ಅಮೆರಿಕ ಈಗ ಮಹಿಳಾ ಉಪಾಧ್ಯಕ್ಷೆಯನ್ನು ಚುನಾಯಿಸಿದೆ; ಆದರೆ ಭಾರತ….?- ಪ್ರಿಯಾಂಕಾ ಗಾಂಧಿ

0
454

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.20: ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಹುಟ್ಟಿದ ದಿನದಲ್ಲಿ ಗೌರವ ಸಲ್ಲಿಸಿದ ಬಳಿಕ ಮೊಮ್ಮಗಳು ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅಮೆರಿಕ ಈಗ ಮಹಿಳಾ ಉಪಾಧ್ಯಕ್ಷೆಯನ್ನು ಆರಿಸಿದೆ ಎಂದು ಹೇಳಿದ್ದಾರೆ. ಆದರೆ ಭಾರತ 50 ವರ್ಷದ ಹಿಂದೆ ಇಂದಿರಾ ಗಾಂಧಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದೆ.

ಜಗತ್ತಿನಾದ್ಯಂತ ಇರುವ ಮಹಿಳೆಯರಿಗೆ ಇಂದಿರಾ ಗಾಂಧಿ ಶಕ್ತಿಯೂ ಧೈರ್ಯವೂ ಪ್ರೇರಣೆಯೂ ಆಗಿದ್ದಾರೆ. ಅಮೆರಿಕ ಈಗ ಒಬ್ಬರು ಮಹಿಳಾ ಉಪಾಧ್ಯಕ್ಷೆಯನ್ನು ಚುನಾಯಿಸಿದೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.

ನವೆಂಬರ್ 19ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನವಾಗಿದ್ದು, ಪ್ರಧಾನಿಯಾಗಿದ್ದ ವೇಳೆ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದರು. ಇಂದಿರಾ ಗಾಂಧಿ ವಿಶ್ವದ ದಿಟ್ಟ ರಾಜಕೀಯ ಮುತ್ಸದ್ದಿಗಳ ಸಾಲಿನಲ್ಲಿ ಈಗಲೂ ಕಂಗೊಳಿಸುತ್ತಿದ್ದಾರೆ.