ಯುಎಇ ಕೋರ್ಟಿನ ತೀರ್ಪು ಇನ್ನು ಭಾರತದಲ್ಲಿಯೂ ಜಾರಿ

0
1059

ಸನ್ಮಾರ್ಗ ವಾರ್ತೆ

ದುಬೈ, ಜ. 20: ಯುಎಇ ಕೋರ್ಟಿನ ತೀರ್ಪುಗಳು ಇನ್ನು ಭಾರತದಲ್ಲಿಯೂ ಜಾರಿ ಮಾಡಲಾಗುವುದು ಎಂದು ಕೇಂದ್ರ ಸರಕಾರ ಪ್ರಕಟಣೆ ಹೊರಡಿಸಿದೆ. ಸಿವಿಲ್ ಪ್ರಕರಣಗಳ ತೀರ್ಪುಗಳನ್ನು ಜಾರಿಗೊಳಿಸುವುದು ಕೇಂದ್ರ ಕಾನೂನು ಸಚಿವಾಲಯದ ಪ್ರಕಟಣೆಯು ತಿಳಿಸುತ್ತಿದೆ. ಇಂತಹ ಪ್ರಕರಣದಲ್ಲಿ ತೀರ್ಪು ಜಾರಿಗೆ ಊರಿನ ಮುನ್ಸಿಫ್ ಕೋರ್ಟಿನಲ್ಲಿ ಕಕ್ಷಿಗಳೂ ಎಕ್ಸಿಕ್ಯೂಶನ್ ಪೆಟಿಶನ್ ನೀಡಿದರೆ ಸಾಲುತ್ತದೆ. ಹಿಂದೆ ಊರಿನ ಕೋರ್ಟಿನಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಿ ವಿಚಾರಣೆ ನಡೆಸಬೇಕಾಗಿತ್ತು. ಇದರೊಂದಿಗೆ ಹಣಕಾಸು ವ್ಯವಹಾರ ಸಹಿತ ಸಿವಿಲ್ ಪ್ರಕರಣಗಳಲ್ಲಿ ಅನಿವಾಸಿಗಳು ಊರಿಗೆ ಬಂದರೂ ದೂರುದಾರರಿಗೆ ಯುಎಇ ಕೋರ್ಟಿನ ತೀರ್ಪಿನೊಂದಿಗೆ ಮುಂದೆ ಸಾಗಲು ಅವಕಾಶವಿದೆ.

ಯುಎಇ ಫೆಡರಲ್ ಕೋರ್ಟಿನ ಅಡಿಯಲ್ಲಿ ಬರುವ ಅಬುಧಾಬಿ, ಶಾರ್ಜ, ಅಜ್ಮಾನ್ ಉಮ್ಮುಖೂವೈನ್ , ಫುಜೈರಗಳ ಫೆಡರಲ್, ಪಸ್ಟ್ ಇನ್ಸ್ಟನ್ಸ್ ಅಪೀಲು ಕೋರ್ಟಿನ ಮತ್ತು ಫೆಡರಲ್ ಸುಪ್ರೀಂಕೋರ್ಟಿನ ತೀರ್ಪು ಭಾರತದಲ್ಲಿ ಜಾರಿಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಭಾರತದ ಜಿಲ್ಲಾ ಕೋರ್ಟಿನ ತೀರ್ಪು ಆಗಿ ಇದನ್ನು ಪರಿಗಣಿಸಲಾಗುವುದು.