ಜೊ ಬೈಡನ್‍ರ ಗೆಲುವನ್ನು ಅಧಿಕೃತವಾಗಿ ಘೋಷಿಸಿದ ಅಮೆರಿಕ ಕಾಂಗ್ರೆಸ್

0
461

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಡೆಮಾಕ್ರೆಟಿಕ್ ಪಾರ್ಟಿ ಅಧ್ಯಕ್ಷೀಯ ಅಭ್ಯರ್ಥಿ ಜೊ ಬೈಡನ್‍ರ ಗೆಲುವನ್ನು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ಅಮೆರಿಕ ಕಾಂಗ್ರೆಸ್ ತಿಳಿಸಿದೆ.

ಜನವರಿ 20ಕ್ಕೆ ಅಮೆರಿಕ ಅಧ್ಯಕ್ಷರಾಗಿ ಜೊ ಬೈಡನ್ ಪ್ರಮಾಣವಚನ ಸ್ವೀಕರಿಸಿ ಅಧಿಕಾರಕ್ಕೆ ಬರಲಿದ್ದಾರೆ. ಉಪಾಧ್ಯಕ್ಷ ಮೈಕ್ ಪೆನ್ಸ್ ಈ ನಿರ್ಣಾಯಕ ಘೋಷಣೆ ಮಾಡಿದರು.

306 ಇಲೆಕ್ಟ್ರಾಲ್ ಮತಗಳು ಜೊ ಬೈಡನ್ ಗಳಿಸಿದ್ದು ಅಧ್ಯಕ್ಷರಾಗಲು 270 ಇಲಕ್ಟ್ರಾಲ್ ಮತಗಳ ಅಗತ್ಯವಿತ್ತು. ಜಾರ್ಜಿಯಾ, ಪೆನ್‍ಸೆಲ್ವಿನಿಯಾ, ಅರಿಝೋನ, ನೆವಾಡ, ಮಿಶಿಗನ್‍ಗಳ ಇಲೆಕ್ಟ್ರೊಲ್ ಗಳು ಡೊನಾಲ್ಡ್ ಟ್ರಂಪ್ ರವರ ರಿಪಬ್ಲಿಕ್ ಪಾರ್ಟಿಯ ಪರವಾಗಿ ಹಕ್ಕುವಾದ ಮಂಡಿಸಿದರು.

ಅಮೆರಿಕ ಕಾಂಗ್ರೆಸ್ ಅದನ್ನು ತಿರಸ್ಕರಿಸಿದೆ‌. ಕಳೆದ ದಿವಸ ಅಮೆರಿಕ ಕಾಂಗ್ರೆಸ್ ಸಮ್ಮೇಳನದ ವೇಳೆ ದೊಡ್ಡ ಪ್ರತಿಭಟನೆಯೊಂದಿಗೆ ಟ್ರಂಪ್ ಬೆಂಬಲಿಗರು ರಂಗ ಪ್ರವೇಶಿಸಿದ್ದರು.ಕ್ಯಾಅಪಿಟಲ್ ಬಿಲ್ಡಿಂಗ್‍ಗೆ ನುಗ್ಗಿ ಟ್ರಂಪ್ ಬೆಂಬಲಿಗರು ದಾಂಧಲೆ ನಡೆಸಿದ್ದರು. ಇದರಿಂದಾಗಿ ಅಮೆರಿಕ ಕಾಂಗ್ರೆಸ್ ನ ಸಮ್ಮೇಳನಕ್ಕೆ ಅಡ್ಡಿಯಾಗಿತ್ತು. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದರು.