ಪ್ರಧಾನಿ ಮೋದಿ ಆರೋಗ್ಯದ ಕುರಿತು ಶಂಕೆ; ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಸರಿದ ಉಮಾ ಭಾರತಿ

0
548

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ.3: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಿಂತ ಮುಂಚಿತವಾಗಿ ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಿಂದ ತನ್ನನ್ನು ಹೊರಗಿಡಬೇಕೆಂದು ಬಿಜೆಪಿ ನಾಯಕಿ ಉಮಾ ಭಾರತಿ ಹೇಳಿದ್ದಾರೆ.

ಆಗಸ್ಟ್ 5 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವವರ ಪಟ್ಟಿಯಿಂದ ತನ್ನನ್ನು ಹೊರಗಿಡಬೇಕೆಂದು ಪ್ರಧಾನಿ ಕಚೇರಿಯೊಂದಿಗೆ ಆಗ್ರಹಿಸಿರುವುದಾಗಿ ಅವರು ಟ್ವೀಟ್ ಮಾಡಿದ್ದಾರೆ.

ಭೋಪಾಲದಿಂದ ತಾನು ಹೊರಡುವೆ. ಅಯೋಧ್ಯೆಯಲ್ಲಿ ತಲುಪುವಾಗ ಕೊರೋನ ಇರುವ ಯಾರಾದರೂ ಸಂಪರ್ಕಿಸುವ ಸಾಧ್ಯತೆಯಿದೆ. ಆದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಂದ ಸುರಕ್ಷಿತ ಅಂತರವನ್ನು ಪಾಲಿಸುವೆ. ಕಾರ್ಯಕ್ರಮ ಪೂರ್ಣಗೊಂಡು ಅತಿಥಿಗಳು ಹೊರಟು ಹೋದ ಬಳಿಕ ತಾನು ರಾಮಲಲ್ಲಾನನ್ನು ಸಂದರ್ಶಿಸುವೆ ಎಂದು ಉಮಾ ಭಾರತಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಇತರ ನಾಯಕರ ಆರೋಗ್ಯದ ಕುರಿತು ಆತಂಕವಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಕೆಲವು ಬಿಜೆಪಿ ನಾಯಕರಿಗೆ ಕೊರೋನ ಸೊಂಕು ತಗುಲಿದ್ದು ಇದು ಆತಂಕ ಸೃಷ್ಟಿಸಿದೆ ಎಂದು ಅವರು ಹೇಳಿದರು. ಆಗಸ್ಟ್ 5 ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹಿತ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.