ಡೊನಾಲ್ಡ್ ಟ್ರಂಪ್‍ ಖಾತೆಯನ್ನು ಶಾಶ್ವತ ರದ್ದುಪಡಿಸಿದ ಟ್ವಿಟರ್

0
384

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜ.9: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಟ್ವಿಟರ್ ರದ್ದುಪಡಿಸಿದೆ. ಅಮೆರಿಕದ ಪಾರ್ಲಿಮೆಂಟ್ ದಾಳಿಯ ನಂತರ ಟ್ವಿಟರ್ ಈ ಕಠಿಣ ನಿರ್ಧಾರಕ್ಕೆ ಬಂದಿದೆ. ಟ್ರಂಪ್‍ರ ಇತ್ತೀಚಿಗಿನ ಟ್ವೀಟ್‍ಗಳು ದಾಳಿಯನ್ನು ಪ್ರೋತ್ಸಾಹಿಸುವಂತಹದ್ದಾಗಿತ್ತು ಎಂದು ಟ್ವಿಟರ್ ಸ್ಪಷ್ಟಣೆ ನೀಡಿದೆ. ಜೊತೆಗೆ ಟ್ರಂಪ್ ಇಂಪೀಚ್ ಮಡುವ ಕ್ರಮಗಳೂ ಅಮೆರಿಕದಲ್ಲಿ ಆರಂಭವಾಗಿದ ಎಂದು ವರದಿಗಳಾಗಿವೆ. ಡೆಮಕ್ರಾಟ್‍ಗಳು ಟ್ರಂಪ್‍ರನ್ನು ಇಂಪೀಚ್ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಟ್ರಂಪ್ ಕೂಡಲೇ ರಾಜೀನಾಮೆ ತಯಾರಲ್ಲದಿದ್ದರೆ ಇಂಪೀಚ್‍ಮೆಂಟ್‍ನೊಂದಿಗೆ ಮುಂದಕ್ಕೆ ಹೋಗುತ್ತೇವೆ ಎಂದು ಸ್ಪೀಕರ್ ನ್ಯಾನ್ಸಿ ಪಲೊಸಿ ಹೇಳಿದರು. ಅಂತಿಮ ತೀರ್ಮಾನ ಅಮೆರಿಕನ್ ಕಾಂಗ್ರೆಸ್ಸಿನದ್ದಾಗಿರಲಿದೆ ಎಂದು ಅವರು ಹೇಳಿದರು.

ಬೈಡನ್‍ರ ಅಧ್ಯಕ್ಷರಾಗಿ ಅಧಿಕಾರವಹಿಸುವ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಟ್ರಂಪ್ ಈಗಾಗಲೇ ಘೋಷಿಸಿದ್ದಾರೆ. ಅಮೆರಿಕ ಪಾರ್ಲಿಮೆಂಟಿನಲ್ಲಿ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ್ದು ಇಡೀ ಅಮೆರಿಕದಲ್ಲೇ ನಡುಕಕ್ಕೆ ಕಾರಣವಾಗಿದೆ. ಜೊ ಬೈಡನ್ ಗೆಲುವಿಗೆ ಅಂಗೀಕಾರದ ಮುದ್ರೆಯೊತ್ತುವ ಸಲುವಾಗಿ ಅಮೆರಿಕ ಕಾಂಗ್ರೆಸ್ಸಿನ ಎರಡು ಸದನಗಳು ಸಭೆ ಸೇರಿದಾಗ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ್ದರು.

ಕ್ಯಾಪಿಟಲ್ ಕಟ್ಟಡದ ಮೇಲೆ ನಡೆದ ಅಕ್ರಮಗಳ ಹಿನ್ನೆಲೆಯಲ್ಲಿ ಟ್ರಂಪ್‍ರ ಖಾತೆಯನ್ನು ಹನ್ನೆರಡುಗಂಟೆಗಳವರೆಗೆ ಟ್ವಿಟರ್ ಈ ಹಿಂದೆ ಅಮಾನತುಗೊಳಿಸಿತ್ತು. ನಂತರ ಟ್ರಂಪ್ ಟ್ವೀಟ್‍ನ ನೀತಿಯನ್ನು ಉಲ್ಲಂಘಿಸಲು ತೊಡಗಿದಾಗ ಟ್ವಿಟರ್ ಖಾತೆಯನ್ನು ಮುಚ್ಚಿತ್ತು. ಟ್ರಂಪ್‍ರ ಫೇಸ್‍ಬುಕ್ ಪುಟವನ್ನೂ ಮುಟ್ಟುಗೋಲು ಹಾಕಲಾಗಿತ್ತು. ಪ್ರಜಾಪ್ರಭುತ್ವ ರೀತಿಯಲ್ಲಿ ಚುನಾಯಿತವಾದ ಒಂದು ಸರಕಾರವನ್ನು ಬುಡಮೇಲುಗೊಳಿಸಲು ಅಕ್ರಮಕ್ಕೆ ಟ್ರಂಪ್ ಕರೆಕೊಟ್ಟಿದ್ದಾರೆ ಎಂದು ಫೇಸ್‍ಬುಕ್ ಹೇಳಿದೆ. ಟ್ರಂಪ್‍ರ ಇನ್‌ಸ್ಟಾ‌ಗ್ರಾಂ ಅಕೌಂಟ್ ಕೂಡ ಮುಟ್ಟುಗೋಲಿನಲ್ಲಿದೆ.