ರೂಪಾಂತರಿ ವೈರಸ್ ಹೆಚ್ಚು ಮಾರಣಾಂತಿಕ: ಸಾವಿನ ಪ್ರಮಾಣ ಶೇ.30ರಷ್ಟು ಹೆಚ್ಚುವ ಸಾಧ್ಯತೆ

0
152

ಸನ್ಮಾರ್ಗ ವಾರ್ತೆ

ಲಂಡನ್: ಕೊರೋನ ವೈರಸ್ ಹೊಸ ಪ್ರಬೇಧವು ಹಿಂದಿನದಕ್ಕಿಂತಲೂ ಹೆಚ್ಚು ಮಾರಣಾಂತಿಕವಾಗಿದೆ ಎಂದು ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಹೇಳಿದ್ದಾರೆ.

ಕೊರೋನ ವೈರಸ್‍ನಲ್ಲಾದ ಬದಲಾವಣೆ ಸಾವಿನ ಸಂಖ್ಯೆಯನ್ನು ಹೆಚ್ಚಿಸಬಹುದು. ಮೊದಲಿನ ವೈರಸ್‍ಗಿಂತ ಇದು ಅತ್ಯಂತ ವೇಗದಲ್ಲಿ ಹರಡಲಿದೆ. ಲೆಕ್ಕ ಪ್ರಕಾರ ಶೇ.30 ರಿಂದ ಶೇ.70ರಷ್ಟು ವೇಗದಲ್ಲಿ ಹರಡುವುದು ಸಾಧ್ಯತೆಯಿದೆ ಎಂದು ಅವರು ಹೇಳಿದರು. ಇಂಗ್ಲಂಡಿನಲ್ಲಿ ಈ ವೈರಸ್ ಮೊದಲು ಕಾಣಿಸಿಕೊಂಡಿತ್ತು. ನಂತರ ಭಾರತ ಸಹಿತ 50 ಲಕ್ಷ ದೇಶಗಳಿಗೆ ಇದು ಹರಡಿದೆ.

60ವರ್ಷ ವಯಸ್ಸಿಗಿಂತ ಹೆಚ್ಚು ವಯಸ್ಸಾದ ಸಾವಿರ ಮಂದಿಯಲ್ಲಿ ಸಾವಿನ ಸಂಖ್ಯೆ ಶೇ.10ರಷ್ಟು ಆಗಿದೆ. ಆದರೆ, ಹೊಸ ವೈರಸ್‍ನಲ್ಲಿ ಶೇ.10ರಿಂದ 14ರವರೆಗೆ ಸಾವು ಸಂಭವಿಸಬಹುದು ಎಂದು ಅವರು ಹೇಳಿದರು. ಶೇ.30ರಷ್ಟು ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಬೋರಿಸ್ ಜಾನ್ಸನ್ ಹೇಳಿದರು.