900 ಕೋಟಿ ರೂ. ಭ್ರಷ್ಟಾಚಾರ: ಕೇಂದ್ರ ಸಚಿವ ಗಜೇಂದ್ರ ಶೇಖಾವತ್‌, ಪತ್ನಿಗೆ ಹೈಕೋರ್ಟು ನೋಟಿಸು

0
682

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಸಂಜೀವಿನಿ ಕ್ರಿಡಿಟ್ ಕೋ ಆಪರೇಟಿವ್ ಸೊಸೈಟಿ ಭ್ರಷ್ಟಾಚಾರ ಪ್ರಕರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಪತ್ನಿ ಸೌನಂದ್ ಕನ್ವರ್‌ರಿಗೆ ಹೈಕೋರ್ಟು ನೋಟಿಸು ಕಳುಹಿಸಿದೆ. ರಾಜಸ್ತಾನದ ಹೈಕೋರ್ಟಿನ ಜೋಧಪುರ ಪೀಠ ಕಾರಣ ಕೇಳಿ ನೋಟಿಸು ಕಳುಹಿಸಿದೆ.

ನಾವು ಹಣಕಳಕೊಂಡಿದ್ದೇವೆ ಎಂದು ಸಾವಿರದಷ್ಟು ಠೇವಣಿದಾರರು ದೂರು ನೀಡಿದ್ದರು. ಕೇಂದ್ರ ನೀರಾವರಿ ಸಚಿವರಾದ ಶೇಖಾವತ್ ಮತ್ತು ಪತ್ನಿ ಕಂಪೆನಿಯ ಮಾಲಕರು ಆಗಿದ್ದಾರೆ. ನಕಲಿ ದಾಖಲೆಗಳನ್ನು ಕೊಟ್ಟು ಮೋಸ ಮಾಡಿದ್ದು ಹಣವನ್ನು ಮರಳಿಸಿಲ್ಲ ಎಂದು ಠೇವಣಿದಾರರು ಆರೋಪಿಸಿದ್ದಾರೆ.

ಸಿಬಿಐ, ಇಡಿ ತನಿಖೆಯನ್ನು ಠೇವಣಿದಾರರು ಆಗ್ರಹಿಸಿದ್ದು ಮಾಲಕರ ಆಸ್ತಿಯನ್ನು ಮುಟ್ಟುಗೋಲು ಹಾಕಿ ಹಣ ಮರಳಿ ನೀಡಬೇಕೆಂದು ಆಗ್ರಹಿಸಿದ್ದಾರೆ.