ಕ್ಯೂಬಾವನ್ನು ಪುನಃ ಭಯೋತ್ಪಾದಕ ದೇಶಗಳ ಪಟ್ಟಿಗೆ ಸೇರಿಸಿದ ಡೊನಾಲ್ಡ್ ಟ್ರಂಪ್!

0
145

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಈ ತಿಂಗಳು 20ರಂದು ಅಧಿಕಾರದಿಂದ ಕೆಳಗಿಳಿಯುವ ಮೊದಲು ಟ್ರಂಪ್ ಹೊಸ ಹೊಸ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಪುನಃ ಅವರು ಕ್ಯೂಬಾ ದೇಶವನ್ನು ಭಯೋತ್ಪಾದಕ ದೇಶಗಳ ಪಟ್ಟಿಗೆ ಸೇರಿಸಿದ್ದಾರೆ. ಕ್ಯೂಬಾ ಭಯೋತ್ಪಾದಕರಿಗೆ ಸುರಕ್ಷಿತ ನೆಲೆ. ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿ ಅಮೆರಿಕ ಈ ಕ್ರಮ ಜರಗಿಸಿದೆ.

ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ಕೊನೆಗೊಳಿಸಲು ಕ್ಯಾಸ್ಟ್ರೋ ಸರಕಾರ ಸಿದ್ಧವಾಗಬೇಕೆಂದು ಅಮೆರಿಕ ರಾಜ್ಯಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಆಗ್ರಹಿಸಿದ್ದಾರೆ. ಹಿಂದಿನ ಒಪ್ಪಂದಗಳನ್ನು ಜಾರಿಗೊಳಿಸಲು ಕ್ಯೂಬಾ ಮುಂದಾಗಿಲ್ಲ ಎಂದು ಅವರು ಹೇಳಿದರು.

1982ರಲ್ಲಿ ಅಂದಿನ ಅಧ್ಯಕ್ಷ ರೊನಾಲ್ಡೊ ರೇಗನ್ ಕ್ಯೂಬಾವನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸಿದ್ದರು. ನಂತರದ ವರ್ಷಗಳಲ್ಲಿ ಒಬಾಮ ಸರಕಾರ 2015ರಲ್ಲಿ ಕ್ಯೂಬಾವನ್ನು ಆ ಪಟ್ಟಿಯಿಂದ ತೆರವುಗೊಳಿಸಿ ರಾಜತಾಂತ್ರಿಕ ಸಂಬಂಧವನ್ನು ಮರುಸ್ಥಾಪಿಸಿದ್ದರು.