ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ರಾಜೀನಾಮೆ ನೀಡಿದ ಉತ್ತರ ಪ್ರದೇಶ ಬಿಜೆಪಿ ಶಾಸಕ

0
340

ಸನ್ಮಾರ್ಗ ವಾರ್ತೆ

ಲಕ್ನೊ: ಕೇಂದ್ರ ಸರಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸಿ ಉತ್ತರ ಪ್ರದೇಶದ ಬಿಜೆಪಿಯ ಮಿರಾಪುರ ಶಾಸಕ ಅವತಾರ್ ಸಿಂಗ್ ಬದಾನ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಮುಝಪ್ಫರ್ ನಗರದಲ್ಲಿ ಮಿರಾಪುರ ಇದೆ. ಬಿಜೆಪಿಯ ನೀತಿಯನ್ನು ವಿರೋಧಿಸಿ ಶಾಸಕತ್ವ ಸಹಿತ ಎಲ್ಲ ಸ್ಥಾನಮಾನಗಳಿಗೆ ರಾಜೀನಾಮೆಯನ್ನು ಬದಾನ್ ಘೋಷಿಸಿದರು.

ರಾಜೀನಾಮೆ ಪತ್ರವನ್ನು ಬಿಜೆಪಿ ಸ್ವೀಕರಿಸುತ್ತಿಲ್ಲ ಎಂದು ಅವತಾರ್ ಸಿಂಗ್ ಬದಾನ ಈ ಹಿಂದೆ ಹೇಳಿದ್ದರು. ಮೀರತ್, ಫರಿದಾಬಾದ್‍ನಿಂದ ಅವರು ಸಂಸದರಾಗಿದ್ದರು. ಇತ್ತೀಚೆಗೆ ಅವರು ಕೇಂದ್ರ ಹೈಕಮಾಂಡಿನಿಂದ ಅಂತರ ಕಾಯ್ದುಕೊಂಡಿದ್ದರು. ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಅವರು ಸಂದರ್ಶಿಸಿದ್ದಾರೆ.

ರೈತರನ್ನು ಉದ್ದೇಶಿಸಿ ಮಾತಾಡಿದ ಅವತಾರ್ ಸಿಂಗ್ ಸದಾ ತಾನು ರೈತರ ಜೊತೆಗಿರುತ್ತೇನೆ ಎಂದು ಘೋಷಿಸಿದರು. ಆದರೆ ಅವರ ರಾಜೀನಾಮೆ ನಮಗೆ ಈ ವರೆಗೆ ಲಭಿಸಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.