ಉಯಿಗುರ್ ಮುಸ್ಲಿಮರನ್ನು ಶುದ್ಧೀಕರಿಸುತ್ತಿರುವ ಚೀನ

0
499

ಚೀನದ ಸಿಂಜಿಯಾಂಗ್ ಪ್ರಾಂತದ ಉಯಿಗುರ್ ವಂಶದ ಮುಸ್ಲಿಮರು ಎಲ್ಲವನ್ನು ಬಿಟ್ಟುಬಿಡಬೇಕೆಂದು ಚೀನದ ಆಡಳಿತಗಾರರು ಹೇಳುತ್ತಿದ್ದಾರೆ. ಅಂದರೆ ಅವರು ಕಮ್ಯೂನಿಸ್ಟೀಕರಣ ಕ್ಕಾಗಿ ನಡೆಸುವ ವಂಶೀಯ ಶುದ್ಧೀಕರಣ ಇದು. ಅವರ ಕ್ರಮಗಳು ಬಹಳ ಕ್ರೂರವಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಲೂ ಇವೆ.

ಅಮೆರಿಕದಲ್ಲಿ ಅನಿವಾಸಿ ಗಳಾಗಿರುವ ಟಿಬೆಟಿಯನ್ ಮತ್ತು ಉಯುಗುರ್ ವಂಶೀಯರ ನೇತೃತ್ವದಲ್ಲಿ ಕಳೆದವಾರ ವಿಶ್ವಸಂಸ್ಥೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಚೀನದ ಉತ್ತರ ಭಾಗದ ಕಜಕಿಸ್ತಾನ, ಕಿರ್ಗಿಸ್ತಾನ, ಮಂಗೋಲಿಯ, ಪಾಕಿಸ್ತಾನ, ಅಫ್ಘಾನಿಸ್ತಾನ ಮೊದಲಾದ ದೇಶಗಳ ಜೊತೆ ಸಿಂಜ್ಯಂಗ್ ಪ್ರಾಂತ ಗಡಿಯನ್ನು ಹೊಂದಿದೆ. ಇಲ್ಲಿ ಉಯಿಗುರ್ ಮುಸ್ಲಿಮರು ಹೆಚ್ಚಿದ್ದಾರೆ. ಚೀನದ ದೊಡ್ಡ ಪ್ರಾಂತವಾದ ಸಿಂಜ್ಯಾಂಗ್‍ನಲ್ಲಿ ಪ್ರಾಕೃತಿಕ ಸಂಪನ್ಮೂಲಗಳು ಅಪಾರ ಇವೆ. ಪ್ರಾಚೀನವಾದ ಸಿಲ್ಕ್ ರೂಟ್ ದಾಟಿ ಹೋಗುವುದು ಈ ಪ್ರಾಂತದಲ್ಲೇ. ಚೀನದ ಬೆಲ್ಟ್‍ರೋಡ್ ಯೋಜನೆಯ ಕೇಂದ್ರ ಕೂಡ ಸಿಂಜ್ಯಾಂಗ್ ಆಗಿದೆ. ಹೀಗೆ ಚೀನಕ್ಕೆ ಈಪ್ರಾಂತ ಬಹಳ ಪ್ರಧಾನ ಪ್ರದೇಶವಾಗಿದೆ. ಆದರೆ ಕಮ್ಯುನಿಸ್ಟ್ ಅಂಗಿ ಧರಿಸಿದ ಚೀನದ ಹಾನ್ ವಂಶೀಯರಿಗೂ ಸಿಂಜ್ಯಾಂಗ್ ಜನರಿಗೂ ಆಶಯದಲ್ಲಾಗಲಿ ಭಾವನಾತ್ಮಕ ನೆಲೆಯಲ್ಲಾಗಲಿ ಸಂಬಂಧಗಳಿಲ್ಲ. ಈ ಜನರನ್ನು ಚೀನದ ಆಡಳಿ ತಗಾರರು ಯಾವಾಗಲೂ ಶತ್ರುಗಳಂತೆ ನೋಡುತ್ತಿದ್ದರು. ಈ ನಿಲುವು ಅದರ ಅತ್ಯಂತ ಕ್ರೂರವಾದ ಮುಖವನ್ನು ತೋರಿಸತೊಡಗಿದ ಅನುಭವಗಳು ಮುಂದಿನ ದಿವಸಗಳಲ್ಲಿ ಅಲ್ಲಿಂದ ಬರತೊಡಗಿತು.

ಹತ್ತು ಲಕ್ಷದಷ್ಟು ಉಯಿಗುರ್ ವಂಶಸ್ಥರನ್ನು ವಿವಿಧ ಜೈಲುಗಳಲ್ಲಿ ಇರಿಸಲಾಗಿದೆ ಎಂದು ಜಿನೀವಾ ಕೇಂದ್ರವಾಗಿರುವ ವಿಶ್ವಸಂಸ್ಥೆಯ ಮಾನವಹಕ್ಕು ಸಮಿತಿ ಹೇಳಿದೆ. ಆದರೆ ಇದನ್ನು ಜೈಲು ಕೇಂದ್ರಗಳಲ್ಲ, ರಾಷ್ಟ್ರೀಯ ಪುನಶ್ಚೇತನಾ ಕೇಂದ್ರಗಳೆಂದು ಚೀನ ಹೇಳುತ್ತಿದೆ. ಲಕ್ಷಾಂತರ ಮನುಷ್ಯರನ್ನು ಕೊಂದ ಮಾವೊರ ಯೋಜನೆಗೆ ಮಹಾನ್ ಸಾಂಸ್ಕೃತಿಕ ಕ್ರಾಂತಿ ಎಂದು ಚೀನದ ಕಮ್ಯುನಿಸ್ಟರು ಹೆಸರಿಸಿದ್ದರು. ಪುನಶ್ಚೇತನಾ ಎಂದರೆ ಹೇಗೆ ಗೊತ್ತೆ? ನಮಾಝ್ ಉಪವಾಸದಂತೆ ಧಾರ್ಮಿಕ ಚಿಹ್ನೆಗಳನ್ನು ಗಡ್ಡ ಟೋಪಿ ಹಿಜಾಬ್ ಮೊದಲಾದ ಪ್ರತೀಕಗಳನ್ನು ಮಾತ್ರವಲ್ಲ ಮಕ್ಕಳಿಗೆ ತಾವು ಬಯಸಿದ ಹೆಸರಿಡುವುದಕ್ಕೆ ಕೂಡ ನಿಷೇಧ ಹೇರಲಾಗುತ್ತಿದೆ. ಸರಕಾರ ಕಪ್ಪುಪಟ್ಟಿಗೆ ಸೇರಿಸಿದ ಹೆಸರುಗಳನ್ನು ಮಕ್ಕಳಿಗೆ ಇಟ್ಟರೆ ಜನನ ಸರ್ಟಿಫಿಕೆಟ್ ಕೂಡ ಸಿಗುವುದಿಲ್ಲ ಎಂದು ಮಾನವಹಕ್ಕು ಸಂಘಟನೆಗಳು ಹೇಳುತ್ತವೆ.

ಚೀನವನ್ನು ಮತ್ತಷ್ಟು ಕೆಂಪಾಗಿಟ್ಟುಕೊಂಡರೆ ಜಗತ್ತಿನಲ್ಲಿ ಇನ್ನಷ್ಟು ಎತ್ತರಕ್ಕೇರಿ ಅಬಾಧಿತರಾಗು ತ್ತೇವೆ ಎಂದು ಆಡಳಿತ ನಡೆಸುವವರು ಊಹಿಸಿ ದ್ದಾಗಿರಬಹುದು. 1966ರಲ್ಲಿ ಇಂತಹದ್ದೊಂದು ಕ್ರಾಂತಿ ತಂದು ಲಕ್ಷಾಂತರ ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಮಾವೊತ್ಸೆತುಂಗ್‍ರು ರಾಷ್ಟ್ರೀಯ ಶಾಲೆಗಳನ್ನು ಮುಚ್ಚಿಹಾಕಿ ಕಮ್ಯೂನಿಸ್ಟ್ ಶಾಲೆಗಳನ್ನು ತೆರೆದರು. ಈಗ ಇದೇ ಮಾದರಿಯನ್ನು ಸಿಂಜ್ಯಾಂಗ್‍ನಲ್ಲಿ ಜಾರಿಗೊಳಿಸಲು ಚೀನ ಯತ್ನಿಸುತ್ತಿದೆ. ಕೆಂಪು ಸಂಸ್ಕೃತಿ ಅದರ ಹವಣಿಕೆ ಯಾಗಿದೆ. ಒಂದು ಶವಸಂಸ್ಕಾರ ಕ್ರಿಯೆಯಲ್ಲಿ ಪವಿತ್ರ ಕುರ್‍ಆನ್‍ನ ಒಂದು ಸೂಕ್ತವನ್ನು ಓದಿದ್ದ ಕ್ಕಾಗಿ ಚೀನದ ಪೊಲೀಸರು ತನ್ನನ್ನು ಬಂಧಿಸಿದರು ಎಂದು 41 ವರ್ಷದ ಅಬ್ದುಸ್ಸಲಾಂ ಮುಹಮ್ಮದ್ ಹೇಳುತ್ತಾರೆ.

ಇಸ್ಲಾಮಿನ ಮೇಲೆ ಉಯಿಗುರ್‍ಗಳ ವಿಧೇಯತೆಯನ್ನು ಇಲ್ಲದಾಗಿಸಿ ಕೆಂಪು ಚೀನದ ಅಧೀನಕ್ಕೆ ಅವರನ್ನು ಒಳಪಡಿಸುವ ಕೆಂಪುಕ್ರಾಂತಿ ನಡೆಯುತ್ತಿದೆ. ತನ್ನನ್ನು ಬಂಧಿಸಿದ ನಂತರ ಹತ್ತಿರದ ಕ್ಯಾಂಪಿಗೆ ತರಲಾಯಿತಲ್ಲದೆ, ಅಬ್ದುಸ್ಸಲಾಂ ತನ್ನ ಹಿಂದಿನ ಇಸ್ಲಾಮೀ ಜೀವನವನ್ನು ಮರೆತು ಬಿಡಲು ಅಧಿಕಾರಿಗಳು ಬಲವಂತಪಡಿಸಿದ್ದಾರೆ, ತನ್ನ ಜೊತೆಯಲ್ಲಿದ್ದ 30 ಮಂದಿಯನ್ನು ಇಸ್ಲಾಮನ್ನು ಮರೆತು ಬಿಡುವಂತೆ ಚೈನೀಸ್ ಅಧಿಕಾರಿಗಳು ಬಲವಂತಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಚೀನದ ಪುನಶ್ಚೇತನಾ ಕ್ಯಾಂಪಿನಿಂದ ಹೇಗೋ ತಪ್ಪಿಸಿಕೊಂಡು ಬಂದವರು ಇಂತಹ ಒಂದೊಂದೇ ಅನುಭವಗಳನ್ನು ವಿವರಿಸುತ್ತಾರೆ. ಚೀನದ ಭಾಷೆಯಲ್ಲಿ ಪುನಶ್ಚೇತನಾ ಕ್ಯಾಂಪ್ ಎಂಬುದು ರಾಷ್ಟ್ರೀಯತೆಯನ್ನು ಕಲಿಸುವ ಪಾಠ ಶಾಲೆ. ಇಲ್ಲಿ ಬಲವಂತದಿಂದ ಕಮ್ಯುನಿಸ್ಟ್ ಪಾರ್ಟಿಯ ಪ್ರಶಂಸೆಗಳನ್ನು ಮುಸ್ಲಿಮರೊಳಗೆ ತಳ್ಳಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ. ಕಮ್ಯುನಿಸ್ಟ್ ಹಾಡುಗಳು, ಭಾಷಣಗಳು, ಮುಸ್ಲಿಮರ ಅಸ್ತಿತ್ವ ಇಲ್ಲದಂತಾಗಿಸಲು ಬೇಕಾದ್ದನ್ನೆಲ್ಲ ಇಲ್ಲಿ ಮಾಡಲಾಗುತ್ತಿದೆ.

ಸಿಂಜ್ಯಾಂಗ್ ಜನಸಂಖ್ಯೆಯನ್ನು ನಾಶಪಡಿಸುವ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಕೂಡ ಚೀನದ ಸರಕಾರ ನಡೆಸುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಇಷ್ಟೇ ಅಲ್ಲ, ದೇಶದ ಇತರ ಭಾಗಗಳಿಂದ ಹಾನ್ ವಂಶೀಯರನ್ನು ಸಾಮೂಹಿಕ ವಾಗಿ ಸಿಂಜ್ಯಾಂಗ್‍ಗೆ ಕರೆತಂದು ವಾಸಿಸುವಂತೆ ಸರಕಾರ ಮಾಡುತ್ತಿದೆ. ಒಂದು ರೀತಿಯ ಅತಿಕ್ರಮಣವಿದು ಅಥವಾ ಇಸ್ರೇಲಿನಂತೆ ವಂಶೀಯ ನಿರ್ಮೂಲನದ ಯತ್ನ ಇದು. ಹತ್ತು ವರ್ಷ ಗಳಿಂದೀಚೆಗೆ ಈ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಸಿಂಜ್ಯಾಂಗ್‍ನ ಹಾನ್ ಜನಸಂಖ್ಯೆ ಯನ್ನು ಶೇ. 38ಕ್ಕೆ ತಲುಪಿಸಲು ಚೀನದ ಸರಕಾರ ಹಾನ್ ವಂಶೀಯರನ್ನು ಎಲ್ಲ ರೀತಿಯ ಅನುಕೂಲತೆಗಳನ್ನು ಕೊಟ್ಟು ಸಿಂಜ್ಯಾಂಗ್‍ನಲ್ಲಿ ಉಳಿದುಕೊಳ್ಳುವಂತೆ ಮಾಡಲು ನೋಡುತ್ತಿದೆ. ಉಯಿಗುರ್ ವಂಶೀಯರನ್ನು ಕೇರಿಗಳೊಳಗೆ ತಳ್ಳಿಹಾಕಿ ಜೀವನವನ್ನೇ ದುಸ್ಸಾಹಸವನ್ನಾಗಿ ಮಾಡಲಾಗುತ್ತಿದೆ. ಇದು ಸೃಷ್ಟಿಸುವ ಸಂಘರ್ಷಗಳು ಹಲವು ಕಡೆ ಕಂಡುಬರುತ್ತಿವೆ. ಸರಕಾರಿ ಬೇಟೆಗೆ ಹೆದರಿ ನೂರಾರು ಉಯಿಗುರುಗಳು ಈಗಾಗಲೇ ನೆರೆಯ ರಾಷ್ಟ್ರಗಳಿಗೆ ಪಲಾಯನ ಮಾಡುತ್ತಿದ್ದಾರೆ. ಅವರಲ್ಲಿ ಹಲವರು ಯುರೋಪಿನ ವಿವಿಧ ದೇಶಗಳಲ್ಲಿ ರಾಜಕೀಯ ಆಶ್ರಿತರಾಗಿ ಬ ದುಕು ತ್ತಿದ್ದಾರೆ. ವಿವಿಧ ಉಯಿಗುರ್ ಸಂಘಟನೆಗಳು ಸರಕಾರದಿಂದಾಗುವ ಕ್ರೂರವಾದ ಮಾನವಹಕ್ಕು ಉಲ್ಲಂಘನೆಗಳನ್ನು ಅಂತಾರಾಷ್ಟ್ರೀಯ ಸಮುದಾ ಯದ ಮುಂದೆ ತರುತ್ತಿವೆ.

ಮುಸ್ಲಿಂ ಲೋಕದಲ್ಲಿ ಸಾಮಾನ್ಯವಾಗಿ ಮಧ್ಯಪ್ರಾಚ್ಯದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅನೈಕ್ಯತೆ, ಅನಿಶ್ಚಿತತೆಗಳಿಂದಾಗಿ ಉಯಿಗುರ್ ಸಮಸ್ಯೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟಾಗಿ ಪ್ರತಿಫಲನಗೊಳ್ಳುತ್ತಿಲ್ಲ. ಈ ವಿಷಯದಲ್ಲಿ ತತ್ವಾಧಾ ರಿತವಾಗಿ ಧ್ವನಿಯೆತ್ತುವ ಟರ್ಕಿಗೆ ಉಯಿಗುರ್ ವಂಶೀರಯ ಕುರಿತು ಮಧ್ಯ ಪ್ರವೇಶಿಸುವಲ್ಲಿ ಇತಿ ಮಿತಿಗಳಿವೆ. ಟರ್ಕಿಯ ಆರ್ಥಿಕತೆಯನ್ನು ಗುರಿಯಾಗಿಟ್ಟು ಅಮೆರಿಕ ಆರಂಭಿಸಿದ ದಿ ಗ್ಬಂಧನದ ನಂತರ ಟರ್ಕಿ ನಾಣ್ಯ ಲಿರ ಭಾರೀ ಕುಸಿತ ಎದುರಿಸುತ್ತಿದೆ. ಚೀನ ರಷ್ಯದೊಂದಿಗೆ ವ್ಯಾಪಾರ ವನ್ನು ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ಮೀರಿ ನಿಲ್ಲಲು ಟರ್ಕಿ ಈಗ ಯತ್ನಿಸುತ್ತಿದೆ.

ಹೀಗಿರುವಾಗ ಟರ್ಕಿ ಚೀನದ ವಿರುದ್ಧ ಇಂಥ ರಾಜಕೀಯ ವಿಚಾರ ಪ್ರಸ್ತಾಪಿಸಲು ಹಿಂಜರಿ ಯುವುದು ಸಹಜ. ಈ ಎಲ್ಲ ಲೆಕ್ಕಾಚಾರಗಳನ್ನು ಮಾಡಿ ಚೀನ ಉಯಿಗುರ್ ವಂಶೀಯರ ದಮ ನಕ್ಕೆ ಯತ್ನಿಸುತ್ತಿದೆ. ಟರ್ಕಿಯ ವಿವಶತೆ ಒಂದೆಡೆ ಯಾದರೆ ಕೊಲ್ಲಿ ದೇಶಗಳು ಕಂಬಳಿ ಹೊದ್ದು ಮಲಗಿವೆ. ಹಿರಿಯಣ್ಣ ಅಮೆರಿಕಕ್ಕೆ ಮಾತಾಡುವ ವಿಚಾರ ಇದಲ್ಲ. ಯಾಕೆಂದರೆ ಶಿಂಜ್ಯಾಂಗ್‍ನ ಉಯಿಗುರ್‍ಗಳು ಮುಸ್ಲಿಮರು. ಹಾಗಿದ್ದರೆ ಉಯಿಗುರ್‍ಗಳ ಬಗ್ಗೆ ಧ್ವನಿಯೆತ್ತುವರಾರು? ಮಾನವ ಹಕ್ಕು ಕಾರ್ಯಕರ್ತರು, ಆಂದೋಲನಗಳು, ಪ್ರಜಾ ಪ್ರಭುತ್ವವಾದಿಗಳು ಈ ಕೆಲಸ ಮಾಡಬೇಕಾಗಿದೆ.

ವಿಸ್ತಾರದಲ್ಲಿ ಅಲಸ್ಕಾದಷ್ಟು ದೊಡ್ಡದಾದ ಸಿಂಜಿಯಾಂಗ್‍ನಲ್ಲಿ 24 ಬಿಲಿಯನ್ ಜನಸಂಖ್ಯೆ ಇದೆ. ಇವರಲ್ಲಿ ಅರ್ಧಾಂಶದಷ್ಟು ಉಯಿಗುರ್ ಮುಸ್ಲಿಮರು. ಚೀನ ಇಲ್ಲಿನ ಉಕ್ಕಿನ ಮುಷ್ಠಿ ಹಾಕುವುದು ಆರಂಭಗೊಂಡು ಕೆಲವು ವರ್ಷಗಳೇ ಆಯಿತು. ಉಯಿಗುರ್ ವಂಶೀಯರ ಇತಿಹಾಸ ಚರಿತ್ರೆಯನ್ನು ಇಲ್ಲದಾಗಿಸಲು ಬೀಜಿಂಗ್ ಹಣವನ್ನು ನೀರಿನೋಪಾದಿಯಲ್ಲಿ ಹರಿಸುತ್ತಿದೆ. 2014ರಲ್ಲಿ ಸಶಸ್ತ್ರ ಘರ್ಷಣೆ ನಡೆದ ಬ ಳಿಕ ಉಯಿಗುರ್ ಮುಸ್ಲಿಮರು ಮತ್ತು ಇತರ ಮುಸ್ಲಿಮರ ವಿರುದ್ಧ ಚೀನ ಕೆಂಪು ಖಡ್ಗವನ್ನೇ ಎತ್ತಿಹಿಡಿಯಿತು. ವಿಶ್ವಾಸಿಗಳನ್ನು ದಮನಿಸುವುದು ಕಷ್ಟ ಬಹುಶಃ ಇದು ಕಮ್ಯುನಿಸ್ಟರಿಗೆ ಅರ್ಥವಾಗಿರಬೇಕು.

ವಿಶ್ವಾಸಿಗಳ ಮುಂದೆ ದೌರ್ಜನ್ಯ-ದಮನ ಇತಿಹಾಸದ ಲ್ಲೆಂದು ಗೆದ್ದಿಲ್ಲ. ಮಾನವೀಯತೆಯನ್ನು ಬೋಧಿ ಸುವ ಏಕದೇವನಿಗೆ ಶರಣಗಾಗುವುದನ್ನು ಕಲಿಸುವ ಇಸ್ಲಾಮನ್ನು ಈ ಕೆಂಪು ಖಡ್ಗ ಏನುಮಾಡೀತು? ರಕ್ತಹರಿಸೀತು. ರಕ್ತಹರಿಸಿ ಇಸ್ಲಾಮನ್ನು ಹಿಮ್ಮೆಟ್ಟಿಸಿ ದ್ದಂತಹ ಇತಿಹಾಸ ಈ ಜಗತ್ತಿಗಿಲ್ಲ ಎನ್ನುವುದರಿಂದ ಚೀನ ಪಾಠ ಕಲಿಯುವುದೊಳಿತು. ಕಲಿಯದಿದ್ದರೆ ಇತಿಹಾಸ ಪಾಠ ಮರುಕಳಿಸಬಹುದು.