ಎಡಿಟ್ ಮಾಡಿದ ಫೋಟೋ ಹಾಕಿ ನಗೆಪಾಟಲಿಗೀಡಾದ ಉತ್ತರ ಪ್ರದೇಶ ಪೊಲೀಸ್: ಟ್ವಿಟ್ಟರ್ ನಲ್ಲಿ ಸಖತ್ ಟ್ರೋಲ್..!

0
1016

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಕೊಲೆ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟ ಆರೋಪಿಯೋರ್ವನ‌ ಜೊತೆಗೆ ಪೋಟೋ ತೆಗೆದಾಗ ಮಾಸ್ಕ್ ಇಲ್ಲದ್ದಕ್ಕೆ ಫೋಟೋ ಎಡಿಟ್ ಮಾಡಿ, ಮಾಸ್ಕ್ ಹಾಕಿರುವವರ ಹಾಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿರುವ ಉತ್ತರ ಪ್ರದೇಶದ ಪೊಲೀಸರು ನಗೆಪಾಟಲಿಗೀಡಾಗಿದ್ದಾರೆ.

ಪೊಲೀಸ್ ಸಿಬ್ಬಂದಿಯೋರ್ವ ಮಾಸ್ಕ್ ಧರಿಸದೆ ಬಂಧಿತ ವ್ಯಕ್ತಿಯೊಂದಿಗೆ ಪೋಸ್ ನೀಡಿದ್ದರು. ಮಾಸ್ಕ್ ಇಲ್ಲದ್ದರಿಂದ ಸುದ್ದಿಯಾಗಬಹುದೆಂದು ಊಹಿಸಿ ಎಡಿಟ್ ಮಾಡಿ, ಇಬ್ಬರಿಗೂ ಮಾಸ್ಕ್ ಧರಿಸಿರುವವರಂತೆ ಫೋಟೋ ಅಪ್ಲೋಡ್ ಮಾಡಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಯನ್ನು 24 ಗಂಟೆಯೊಳಗೆ ಬಂಧಿಸಲಾಯಿತು ಎಂಬ ಪೋಸ್ಟ್ ನೊಂದಿಗೆ ಫೋಟೋ ಪೋಸ್ಟ್ ಮಾಡಲಾಗಿತ್ತು.

ಇದು ಟ್ವಿಟ್ಟರ್ ಸೇರಿದಂತೆ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯ್ತು. ಟ್ವಿಟ್ಟರ್ ಬಳಕೆದಾರರು ಗೋರಖ್ ಪುರ ಪೋಲಿಸರ ಕಾಲೆಳೆದಾಗ ಕೂಡಲೇ ಪೋಟೋ ವನ್ನು ಡಿಲೀಟ್ ಮಾಡಿದ್ದಾರೆ. ಅದಾಗಲೇ ಪೋಟೋ ಹರಿದಾಡಿದ್ದರಿಂದ ಸದ್ಯ ಟ್ವಿಟ್ಟರ್ ನಲ್ಲಿ ಟ್ರೋಲ್ ಗೆ ಕಾರಣವಾಗಿದೆ.

ಅಲ್ಲದೇ ಕೆಲವರು ಬಿಫೋರ್ ಮತ್ತು ಆಫ್ಟರ್ ಎಂಬ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದು, ಉತ್ತರ ಪ್ರದೇಶದ ಪೊಲೀಸರು ಮುಜುಗರಕ್ಕೀಡಾಗಿದ್ದಾರೆ.