ಮಗುವಿನ ಲಿಂಗ ಪತ್ತೆಗಾಗಿ ಪತ್ನಿಯ ಹೊಟ್ಟೆ ಸೀಳಿದ ಪತಿ: ಬಂಧನ

0
436

ಸನ್ಮಾರ್ಗ ವಾರ್ತೆ

ಲಕ್ನೊ,ಸೆ.20: ಐವರು ಹೆಣ್ಣುಮಕ್ಕಳನ್ನು ಹೆತ್ತ ಪತ್ನಿ ಆರನೆಯ ಮಗುವಿಗೆ ಗರ್ಭಧರಿಸಿದಾಗ ಅದು ಗಂಡು ಮಗುವೇ ಎಂಬುದನ್ನು ತಿಳಿಯಲು ಪತಿ ತನ್ನ ಪತ್ನಿಯ ಹೊಟ್ಟೆಯನ್ನು ಸೀಳಿ ನೋಡಿದ ಘಟನೆ ಉತ್ತರ ಪ್ರದೇಶ ಬುಡೋನ್‍ನ ನೆಕ್‍ಪುರಿಯಲ್ಲಿ ಶನಿವಾರ ನಡೆದಿದೆ.

ಏಳು ತಿಂಗಳ ಗರ್ಭಿಣಿ ಪತ್ನಿಯನ್ನು ಬರೇಲಿ ಆಸ್ಪ್ರೆಗೆ ದಾಖಲಿಸಲಾಗಿದೆ. ಪತಿ ಪನ್ನಲಾಲ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ನಿಜವಾದ ಕಾರಣವೇನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತನಗೆ ಗಂಡು ಆಗಬೇಕೆಂದು ಪನ್ನಲಾಲ್ ಬಯಸುತ್ತಿದ್ದ. ಆದ್ದರಿಂದ, ಪತ್ನಿಯ ಗರ್ಭದಲ್ಲಿ ಯಾವ ಮಗು ಇದೆ ಎಂದು ನೋಡಲು ಹೊಟ್ಟೆಯನ್ನು ಸೀಳಿದ್ದಾನೆ ಎಂದು ಪತ್ನಿಯ ಕುಟುಂಬ ಆರೋಪಿಸಿದೆ.