ರಷ್ಯದೊಂದಿಗಿನ ಮಿಸೈಲ್ ಒಪ್ಪಂದದಿಂದ ಭಾರತ ಹಿಂದೆ ಸರಿಯಬೇಕು- ಅಮೆರಿಕ

0
361

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ರಷ್ಯದಿಂದ ಎಸ್-400 ಮಿಸೈಲ್ ಖರೀದಿಸುವ ಒಪ್ಪಂದದಿಂದ ಭಾರತ ಹಿಂದೆ ಸರಿಯಬೇಕೆಂದು ಅಮೆರಿಕ ಹೇಳಿದೆ. ಎಸ್-400 ಅನ್ನು ಟರ್ಕಿ ಈ ಹಿಂದೆ ಖರೀದಿಸಿತ್ತು. ಅದರ ವಿರುದ್ಧ ಅಮೆರಿಕ ದಿಗ್ಬಂಧನ ಏರ್ಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸಮಾನ ಮಿಸೈಲ್ ಭಾರತ ಖರೀದಿಸಲು ಮುಂದೆ ಬಂದದಕ್ಕೆ ಅಮೆರಿಕ ಅಸಹಮತ ವ್ಯಕ್ತಪಡಿಸಿದೆ.

ಭಾರತ, ಐದು ಯುನಿಟ್ ಎಸ್-400ಗಾಗಿ 543 ಕೋಟಿ ಡಾಲರ್ ಒಪ್ಪಂದ ರಷ್ಯದೊಂದಿಗೆ ಮಾಡಿಕೊಂಡಿದೆ. ಭೂಮಿಯಿಂದ ಆಕಾಶಕ್ಕೆ ಹಾರಿಸುವ ಲೋಕದ ಉತ್ಕೃಷ್ಟ ಮಿಸೈಲ್‍ಗಳಲ್ಲಿ ಇದೂ ಒಂದು ಈ ವರ್ಷ ಕೊನೆಯಲ್ಲಿ ಮಿಸೈಲ್ ಭಾರತಕ್ಕೆ ಬರಲಿದೆ.

ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರೋಧಿಸಿದ್ದರು. ಹೊಸ ಅಧ್ಯಕ್ಷ ಜೊ ಬೈಡನ್ ನಿಲುವು ಇದೇ ಆಗಿದೆ ಎಂದು ವರದಿಯಾಗಿದೆ. ಆದರೆ, ಟರ್ಕಿಯ ವಿರುದ್ಧ ಸ್ವೀಕರಿಸಿದ ನಿಲುವನ್ನು ಭಾರತದ ವಿರುದ್ಧ ಅಮೆರಿಕ ಸ್ವೀಕರಿಸಿತೇ ಎಂಬುದು ಸ್ಪಷ್ಟವಾಗಿಲ್ಲ. ಟರ್ಕಿಯ ವಿರುದ್ಧ ಅಮೆರಿಕ ಹೇರಿದ ದಿಗ್ಬಂಧವನ್ನು ರಷ್ಯ ಟೀಕಿಸಿತ್ತು.