ಯುಎಇ: ಬೇಹುಗಾರಿಕಾ ಆರೋಪದಲ್ಲಿ ಜೀವಾವಧಿ ಶಿಕ್ಷೆಗೊಳಗಾದ  ಮ್ಯಾಥ್ಯೂ ಹೆಡ್ಜಸ್ ಗೆ ಕ್ಷಮಾದಾನ

0
229

ಬ್ರಿಟಿಷ್ ಸಂಶೋಧನಾ ವಿದ್ಯಾರ್ಥಿ  ಮ್ಯಾಥ್ಯೂ ಹೆಡ್ಜಸ್ ರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬಿಡುಗಡೆ ಮಾಡಿದೆ, ಬೇಹುಗಾರಿಕೆಗಾಗಿ ಕಳೆದ ವಾರ ಅವರಿಗೆ  ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಮೂವತ್ತೊಂದು ವರ್ಷದ ಹೆಡ್ಜಸ್ ಅವರನ್ನು  ಅಧ್ಯಕ್ಷರ ಕ್ಷಮೆ  ನಂತರ, ಸೋಮವಾರ ಬಿಡುಗಡೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಇ ಯ ರಾಷ್ಟ್ರೀಯ ದಿನದಂದು  ಅಧ್ಯಕ್ಷ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ ರಿಂದ ಕ್ಷಮಾಪಣೆ ದೊರೆತ 700 ಕ್ಕೂ ಹೆಚ್ಚು ಜನರಲ್ಲಿ ಇವರು ಒಬ್ಬರಾಗಿದ್ದಾರೆ .

 ಕ್ಷಮಾಪಣೆ  ಎಂಬುದು  ನಾವು ಆಲಿಸಿದ  ಅತ್ಯುತ್ತಮ ಸುದ್ದಿ ಎಂದು  ಹೆಡ್ಜಸ್ ಪತ್ನಿ ಡೇನಿಯಲ್ ತೇಜಾಡಾ ಟ್ವೀಟ್ ಮಾಡಿದ್ದಾರೆ. ತನ್ನ ಪತಿ ಬೇಹುಗಾರನೆಂಬುದನ್ನು ನಾನು ನಂಬಲ್ಲ ಎಂದು ಬಿಬಿಸಿಗೆ ತಿಳಿಸಿದರು.

ಅಂತರರಾಷ್ಟ್ರೀಯ ಒತ್ತಡ

ಉತ್ತರ ಇಂಗ್ಲೆಂಡ್ ನ ಡರ್ಹಮ್  ವಿಶ್ವವಿದ್ಯಾನಿಲಯದ ಮಧ್ಯಪ್ರಾಚ್ಯ ಅಧ್ಯಯನದಲ್ಲಿ ಡಾಕ್ಟರೇಟ್ ವಿದ್ಯಾರ್ಥಿಯಾಗಿರುವ  ಹೆಡ್ಜಸ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನಂತರ ಯುಎಇ  ಅಂತರರಾಷ್ಟ್ರೀಯ ಒತ್ತಡಕ್ಕೆ ಒಳಗಾಯಿತು.

ಎರಡು ವಾರದ ಸಂಶೋಧನಾ ಪ್ರವಾಸದ ನಂತರ ಅವರನ್ನು ಮೇ 5 ರಂದು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು.

ಹೆಡ್ಜಸ್ ಗೆ ಶಿಕ್ಷೆ ವಿಧಿಸಿರುವುದಕ್ಕೆ ಬ್ರಿಟನ್ ಆಕ್ಷೇಪ  ವ್ಯಕ್ತಪಡಿಸಿದ ನಂತರ, ಯುಎಇ ಈ ಕ್ರಮ ಕೈಗೊಂಡಿದೆ.

ಇದಕ್ಕಿಂತ ಮೊದಲು ತಾನು ಗೂಢಚಾರನೆಂಬುದನ್ನು  ಹೆಡ್ಜಸ್  ಒಪ್ಪಿಕೊಳ್ಳುವ   ಸಣ್ಣ ವಿಡಿಯೋ ತುಣುಕುಅಬುದಾಭಿ ಅಧಿಕಾರಿಗಳು ಬಿಡುಗಡೆ ಮಾಡಿದ್ದರು.
ಒಂದು ವೀಡಿಯೊ ತುಣುಕಿನಲ್ಲಿ  ಹೆಡ್ಜಸ್, MI-6 ನಲ್ಲಿ ತನ್ನನ್ನು ಕ್ಯಾಪ್ಟನ್ ಎಂದು ವಿವರಿಸುತ್ತಿದ್ದಾರೆ.

ಮತ್ತೊಂದು ತುಣುಕಿನಲ್ಲಿ  ಹೆಡ್ಜಸ್ ಯಾರೊಂದಿಗೋ  ಕಚೇರಿಯಲ್ಲಿ ಮಾತನಾಡುವುದನ್ನು ತೋರಿಸುತ್ತದೆ ಮತ್ತು ಹೀಗೆ ಹೇಳುತ್ತಿದ್ದಾರೆ : “ಸಂಶೋಧನೆಯು ಸುಲಭ ರೀತಿಯಲ್ಲಿ ಸಾಗಲು  ಇದು ಸಹಾಯ ಮಾಡುತ್ತದೆ. ನಂತರ ಅದು MI-6 ಆಗುತ್ತದೆ.” ಎಂದು ಸೇರಿಸುತ್ತಾರೆ.

“ಅವರು ಅರೆಕಾಲಿಕ ಪಿಎಚ್ ಡಿ  ಸಂಶೋಧಕರು ಮತ್ತು ಅರೆಕಾಲಿಕ ಉದ್ಯಮಿಯಾಗಿದ್ದರು, ಆದರೆ ಅವರು 100 ಪ್ರತಿಶತ ಪೂರ್ಣಾವಧಿಯ ರಹಸ್ಯ ಸೇವಾ ಕಾರ್ಯಕರ್ತರಾಗಿದ್ದಾರೆ” ಎಂದು ಯುಎಇಯ ನ್ಯಾಷನಲ್ ಮೀಡಿಯಾ ಕೌನ್ಸಿಲ್ ನ ಅಧಿಕಾರಿಯಾದ ಜಾಬರ್ ಅಲ್-ಲಮ್ಕಿ ಹೇಳಿದ್ದಾರೆ.

” ಹೆಡ್ಜಸ್  ತಪ್ಪಿತಸ್ಥರೆಂದು ತಿಳಿದುಬಂದಿದೆ. ಸೂಕ್ಷ್ಮ ಮಾಹಿತಿಯನ್ನು ಅವರು ಬಯಸಿದರು. ಅವರು ಯುಎಇಯ ರಾಷ್ಟ್ರೀಯ ಭದ್ರತೆಯ ಸೂಕ್ಷ್ಮ  ರಹಸ್ಯಗಳನ್ನು ತನ್ನವರಿಗಾಗಿ   ಕದಿಯಲು ಇಲ್ಲಿದ್ದರು ‘ಎಂದು ಅಲ್-ಲಮ್ಕಿ ಹೇಳಿದರು.

ಕ್ಷಮೆಯ ಸುದ್ದಿಗೆ ಬ್ರಿಟನ್ ನ  ವಿದೇಶಾಂಗ ಕಾರ್ಯದರ್ಶಿ  ಹರ್ಷ ವ್ಯಕ್ತಪಡಿಸಿದ್ದಾರೆ.

(ಸಂಕ್ಷಿಪ್ತವಾಗಿ )
ಮೂಲ: ಅಲ್ ಜಜೀರಾ ಮತ್ತು ಸುದ್ದಿ ಸಂಸ್ಥೆಗಳು
ಕನ್ನಡಕ್ಕೆ: ಆಯಿಷತುಲ್ ಅಫೀಫ