ದೇಶದಲ್ಲಿ 90 ಮಂದಿಗೆ ಬ್ರಿಟನ್ ವೈರಸ್ ದೃಢ

0
144

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.9: ದೇಶದಲ್ಲಿ ಬ್ರಿಟನ್ ಕೊರೋನ ವೈರಸ್ ದೃಢಪಟ್ಟಿರುವವರ ಸಂಖ್ಯೆ 90ಕ್ಕೆ ತಲುಪಿದೆ. ಪಇವರು ಇಂಗ್ಲೆಂಡಿನಿಂದ ಬಂದವರು. ಮಧ್ಯಪ್ರದೇಶದಲ್ಲಿ ಹೊಸ ಪ್ರಭೇದದ ಕೊರೋನ ವೈರಸ್ ಮೊದಲ ಬಾರಿ ದೃಢಪಟ್ಟಿತ್ತು.

ಇಂಗ್ಲೆಂಡಿನಿಂದ ಇಂದೋರಿಗೆ ಬಂದ 39 ವರ್ಷದ ವ್ಯಕ್ತಿಗೆ ರೋಗ ಇತ್ತು. ಆದರೆ ಇವರಲ್ಲಿ ರೋಗಲಕ್ಷಣಗಳು ಕಂಡುಬಂದಿಲ್ಲ. ಮಹಾರಾಷ್ಟ್ರದಲ್ಲಿ ಇನ್ನೂ ಮೂರು ಮಂದಿಯಲ್ಲಿ ರೋಗ ಕಾಣಿಸಿಕೊಂಡ ಬಳಿಕ ಅತ್ಯಂತ ವೇಗವಾಗಿ ಹರಡುವ ವೈರಸ್ ಹನ್ನೊಂದು ಮಂದಿಗೆ ಹರಡಿದೆ. ಆದರೆ, ಈ ಹನ್ನೊಂದು ಮಂದಿಯಲ್ಲಿಯೂ ರೋಗ ಲಕ್ಷಣಗಳು ಗೋಚರಿಸಿಲ್ಲ.

ಜನವರಿ 6 ರವರೆಗೆ ಈ ವೈರಸ್ 73 ಮಂದಿಗೆ ದೃಢಪಟ್ಟಿತ್ತು. ದೇಶದಲ್ಲಿ ರೋಗ ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.