ಪ್ರಿಯಾಂಕಾ ಮುಖ್ಯಮಂತ್ರಿ ಅಭ್ಯರ್ಥಿಯೇ?: ಉ.ಪ್ರದೇಶದಲ್ಲಿ 10 ಲಕ್ಷ ಕ್ಯಾಲೆಂಡರ್ ವಿತರಿಸಿದ ಕಾಂಗ್ರೆಸ್

0
404

ಸನ್ಮಾರ್ಗ ವಾರ್ತೆ

ಲಕ್ನೊ: ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟು ಪ್ರಿಯಾಂಕಾ ಗಾಂಧಿಯ ಫೋಟೊ ಇರುವ ಕ್ಯಾಲೆಂಡರ್‌ಗಳನ್ನು ಕಾಂಗ್ರೆಸ್ ವಿತರಿಸುತ್ತಿದೆ. ಹನ್ನೆರಡು ಪುಟಗಳ ಹತ್ತು ಲಕ್ಷ ಕ್ಯಾಲೆಂಡರ್ ರಾಜ್ಯದಲ್ಲಿ ವಿತರಣೆಯಾಗಲಿದೆ.

ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಯ ನಡುವೆ ಈ ಕ್ಯಾಲಂಡರ್‌ಗಳನ್ನು ವಿತರಿಸಲಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಶುಕ್ರವಾರದಿಂದ ಈ ಕ್ಯಾಲೆಂಡರ್‌ಗಳ ಹಂಚಿಕೆ ಆರಂಭವಾಗುವುದು ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಅನೀಲ್ ಯಾದವ್ ಹೇಳಿದರು.

ಚಿತ್ರದಲ್ಲಿ ಪ್ರಿಯಾಂಕಾ ಗಾಂಧಿ ಸೋನ್‍ಭದ್ರದಲ್ಲಿ ಆದಿವಾಸಿ ಮಹಿಳೆಯರೊಂದಿಗೆ ಮಾತಾಡುತ್ತಿರುವುದು. ಅಮೇಠಿಯಲ್ಲಿ ಮಹಿಳೆಯರೊಂದಿಗೆ ಆಶಯ ವಿನಿಮಯ ಮಾಡುತ್ತಿರುವುದು. ಉಜ್ಜೈನಿಯಲ್ಲಿ ಮಹಾಕಾಲ್ ಮಂದಿರದಲ್ಲಿ ಪೂಜೆ ಮಾಡುತ್ತಿರುವುದು. ಲಕ್ನೊದಲ್ಲಿ ಗಾಂಧಿ ಜಯಂತಿಯ ಕಾರ್ಯಕ್ರಮದಲ್ಲಿ ಇದ್ದುದು. ವಾರಣಾಸಿಯಲ್ಲಿ ರವಿದಾಸ್ ಜಯಂತಿಯಲ್ಲಿ ಭಾಗವಹಿಸಿದ್ದು ಹಾಥ್ರಸ್ ಬಾಲಕಿಯ ಮನೆಮಂದಿಯನ್ನು ಭೇಟಿಯಾಗಿದ್ದು, ಅಝಂಗಡದಲ್ಲಿ ಮಕ್ಕಳೊಂದಿಗೆ ಮಾತಾಡುತ್ತಿರುವ ಫೋಟೋಗಳನ್ನು ಒಳಗೊಂಡಿದೆ.

ಪಾರ್ಟಿಯನ್ನು ಬಲಪಡಿಸುವ ಉದ್ದೇಶದಿಂದ ಜನವರಿ ಮೂರರಿಂದ 25ರವರೆಗೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಭಿಯಾನ ಹಮ್ಮಿಕೊಂಡಿದೆ. ಪ್ರಿಯಾಂಕಾರ ಸಂದರ್ಶನಗಳ ಹೊರತಾಗಿ ಸಾಮಾಜಿಕ ಸುಧಾರಕರ ಕುರಿತು, ನಾಯಕರ ಕುರಿತು, ಪ್ರಧಾನ ಕೊಡುಗೆಗಳ ಕುರಿತಾದ ಮಾಹಿತಿ ಕ್ಯಾಲಂಡರಿನಲ್ಲಿದೆ. ಈ ಹಿಂದೆ ರಾಹುಲ್ ಗಾಂಧಿ ತನ್ನ ಸ್ವಕ್ಷೇತ್ರ ವಯನಾಡಿನಲ್ಲಿಯೂ ಇಂಥದ್ದೇ ಕ್ಯಾಲಂಡರ್ ವಿತರಿಸಿದ್ದರು.