9 ಮಂದಿಯನ್ನು ಕೊಂದ ಟ್ವಿಟರ್ ಕಿಲ್ಲರ್‌ನಿಂದ ತಪ್ಪೊಪ್ಪಿಗೆ

0
479

ಸನ್ಮಾರ್ಗ ವಾರ್ತೆ

ಟೋಕಿಯೊ,ಅ.1: ಜಪಾನಿನ ಟ್ವಿಟರ್ ಕಿಲ್ಲರ್ ತಕಾಹಿರೊ ಶಿರೈಶಿ 9 ಮಂದಿಯನ್ನು ಕೊಲೆ ಮಾಡಿರುವುದಾಗಿ ಕೋರ್ಟಿನಲ್ಲಿ ಒಪ್ಪಿಕೊಂಡಿದ್ದಾನೆ. ಆದರೆ ಶಿರೈಶಿಗೆ ಮರಣ ದಂಡನೆ ವಿಧಿಸಬಾರದು. ಆತ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದವರನ್ನು ಅವರ ಸಮ್ಮತಿಯೊಂದಿಗೆ ಕೊಲೆ ಮಾಡಿದೆಂದು ಆತನ ವಕೀಲರು ಕೋರ್ಟಿನಲ್ಲಿ ವಾದಿಸಿದರು.

29 ವರ್ಷದ ಶಿರೈಶಿ ಕೊಲೆ ಕೃತ್ಯವೆಸಗಿದ ಬಳಿಕ ಅವರ ಮೃತದೇಹದ ಭಾಗಗಳನ್ನು ತುಂಡರಿಸಿ ಕೋಲ್ಡ್ ಬಾಕ್ಸ್‌ನಲ್ಲಿ ಇರಿಸುತ್ತಿದ್ದ. ತುಂಡು ತುಂಡು ಮಾಡಿದ 9 ಮೃತದೇಹಗಳು ಮತ್ತು 240ಕ್ಕೂ ಹೆಚ್ಚು ಎಲುಬುಗಳ ತುಂಡುಗಳಿದ್ದ ಬಾಕ್ಸ್‌ಗಳನ್ನು ಪೊಳಸರು ಈತನ ಮನೆಯಿಂದ ವಶಪಡಿಸಿಕೊಂಡಿದ್ದಾರೆ. ಇವುಗಳನ್ನು ಮಾಲಿನ್ಯಗಳ ನಡುವೆ ಇರಿಸಲಾಗಿತ್ತು. ಈತನ ವಿರುದ್ಧ ಅತ್ಯಾಚಾರ ಪ್ರಕರಣವೂ ಇದೆ ಎಂದು ವರದಿ ತಿಳಿಸಿದೆ.

ನಾವು ಆತ್ಮಹತ್ಯೆ ಮಾಡುವುದಾಗಿ ಟ್ವೀಟ್ ಮಾಡಿದ 15 ರಿಂದ 26 ವರ್ಷದ ವಯಸ್ಸಿನವರನ್ನು ಟ್ವಿಟರ್‌ನಲ್ಲಿ ಸಂಪರ್ಕಿಸಿ ಆತ್ಮಹತ್ಯೆಗೆ ತಾನು ಸಹಾಯ ಮಾಡುವೆ ಅಥವಾ ನಿಮ್ಮ ಜೊತೆ ನಾನೂ ಸಾಯುವೆ ಎಂದು ನಂಬಿಸಿದ ಬಳಿಕ ಕೊಲ್ಲುತ್ತಿದ್ದ. ಟ್ವಿಟರ್‌ನಲ್ಲಿ ಬಲಿಪಶುಗಳನ್ನು ಹುಡುಕಿ ಕೊಲ್ಲುತ್ತಿದ್ದುದರಿಂದ ಶಿರೈಶಿಗೆ ಟ್ವಿಟರ್ ಕೊಲೆಗಡುಕ ಎಂದು ಹೆಸರು ಬಂದಿತ್ತು.

ಈತನ ವಿರುದ್ಧ ಆರೋಪ ಸಾಬೀತಾದರೆ ಈತನಿಗೆ ಮರಣದಂಡನೆಯಾಗಲಿದೆ. ಆದರೆ, ಕೊಲೆ ಮಾಡಿದ್ದು ಕೊಲ್ಲಲ್ಪಟ್ಟವರ ಒಪ್ಪಿಗೆಯಿಂದ ಎಂದು ಸಾಬೀತುಪಡಿಸುವ ಮೂಲಕ ಮರಣದಂಡನೆಯಿಂದ ವಿನಾಯಿತಿ ಪಡೆದು ಮತ್ತು ಆರು ತಿಂಗಳಿಂದ ಏಳು ವರ್ಷದ ವರೆಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು ವಕೀಲರ ಉದ್ದೇಶವಾಗಿದೆ. ಆದರೆ, ಜಪಾನಿನ ಒಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಕೊಲೆ ನಡೆದಿದ್ದು ಕೊಲ್ಲಲ್ಪಟ್ಟವರ ಸಮ್ಮತಿಯಿಂದಲ್ಲ ಎಂದು ಶುರೈಶಿ ಹೇಳಿಕೊಂಡಿದ್ದ.

ತನಗೆ ಆತ್ಮಹತ್ಯೆ ಮಾಡಬೇಕಾಗಿದೆ ಎಂದು ನಿರಂತರ ಟ್ವೀಟ್ ಮಾಡಿದ 23 ವರ್ಷದ ಯುವತಿ ಕಾಣೆಯಾದ ಬಳಿಕ ಸಹೋದರ ಯುವತಿಯ ಟ್ವಿಟರ್ ಖಾತೆ ಪರಿಶೀಲಿಸಿದ್ದ. ಆಗ ಶಂಕಾಸ್ಪದ ಟ್ವಿಟರ್ ಹ್ಯಾಂಡಲ್ ಆತನ ಗಮನಕ್ಕೆ ಬಂದಿತ್ತು. ನಂತರ ನಡೆದ ತನಿಖೆಯಲ್ಲಿ ಮೂರು ವರ್ಷದ ಬಳಿಕ ತಕಾಹಿರೊ ಶಿರೈಶಿ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ವರದಿ ತಿಳಿಸಿದೆ.