ಅಮೆರಿಕ: ಪ್ರತಿ ನಿಮಿಷಕ್ಕೊಂದು ಕೊರೋನ ಸಾವು

0
211

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜು.30: ಕೊರೋನ ಅತ್ಯಂತ ತೀವ್ರಗೊಂಡ ಅಮೆರಿಕದಲ್ಲಿ ಪ್ರತಿನಿಷಕೊಬ್ಬರಂತೆ ಕೋರನಕ್ಕೆ ಬಲಿಯಾಗುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇಲ್ಲಿ ಕೊರೋನಕ್ಕೆ ತುತ್ತಾಗಿ ಒಂದೂವರೆ ಲಕ್ಷ ಮಂದಿ ಮೃತಪಟ್ಟಿದ್ದಾರೆ. 1,53,840 ಆಗಿದೆ. ಒಟ್ಟು ರೋಗಿಗಳ ಸಂಖ್ಯೆ 45,68,000ಕ್ಕೆ ತಲುಪಿದೆ. ಫ್ಲಾರಿಡಾ, ಟೆಕ್ಸಾಸ್, ಕ್ಯಾಲಿಫೋರ್ನಿಯ ಮೊದಲಾದ ರಾಜ್ಯಗಳಲ್ಲಿ ದಾಖಲೆ ಸಂಖ್ಯೆಯ ಸಾವು ಪ್ರತಿದಿನಾಲೂ ಸಂಭವಿಸುತ್ತಿದೆ.

ಚೀನದಲ್ಲಿ ನೂರಕ್ಕೂ ಹೆಚ್ಚು ಹೊಸ ಕೊರೋನ ಪ್ರಕರಣಗಳು ವರದಿಯಾಗಿದ್ದು, 105 ಮಂದಿಗೆ ಹೊಸದಾಗಿ ರೋಗ ಬಾಧಿಸಿದೆ ಒಂದು ದಿವಸ ಮೊದಲು 101 ಮಂದಿಯಲ್ಲಿ ಕೊರೋನ ಇತ್ತು. ಇದರಲ್ಲಿ 96 ಪ್ರಕರಣಗಳು ದೃಢೀಕರಿಸಲ್ಪಟ್ಟಿರುವುದು ಸಿಂಜಿಯಾಂಗಿನ ಪಶ್ಚಿಮಕ್ಕೆ ಎಂದು ಆರೋಗ್ಯ ಆಯೋಗ ತಿಳಿಸಿದೆ.

ಲೋಕಾದ್ಯಂತ ಕೊರೋನ ಪೀಡಿತರ ಸಂಖ್ಯೆ 1,71,87,400 ಮಂದಿಯನ್ನೂ ದಾಟಿತು. ಇದರಲ್ಲಿ 10,69976 ಮಂದಿ ರೋಗದಿಂದ ಗುಣಮುಖವಾಗಿದ್ದಾರೆ. 66,390 ಮಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.

LEAVE A REPLY

Please enter your comment!
Please enter your name here