ಬುಲೆಟ್ ಟ್ರೈನ್ ಮರುಪರಿಶೀಲನೆ- ಮಹಾರಾಷ್ಟ್ರ ಮುಖ್ಯಮಂತ್ರಿ

0
603

ಸನ್ಮಾರ್ಗ ವಾರ್ತೆ-

ಮುಂಬೈ, ಡಿ. 2: ನರೇಂದ್ರ ಮೋದಿಯವರ ಕನಸಿನ ಯೋಜನೆಯಾದ ಬುಲೆಟ್ ಟ್ರೈನ್ ಅನ್ನು ಮರುಪರಿಶೀಲನೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕರೆ ಹೇಳಿದರು. ರಾಜ್ಯದಲ್ಲಿ ಈಗ ನಡೆಯುವ ಅಭಿವೃದ್ಧಿ ಯೋಜನೆಗಳ ಮರು ಅವಲೋಕನ ನಡೆಯುವುದು. ಮುಂಬೈ ಅಹ್ಮದಾಬಾದ್ ರೂಟಿನ ಜಪಾನ್ ತಂತ್ರಜ್ಞಾನದ ಬುಲೆಟ್ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಮಹಾರಾಷ್ಟ್ರವನ್ನು ಜನಸಾಮಾನ್ಯರ ಸರಕಾರ ಆಳುತ್ತಿದೆ. ನೀವು ಕೇಳಿದಂತೆ ಬುಲೆಟ್ ರೈಲು ಯೋಜನೆಯ ಮರುಪರಿಶೀಲನೆ ನಡೆಯಲಿದೆ. ಆದರೆ, ಯೋಜನೆಯನ್ನು ಸಂಪೂರ್ಣ ನಿಲ್ಲಿಸುವುದೆ ಎಂದು ಈಗ ಹೇಳಲು ಸಮಯವಾಗಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದರು.

ಇದೇವೇಳೆ, ರಾಜ್ಯದ ಆರ್ಥಿಕತೆ ಕುರಿತು ಉದ್ಧವ್ ಸರಕಾರ ಶ್ವೇತ ಪತ್ರ ಹೊರಡಿಸಿದೆ. ಐದು ಲಕ್ಷ ಕೋಟಿ ರೂ. ರಾಜ್ಯ ಸರಕಾರದ ಒಟ್ಟು ಸಾಲ ಎಂದು ಹೇಳಿದೆ. ಆದರೂ ರೈತರ ಸಾಲ ಮನ್ನಾ ಪರಿಗಣಿಸಲಾಗುವುದು ಎಂದು ಶಿವಸೇನೆ ಸರಕಾರ ಹೇಳಿದೆ.