ವಿಶ್ವಸಂಸ್ಥೆ ಸಭೆ:  ಫೆಲೆಸ್ತೀನ್ ಅಧಿಕಾರಿಗಳಿಗೆ  ಪ್ರವೇಶ ನಿರಾಕರಿಸಿದ ಅಮೇರಿಕ 

0
715

ನ್ಯೂಯಾರ್ಕ್ ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ  ಕಚೇರಿಯಲ್ಲಿ ನಡೆಯುವ  ಪ್ರಮುಖ ಸಭೆಯಲ್ಲಿ ಭಾಗವಹಿಸಲು ಫೆಲೆಸ್ತೀನಿಯನ್ ನಿಯೋಗದ ಆರು ತಜ್ಞರಿಗೆ ಪ್ರಯಾಣ ವೀಸಾಗಳನ್ನು ನೀಡಲು ಅಮೆರಿಕಾದ  ಅಧಿಕಾರಿಗಳು  ನಿರಾಕರಿಸಿದ್ದಾರೆಂದು ವಿಶ್ವಸಂಸ್ಥೆಯ ಫೆಲೆಸ್ತೀನಿಯನ್  ರಾಯಭಾರಿ ರಿಯಾದ್ ಮನ್ಸೂರ್  ಹೇಳಿದ್ದಾರೆ. ತಮ್ಮ ವೀಸಾಗಳನ್ನು ಪರಿಶೀಲಿಸಲು ರಮಲ್ಲಾದಿಂದ ಅಮೆರಿಕಾದ  ದೂತಾವಾಸವಿರುವ ಇಸ್ರೇಲ್ ನ   ಜೆರುಸಲೆಮ್ ಗೆ  ಪ್ರಯಾಣಿಸಲು ಇಸ್ರೇಲ್ ಅನುಮತಿ ನಿರಾಕರಿಸುವ ಮೂಲಕ ವಿಷಯವನ್ನು ಜಟಿಲಗೊಳಿಸಿತು ಎಂದು ಪತ್ರಕರ್ತರೊಂದಿಗೆ  ಹೇಳಿದ್ದಾರೆ.

ವಿಶ್ವಸಂಸ್ಥೆಯ ಆತಿಥೇಯ  ರಾಷ್ಟ್ರವಾಗಿರುವ ಅಮೆರಿಕಾವು  ಇಂತಹ ನಡವಳಿಕೆಯಿಂದ  ವಿಶ್ವಸಂಸ್ಥೆಯ ಒಪ್ಪಂದವನ್ನು  ಉಲ್ಲಂಘಿಸಿದೆ. ಈ ಬಗ್ಗೆ  ಪ್ರತಿಭಟನೆಯ ಪತ್ರವೊಂದನ್ನು ಕಳುಹಿಸಲಾಗಿದೆ  ಎಂದು ಮನ್ಸೂರ್ ತಿಳಿಸಿದ್ದಾರೆ.
ದೂರನ್ನು ಪರಿಶೀಲಿಸಲಾಗುತ್ತಿದೆ ಎಂದು ಅಮೇರಿಕ  ಹೇಳಿದೆ, ಆದರೆ ಪ್ರತಿಕ್ರಿಯೆ ಕೋರಿ ಕಳುಹಿಸಿದ  ಇಮೇಲ್ ಗೆ ಇಸ್ರೇಲ್ ಸ್ಪಂದಿಸಿಲ್ಲ. ಬಡತನವನ್ನು ಎದುರಿಸಲು, ಅಭಿವೃದ್ಧಿ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸಲು ಮತ್ತು 2030 ರ ಹೊತ್ತಿಗೆ ಪರಿಸರವನ್ನು ಸಂರಕ್ಷಿಸುವ  ವಿಶ್ವಸಂಸ್ಥೆಯ ಗುರಿಗಳನ್ನು ಕಾರ್ಯಗತಗೊಳಿಸಲು ಸುಮಾರು 50 ದೇಶಗಳನ್ನೊಳಗೊಂಡ  ಉನ್ನತ ಮಟ್ಟದ ಸಭೆಯನ್ನು ನ್ಯೂಯಾರ್ಕ್ ನಲ್ಲಿ ಕರೆಯಲಾಗಿತ್ತು.