ಉತ್ತರಪ್ರದೇಶದ ಉನ್ನಾವದಲ್ಲಿ 11 ವರ್ಷದ ಬಾಲಕಿ ಅತ್ಯಾಚಾರ, ಕೊಲೆ

0
1316

ಲಕ್ನೊ, ಜೂ. 22: ಉತ್ತರಪ್ರದೇಶದ ಉನ್ನಾವದಲ್ಲಿ ಹನ್ನೊಂದು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದು ಹಾಕಲಾಗಿದೆ. ಸಾಫಿಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಶುಕ್ರವಾರ ಘಟನೆ ನಡೆದಿದ್ದು ಮನೆಯ ಹೊರಗೆ ನಿದ್ದೆ ಮಾಡುತ್ತಿದ್ದ ಹನ್ನೊಂದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಎಸಗಲಾಗಿದೆ. ತಂದೆ ಬೆಳಗ್ಗೆ ನಿದ್ದೆಯಿಂದ ಎಚ್ಚೆತ್ತು ನೋಡಿದಾಗ ಬಾಲಕಿ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ನಂತರ ಅವರು ಪೊಲೀಸರಿಗೆ ದೂರು ನೀಡಿದ್ದರು. ನಂತರ ಹುಡುಕಾಡಿದಾಗ ಬಾಲಕಿಯ ಮೃತದೇಹ ಸಮೀಪದಲ್ಲಿ ಕಂಡು ಬಂದಿದೆ ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.

ಘಟನೆಯಲ್ಲಿ ಪೊಕ್ಸೊ ಕಾನೂನಿನಡಿಯಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಉನ್ನಾವ ಪೊಲೀಸ್ ಸುಪರಿ0ಡೆಂಟ್ ಎಂ ಪಿ ವರ್ಮಾ ಹೇಳಿದರು. ಆರೋಪಿಗಳನ್ನು ಬಂಧಿಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.