಣೆಯನ್ನು ಗೆದ್ದು ತನ್ನ ಸ್ಥಾನವನ್ನು 8 ವರ್ಷ ಗಳಿಗೆ ಭದ್ರಪಡಿಸಿದರು. ಜನಸಾಮಾನ್ಯರು ಸುಧಾರಣೆಗಾಗಿ ಅವರ ಮೇಲೆ ವಿಶ್ವಾಸವಿಟ್ಟರು. ಕಮಾಲ್ ಅತಾತುರ್ಕ್‍ರ ಇಸ್ಲಾಮ್ ವಿರೋಧಿ ಸಂವಿಧಾನವನ್ನು ಉರ್ದುಗಾನ್ ಇಸ್ಲಾಮಿಗೆ ಅನುಕೂಲಕರವಾಗಿ ಮಾಡಬಹುದು. ಇದು ಅದ್‍ನಾನ್ ಮುಂದ್ರೀಸ್ ಅವರು ಸುಧಾರಣೆಗಾಗಿ ಟೊಂಕ ಕಟ್ಟಿ ನಿಂತಿದ್ದ ಹಾಗೂ ಸೆಕ್ಯುಲರ್ ಪ್ರವಾಹದ ವಿರುದ್ಧ ನಡೆಯಬಯಸಿದ್ದ 1950ರ ತುರ್ಕಿ ಆಗಿದೆ. ಅವರ ಪ್ರಯತ್ನದಿಂದ ಅಲ್ಲಿ ಅರಬಿ ಭಾಷೆಯಲ್ಲಿ ಅದಾನ್ ಮೊಳಗತೊಡಗಿತ್ತು. ಕುರ್‍ಆನ್ ಮತ್ತು ಅರಬಿ ಭಾಷೆಯ ಕಲಿಕೆಗೆ ಅನುಮತಿ ದೊರಕಿತ್ತು. ಆದರೆ ಈ ಸುಧಾರಣೆ ಗಳನ್ನು ಸೈನ್ಯದ ಮುಖ್ಯಸ್ಥರು ಸ ಹಿಸದಾದರು. ಅದ್‍ನಾನ್ ಮುಂದ್ರಿಸ್‍ಗೆ ಸೆರೆವಾಸದ ಶಿಕ್ಷೆ ವಿಧಿಸಲಾಯಿತು. ನಜ್ಮುದ್ದೀನ್ ಅರ್ಬಕಾನ್‍ರ ಹಿಝುಸ್ಸಲಾಮ್ 1977ರಲ್ಲಿ ಸರಕಾರ ಸ್ಥಾಪಿಸಿದಾಗ ಅಲ್ಲಾಹು ಅಕ್ಬರ್ ಘೋಷಣೆ ವಾತಾವರಣದಲ್ಲಿ ಮೊಳಗಿತು. ದೀರ್ಘಕಾಲದ ನಂತರ ಸೀರತು ನ್ನಬಿಯ ಸಮಾರಂಭಗಳು ಜರಗತೊಡಗಿದಾಗ ಇಸ್ಲಾಮಿನ ವಿರೋಧಿಗಳು ಪುನಃ 1980ರಲ್ಲಿ ಅರ್ಬಕಾನ್‍ರ ಸರಕಾರವನ್ನು ಬುಡಮೇಲು ಗೊಳಿಸಿದರು. ಇಸ್ಲಾಮೀ ಪಾರಿಭಾಷಿಕಗಳನ್ನು ಅಳಿಸಿ ಹಾಕಿದರು. ಆದರೆ ತುರ್ಕಿಯಲ್ಲಿ ಈಗ ಇಸ್ಲಾಮ್ ಪ್ರಿಯರಿಗೆ ನಿರಂತರ ವಿಜಯವಾಗುವು ದನ್ನು ನೋಡುವಾಗ ವಿಶ್ವಾಸಿಗಳಿಗೆ ದೇವನ ವತಿಯಿಂದ ಪ್ರತಾಪ ಇನ್ನೊಮ್ಮೆ ದೊರಕುವಂತೆ ಭಾಸವಾಗುತ್ತಿದೆ. ಅತ್ತ ಅರಬ್ ದೇಶಗಳ ರಾಷ್ಟ್ರ ನಾಯಕರು ಈ ಕ್ರಾಂತಿಯನ್ನು ಸ್ವಾಗತಿಸಲಿಲ್ಲ.
ಉರ್ದುಗಾನ್‍ರ ವಿಜಯವನ್ನು ಶ್ಲಾಘಿಸಲಿಲ್ಲ.
ಉರ್ದುಗಾನ್‍ರ ವಿಜಯವು ತುರ್ಕಿ ಜನತೆಯ ವಿಜಯವಾಗಿದೆ. ಅವರು ಜನಸಾಮಾನ್ಯರ ಜನಪ್ರಿಯ ನಾಯಕರಾಗಿದ್ದಾರೆ. ಏಕೆಂದರೆ, ಅವರು ತುರ್ಕಿಯನ್ನು ಆರ್ಥಿಕವಾಗಿಯೂ ತಾಂತ್ರಿಕ ವಾಗಿಯೂ ಅಭಿವೃದ್ಧಿಯ ಹೆದ್ದಾರಿಯಲ್ಲಿ ಕೊಂಡೊಯ್ದರು. ಉರ್ದುಗಾನ್‍ರ ಜನಪ್ರಿಯತೆ ಅರಬ್ ನಾಯಕರಿಗೆ ಏನೂ ಹಿಡಿಸಲಿಲ್ಲ. ಉರ್ದುಗಾನ್ ಮತ್ತವರ ಪಕ್ಷದ ವಿಜಯವು ಅಂಧಕಾರದ ಮಧ್ಯೆ ಪ್ರಕಾಶದ ಕಿರಣವಾಗಿದೆ. ದುರಂತ ಏನೆಂದರೆ, ಬೈತುಲ್ ಮಕ್ದಿಸ್ ಕೈತಪ್ಪಿ ಹೋದಾಗ ಅದರ ಬಗ್ಗೆ ಅರಬ್ ಜಗತ್ತು ತಲೆ ಕೆಡಿಸಿಕೊಳ್ಳಲಿಲ್ಲ. ಮುಸಲ್ಮಾನರು ವಾಸವಾಗಿರುವ ಪ್ರದೇಶಗಳಲ್ಲಿ ರಕ್ತದ ಹೊಳೆ ಹರಿಯುತ್ತಿದೆ. ಮುಸ್ಲಿಮ್ ಕೇರಿಗಳನ್ನು ಗುರಿಯಾಗಿಸಿ ಬಾಂಬು ದಾಳಿಗಳು ನಡೆಯುತ್ತಿವೆ. ಮುಸ್ಲಿಮ್ ದೇಶಗಳಲ್ಲಿ ಶವಗಳ ರಾಶಿ ಬೀಳುತ್ತಿವೆ. ಗಲ್ಫ್ ರಾಷ್ಟ್ರಗಳ ಬೃಹತ್ ಶಕ್ತಿಗಳೊಂದಿಗೆ ಸೇರಿ ಅರಬ್ ಕ್ರಾಂತಿಯ ಎಲ್ಲ ಮಾರ್ಗಗಳನ್ನೂ ಮುಚ್ಚಿಬಿಟ್ಟಿವೆ.
ನಮ್ಮ ಅರಬ್ ಲೋಕವೂ ವಿಚಿತ್ರ ಲೋಕ ವಾಗಿದೆ. ಅಲ್ಲಿನ ಸಂಪ್ರದಾಯಗಳೂ ಹಾಗೆಯೇ. ಜಗತ್ತಿನ ಎಲ್ಲ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಆಡ ಳಿತ ವ್ಯವಸ್ಥೆ ಇದೆ. ಆದರೆ ಅರಬ್ ಲೋಕದಲ್ಲಿ ವಂಶಾಡಳಿತ ಮತ್ತು ನಿರಂಕುಶ ಪ್ರಭುತ್ವವಿದೆ. ಎಲ್ಲ ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ಅರಬ್ ಜಗತ್ತಿನಲ್ಲಿ ಅದಕ್ಕೆ ನಿರ್ಬಂಧವಿದೆ. ಎಲ್ಲ ಕಡೆಗಳಲ್ಲಿ ಪ್ರತಿಯೊಬ್ಬ ನಿಗೂ ಭಿನ್ನಾಭಿಪ್ರಾಯದ ಮತ್ತು ಪ್ರತಿಭಟನೆಯ ಸ್ವಾತಂತ್ರ್ಯವಿದೆ. ಆದರೆ ಅರಬ್ ಲೋಕದಲ್ಲಿ ಅದಕ್ಕೆ ಅವಕಾಶವಿಲ್ಲ. 20 ಮತ್ತು 21ನೇ ಶತಮಾನದಲ್ಲಿ ಮುಸಲ್ಮಾನರು ಲೋಕದಲ್ಲಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ದೃಶ್ಯಗಳನ್ನು ನೋಡಿದಾಗ, ಇಸ್ಲಾಮೀ ಇತಿಹಾಸದಲ್ಲೂ ಆಡಳಿತಗಾರರನ್ನು ಚುನಾಯಿಸಲಾಗುತ್ತಿತ್ತು ಎಂಬ ಭಾವನೆ ಮುಸ ಲ್ಮಾನರಲ್ಲಿ ಮೂಡಿ ಅವರೂ ಇಸ್ಲಾಮೀ ಆಡಳಿತ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಬೇಡಿಕೆಯಿಟ್ಟಾಗ ಅರಬ್ ದೇಶಗಳ ನಿರಂಕುಶ ಮತ್ತು ಅಕ್ರಮಿ ಆಡಳಿತ ಪ್ರಭುಗಳಿಗೆ ಅದನ್ನು ಸಹಿಸಲಾಗಲಿಲ್ಲ. ಅವರು ಜಾಗತಿಕ ಶಕ್ತಿಗಳ ಸೂಚನೆಯಂತೆ ಕ್ರಾಂತಿ ಯತ್ನವನ್ನು ವಿಫಲ ಗೊಳಿ ಸಿದರು. ವಾಸ್ತವದಲ್ಲಿ ಪಾಶ್ಚಾತ್ಯ ಶಕ್ತಿಗಳು ಇಸ್ಲಾಮನ್ನು ಅಧಿಕಾರದಲ್ಲಿ ನೋಡಬಯಸುವುದಿಲ್ಲ. ಅರಬ್ ಆಡಳಿತಗಾರರು 24×7 HMV ಆಗಿ ಬೃಹತ್ ಶಕ್ತಿಗಳ ಸೂಚನೆಯಂತೆ ಕಾರ್ಯಾಚರಿ ಸುತ್ತಿವೆ. ಮುಸ್ಲಿಮ್ ದೇಶಗಳಲ್ಲಿ ಎಲ್ಲೆಲ್ಲ ಇಸ್ಲಾಮೀ ಕ್ರಾಂತಿಯ ಜ್ವಾಲಾಗ್ನಿ ಭುಗಿಲೆಳುತ್ತಿತ್ತೋ ಅಲ್ಲೆಲ್ಲ ತುರ್ಕಿ ಅವರಿಗೆ ಬೆಂಬಲವಾಗಿ ನಿಂತಿದೆ. ಅರಬ್ ಆಡಳಿತಗಾರರು ಎಲ್ಲ ಕಡೆಗಳಲ್ಲೂ ಕ್ರಾಂತಿಯನ್ನು ವಿಫಲಗೊಳಿಸಲು ಪ್ರಯತ್ನಿಸಿದರು. ಕ್ರಾಂತಿಯ ಕಿಡಿಯು ಮೊತ್ತಮೊದಲು ಟುನೀಶ್ಯಾದಲ್ಲಿ ಸ್ಫೋಟಗೊಂಡಿತು. ಝೈನುಲ್ ಆಬಿದೀನ್‍ನ ದಬ್ಬಾಳಿಕೆಯ ವಿರುದ್ಧ ಜನಸಾಮಾನ್ಯರು ಎದ್ದು ನಿಂತರು. ಗಲ್ಫ್ ದೇಶವೊಂದು ಝೈನುಲ್ ಆಬಿದೀನ್‍ಗೆ ಆಶ್ರಯ ನೀಡಿತು. ಆ ಸಂದರ್ಭದಲ್ಲಿ ರಜಬ್ ತ್ವಯ್ಯಬ್ ಉರ್ದುಗಾನ್ ಹೇಳಿದರು, ಟ್ಯುನೀಶಿಯನ್ನರು ಮಧ್ಯಪೂರ್ವದಲ್ಲಿ ಕ್ರಾಂತಿ ಮತ್ತು ಪರಿವರ್ತನೆಯ ಬಾಗಿಲನ್ನು ತೆರೆದರು. ಟ್ಯುನೀಶ್ಯಾದ ಎಲ್ಲ ರಂಗಗಳಲ್ಲಿ ನಾವು ನೆರವು ನೀಡುವೆವು. ಅವರು ಕೇವಲ ಬಾಯುಪಚಾರಕ್ಕಾಗಿ ಈ ಮಾತನ್ನು ಹೇಳಲಿಲ್ಲ. ಒಂದು ತಿಂಗಳ ಬಳಿಕ ತನ್ನ ವಿದೇಶ ಸಚಿವ ಅಹ್ಮದ್ ದಾವೂದ್ ಗುಲೂರವರನ್ನು ಟ್ಯುನೀಶ್ಯಾಕ್ಕೆ ಕಳಿಸಿದರು.
ಈಜಿಪ್ಟಿನ ಕ್ರಾಂತಿಯ ಆರಂಭವು 2011ರಲ್ಲಾಯಿತು. ಟ್ಯುನೀಶ್ಯಾದ ಜನತೆಯ ಯಶಸ್ವಿ ಬಂಡಾಯದಿಂದ ಸ್ಫೂರ್ತಿ ಪಡೆದ ಈಜಿಪ್ಟಿನ ಜನರೂ ಹುಸ್ನಿ ಮುಬಾರಕ್‍ರ ವಿರುದ್ಧ ಬೀದಿ ಗಿಳಿದರು. ಉರ್ದುಗಾನ್ ಈಜಿಪ್ಟ್‍ನ ಜನತೆಯ ಬೇಡಿಕೆಗಳನ್ನು ಬೆಂಬಲಿಸಿದರು. ಅವರು ಹುಸ್ನಿ ಮುಬಾರಕ್‍ರೊಂದಿಗೆ ಪ್ರಜಾಸತ್ತಾತ್ಮಕ ರೀತಿಯ ಚುನಾವಣೆ ನಡೆಸುವಂತೆ ಒತ್ತಾಯಿಸಿದರು. ಅವರು ಈಜಿಪ್ಟ್, ಟ್ಯುನೀಶ್ಯಾ ಮತ್ತು ಲಿ ಬಿಯಾಗಳಲ್ಲಿ ಬಾಹ್ಯ ಹಸ್ತಕ್ಷೇಪ ನಡೆಸುವುದಾಗಿಯೂ ಎಚ್ಚರಿಸಿದರು. ಮಾರ್ಚ್ 4ರಂದು ತುರ್ಕಿಯ ರಾಷ್ಟ್ರಪತಿ ಅಬ್ದುಲ್ಲಾ ಗುಲ್ ಈಜಿಪ್ಟ್‍ಗೆ ಭೇಟಿ ನೀಡಿದರು. ಅವರು ಇಖ್ವಾನುಲ್ ಮುಸ್ಲಿಮೂನ್‍ನ ನಾಯಕ ಡಾ| ಮುಹಮ್ಮದ್ ಬದೀಅïರನ್ನು ಭೇಟಿಯಾದರು. 2011ರ ಜೂನ್‍ನಲ್ಲಿ ಉರ್ದುಗಾನ್ ಇಸ್ತಾಂಬುಲ್‍ನಲ್ಲಿ ಈಜಿಪ್ಟ್ ಕ್ರಾಂತಿಯ ಯುವಕರ ನಿಯೋಗವನ್ನು ಸ್ವಾಗತಿಸಿ ಅವರಿಗೆ ಪ್ರವಾದಿಗಳ ಚಾರಿತ್ರ್ಯವನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಲಿಬಿಯಾದ ಕ್ರಾಂತಿಯ ವೇಳೆಯೂ ಉರ್ದುಗಾನ್‍ರ ನಿಲುವು ಈಜಿಪ್ಟ್ ಮತ್ತು ಟ್ಯುನೀಶ್ಯಾಕ್ಕಿಂತ ಭಿನ್ನವಾಗಿರಲಿಲ್ಲ. ಅವರು ಮುಅಮ್ಮರ್ ಗದ್ದಾಫಿಯನ್ನು ಅಧಿಕಾರ ಬಿಟ್ಟು ಕೊಡುವಂತೆ ವಿನಂತಿಸಿದರು. ಲಿಬಿಯಾ ಯಾರೋ ಒಬ್ಬನ ಅಥವಾ ಯಾವುದೋ ಕುಟುಂಬದ ಸೊತ್ತಲ್ಲವೆಂದು ಸ್ಪಷ್ಟವಾಗಿ ಸಾರಿದರು. ಸಿರಿಯಾದ ಕ್ರಾಂತಿಯ ಪ್ರಯತ್ನಗಳಲ್ಲೂ ಅವರು ಬಶಾರುಲ್ ಅಸದ್ ವಿರುದ್ಧ ಕಠಿಣ ನಿಲುವು ತಳೆದರು. ತನ್ನದೇ ಜನತೆಯನ್ನು ಕೊಲ್ಲುವುದಕ್ಕಾಗಿ ಖಂಡಿಸಿದರು. 40 ಲಕ್ಷ ಸಿರಿಯನ್ ನಿರಾಶ್ರಿತರಿಗೆ ತನ್ನ ನೆಲದಲ್ಲಿ ಆಶ್ರಯ ನೀಡಿದರು. ಅವರಿಗೆ ಉಳಕೊಳ್ಳುವ ಮತ್ತು ಉಣಿಸುವ ವ್ಯವಸ್ಥೆ ಮಾಡಿದರು ಮತ್ತು ಆದ್ಯಕಾಲದ ಇಸ್ಲಾಮೀ ಸಹೋದರತೆಯನ್ನು ಪುನಃ ನೆನಪಿಸಿದರು. ಯಮನ್‍ನಲ್ಲೂ ಉರ್ದುಗಾನ್, ಅಲೀ ಅಬ್ದುಲ್ಲಾ ಸಾಲೆಹ್‍ರೊಂದಿಗೆ ಕೂಡಲೇ ಅಧಿಕಾರ ತ್ಯಜಿಸುವಂತೆ ಎಚ್ಚರಿಸಿದರು. ಇಸ್ರೇಲ್‍ನ ಕುರಿತೂ ತುರ್ಕಿಯ ನಿಲುವು ಅರಬ್ ಆಡಳಿತಗಾರರಿಗೆ ವಿರುದ್ಧ ಮತ್ತು ಮುಸಲ್ಮಾನರ ಭಾವನೆಗಳಿಗೆ ಪೂರಕವಾಗಿತ್ತು. ತುರ್ಕಿ ಸೇನಾಡಳಿತದ ಇಸ್ರೇಲ್ ನೊಂದಿಗೆ ರಾಜತಾಂತ್ರಿಕ ಸಂಬಂಧ ಬಹುಕಾಲದಿಂದಿತ್ತು. ಆದರೆ 2009ರಲ್ಲಿ ಒಂದು ಸೇನಾಕವಾಯತು ತನ್ನ ನೆಲದಲ್ಲಿ ನಡೆಸುವುದನ್ನು ತುರ್ಕಿ ಮುಂದೂಡಿತು. ಏಕೆಂದರೆ, ಅದರಲ್ಲಿ ಇಸ್ರೇಲ್‍ನ ವಿಮಾನಗಳೂ ಭಾಗವಹಿಸುವುದರಲ್ಲಿತ್ತು. ಗಾಝಾದಲ್ಲಿ ಅಮಾಯಕ ಮಕ್ಕಳು ಮತ್ತು ನಿರಪರಾಧಿ ನಾಗರಿಕರ ಮೇಲೆ ಬಾಂಬು ಸುರಿಯುವ ವಿಮಾನಗಳನ್ನು ಅದರಲ್ಲಿ ಭಾಗವಹಿಸಗೊಡಲಾರೆವು ಎಂದು ಹೇಳಿಕೆ ನೀಡಿದರು. ಉರ್ದುಗಾನ್‍ರು ಫೆಲೆಸ್ತೀನಿನ ನಾಯಕ ಮತ್ತು ಹಮಾಸ್ ಮುಖಂಡ ಇಸ್ಮಾಈಲ್ ಹನಿಯ್ಯರಿಗೆ, ನಾವು ಎಷ್ಟು ಬೆಲೆ ತೆತ್ತಾದರೂ ನಿಮಗೆ ನೆರವಾಗುವೆವು ಎಂದು ಖಾತ್ರಿಪಡಿಸಿದರು. ಅದಕ್ಕೆದುರಾಗಿ ಅರಬ್ ಆಡಳಿತಗಾರರು ಅಮೇರಿಕ ಮತ್ತು ಇಸ್ರೇಲ್‍ನ ಚೇಲಾಗಳಾಗಿದ್ದರು. ಅವರು ಹಮಾಸನ್ನು ಭಯೋತ್ಪಾದಕ ಸಂಘಟನೆಯೆಂದು ಹೇಳುತ್ತಿದ್ದಾರೆ. ಅನಂತರ ಬಾಂಗ್ಲಾದೇಶದಲ್ಲಿ ಇಸ್ಲಾಮ್ ಪ್ರಿಯರಿಗೆ ಗಲ್ಲುಶಿಕ್ಷೆ ನೀಡಿದಾಗ ಉರ್ದುಗಾನ್ ಅದರ ವಿರುದ್ಧ ಪ್ರತಿಭಟಿಸಿದರು. ಅದೇ ರೀತಿ ರೋಹಿಂಗ್ಯಾ ಮುಸಲ್ಮಾನರ ಮೇಲೆ ಹಿಂಸೆ, ದೌರ್ಜನ್ಯ ನಡೆದಾಗ ಇದೇ ತುರ್ಕಿ ನಾಯಕ ಅದರ ವಿರುದ್ಧ ಧ್ವನಿಯೆತ್ತಿದರು.
ಉರ್ದುಗಾನ್, ಕಮಾಲ್ ಅತಾತುರ್ಕ್ ಹರಡಿರುವ ಮುಳ್ಳುಕಂಟಿಗಳನ್ನು ಹೆಕ್ಕುವ ಕೆಲಸವನ್ನು ಬಹಳ ಜಾಗರೂಕತೆಯಿಂದ ಮಾಡುತ್ತಿದ್ದಾರೆ. ಸದ್ಯ ಅರಬ್ ಲೋಕದಲ್ಲಿ ಎಲ್ಲೂ ಆಶಾದಾಯಕ ಸುದ್ದಿ ಕೇಳಿ ಬರುತ್ತಿಲ್ಲ. ಈಜಿಪ್ಟ್‍ನಲ್ಲಿ ಅಬ್ದುಲ್ ಫತ್ತಾಹ್ ಸೀಸಿ, ಹುಸ್ನಿ ಮುಬಾರಕ್ ಮತ್ತು ಜಮಾಲ್ ಅಬ್ದುನ್ನಾಸಿರ್‍ರ ದೌರ್ಜನ್ಯಗಳ ನೆನಪನ್ನು ನವೀಕರಿಸುತ್ತಿದ್ದಾರೆ. ಗಲ್ಫ್ ರಾಷ್ಟ್ರಗಳು ಅಮೇರಿಕ ಮತ್ತು ಇಸ್ರೇಲ್‍ನ ಮಡಿಲಿಗೆ ಬಿದ್ದಿವೆ. ಅವರು ಪವಿತ್ರ ಹರಮನ್ನು ಲಂಡನ್ ಮತ್ತು ವಾಷಿಂಗ್ಟನ್ ಮಾಡ ಹೊರಟಿದ್ದಾರೆ. ಈಗ ಹರಮಿನ ರಕ್ಷಣೆಗೆ ಲೋಕದ ಸರ್ವ ಮುಸ್ಲಿಮರು ಒಗ್ಗಟ್ಟಾಗಬೇಕು. ಶೈತಾನನ ವಿರುದ್ಧ ಹೋರಾಟ ಸಮುದಾಯ ಪ್ರತಿಯೊಬ್ಬ ಸದಸ್ಯನ ಕರ್ತವ್ಯವಾಗಿದೆ. ಉರ್ದುಗಾನ್ ನಿರೀಕ್ಷೆಯ ತಾರೆಯಾಗಿ ಇಸ್ಲಾಮಿನ ಪುನರುತ್ಥಾನದ ರೂವಾರಿಯಾಗಿ ಶೋಭಿಸುತ್ತಿದ್ದಾರೆ. ಅವರು ಇಸ್ತಾಂಬುಲ್‍ನ ಮೇಯರ್ ಆಗಿದ್ದಾಗ ಒಂದು ಸಭೆಯಲ್ಲಿ ತುರ್ಕಿ ಭಾಷೆಯಲ್ಲಿ ಒಂದು ಕವನ ಹಾಡಿದ್ದರು. ಅದರ ಅನುವಾದ ಹೀಗಿದೆ, 2,49,249 ಮಸೀದಿಗಳು ನಮ್ಮ ಬ್ಯಾರಕ್ ಆಗಿವೆ. ಗುಂಬಜಗಳು ನಮ್ಮ ಹೆಲ್ಮೆಟ್ ಆಗಿವೆ. ನಮ್ಮ ಮಿನಾರಗಳು ನಮ್ಮ ಈಟಿಗಳಾಗಿವೆ. ನಮ್ಮ ನಮಾಝಿಗಳು ನಮ್ಮ ಸೈನಿಕರಾಗಿದ್ದಾರೆ. ಇದು ನಮ್ಮ ಧರ್ಮವನ್ನು ರಕ್ಷಿಸುವ ಪವಿತ್ರ ಸೇನೆಯಾಗಿದೆ