ಉತ್ತರಪ್ರದೇಶದಲ್ಲಿ ವ್ಯಾಕ್ಸಿನ್‍ಗೆ ಒಂದು ಬಲಿ: ವ್ಯಾಕ್ಸಿನ್ ಕಾರಣವಲ್ಲ ಎಂದ ತಜ್ಞರು

0
346

ಸನ್ಮಾರ್ಗ ವಾರ್ತೆ

ಲಕ್ನೊ,ಜ.18: ಕೊರೋನ ವ್ಯಾಕ್ಸಿನ್ ಪಡೆದುಕೊಂಡ ಬೆನ್ನಿಗೆ ಉತ್ತರ ಪ್ರದೇಶದ ಸರಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಕೊರೋನ ವ್ಯಾಕ್ಸಿನ್ ಸ್ವೀಕರಿಸಿ 14 ಗಂಟೆ ಆಗುವ ಮೊದಲೇ 46 ವರ್ಷದ ಮಹಿಪಾಲ್ ಸಿಂಗ್ ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿಕೊಂಡು ಉಸಿರುಗಟ್ಟಿದ್ದು ಸಾವಿಗೆ ಕಾರಣವಾಗಿತ್ತು.

ಇದೇ ವೇಳೆ ವ್ಯಾಕ್ಸಿನ್‍ನ ಅಡ್ಡಪರಿಣಾಮದಿಂದ ಈ ಸಾವು ಸಂಭವಿಸಿಲ್ಲ ಎಂದು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಹೇಳಿದ್ದಾರೆ. ಇಂಜೆಕ್ಷನ್ ಚುಚ್ಚಿಸಿಕೊಳ್ಳುವ ಮೊದಲೇ ಅವರಿಗೆ ಆರೋಗ್ಯ ಸಮಸ್ಯೆ ಇತ್ತು ಎಂದು ಕಟುಂಬವೂ ಹೇಳಿದೆ. ಶನಿವಾರ ಸಂಜೆ ಮಹಿಪಾಲ್ ವ್ಯಾಕ್ಸಿನ್ ಸ್ವೀಕರಿಸಿದ್ದರು. ಬೆಳಗ್ಗೆ ಉಸಿರಾಟ ಅಡಚಣೆ ಕಂಡು ಬಂತು, ಎದೆನೋವು ಕಾಣಿಸಿಕೊಂಡಿತ್ತು. ಅವರ ಸಾವಿನ ಕಾರಣದ ಕುರಿತು ಅನ್ವೇಷಣೆ ನಡೆಯುತ್ತಿದ್ದು ಪೋಸ್ಟ್‌ಮಾರ್ಟಂ ವರದಿಯಲ್ಲೇ ಅವರ ಸಾವಿನ ಕಾರಣ ಗೊತ್ತಾಗಬಹದು ಎಂದು ಮೊರಾದಾಬಾದ್ ಮುಖ್ಯ ವೈದ್ಯಾಧಿಕಾರಿ ಎಂಸಿ ಗಾರ್ಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.