ಅನಿವಾಸಿಗಳು ದೇಶದ ಆಸ್ತಿ ಅವರನ್ನು ದೂರ ಇರಿಸಲು ಸಾಧ್ಯವಿಲ್ಲ: ಯುಎಇ ಸಚಿವ

0
515

ಸನ್ಮಾರ್ಗ ವಾರ್ತೆ

ದುಬೈ,ಜೂ.12: ಅನಿವಾಸಿಗಳು ದೇಶದ ಆಸ್ತಿಯಾಗಿದ್ದು ಅವರನ್ನು ದೂರವಿಡಲು ಸಾಧ್ಯವಿಲ್ಲ ಎಂದು ಯುಎಇ ಮೂಲಸೌಕರ್ಯ ಸಚಿವ ಅಬ್ದುಲ್ಲ ಬಿನ್ ಮುಹಮ್ಮದ್ ಬಿಲ್‌ಹೈಫ್ ಅಲ್ ನುಐಮಿ ಹೇಳಿದರು. ಟಿವಿ ಚ್ಯಾನೆಲ್‍ಗೆ ನೀಡಿದ ಸಂದರ್ಶನದಲ್ಲಿ ಅವರು ಮಾತಾಡುತ್ತಿದ್ದರು. ಕುವೈಟನ್‍ನಲ್ಲಿ ಅನಿವಾಸಿಗಳ ಸಂಖ್ಯೆ ಕಡಿಮೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸುವ ವೇಳೆ ಅನಿವಾಸಿಗಳನ್ನು ದೇಶದ ಆಸ್ತಿ ಎಂದು ಸಚಿವರು ಹೇಳಿದರು.

ಪ್ರತಿಭಾವಂತ ಅನಿವಾಸಿ ಕಾರ್ಮಿಕರು ಇರುವ ನಾಡು ಯುಎಇ. ಅವರು ದೇಶಕ್ಕೆ ಬೇಕು. ಕೊರೋನ ಹೆಚ್ಚು ಕಾಲ ಇರದು. ಜಗತ್ತು ಅದರಿಂದ ರಕ್ಷೆಹೊಂದಬಹುದು. ನುರಿತ ಕಾರ್ಮಿಕರನ್ನು ಈಗ ನಾವು ಕಳಕೊಂಡರೆ ನಂತರದ ಕಾಲದಲ್ಲಿ ವಿಷಾದಿಸಬೇಕಾಗುತ್ತದೆ. ಅನಿವಾಸಿಗಳೇ ಇರಲಿ, ಯುಎಇ ಪ್ರಜೆಗಳೇ ಆಗಲಿ ಅವರನ್ನು ಈ ಸಮಯದಲ್ಲಿ ಕೈ ಬಿಟ್ಟರೇ ನಂತರ ನಷ್ಟವೇ ಆಗಲಿದೆ. ಅವರನ್ನು ಸಂರಕ್ಷಿಸಲಾಗುವುದು. ಅಂದರೆ, ದೀರ್ಘ ರಜೆ ಬೇಕಿರುವ ಅನಿವಾಸಿಗಳಿಗೆ ಅವಕಾಶ ಕೊಡಲಾಗುವುದು ಎಂದು ಅವರು ಹೇಳಿದರು.

ಯುಎಇಯ ಆರ್ಥಿಕ ಮಾಂದ್ಯ ತಾತ್ಕಾಲಿಕವಾಗಿದೆ. ಇದರಿಂದೆಲ್ಲ ದೇಶ ದಡಸೇರುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು. ಕಳೆದ ವಷಧ್ ವರದಿಯ ಪ್ರಕಾರ ಯುಎಇಯಲ್ಲಿ 50 ಲಕ್ಷ ಅನಿವಾಸಿ ಕಾರ್ಮಿಕರಿದ್ದಾರೆ. ಕುವೈಟ್ ಅನಿವಾಸಿಗಳ ಸಂಖ್ಯೆಯನ್ನು ಶೇ.70ರಿಂದ ಶೇ.30ಕ್ಕಿಳಿಸಲು ಸರಕಾರದಲ್ಲಿ ಚಿಂತನೆ ನಡೆಯುತ್ತಿದೆ ಎಂದು ಸರಕಾರದ ವಕ್ತಾರ ತಿಳಿಸಿದ್ದರು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here