ಟ್ರಂಪ್‍ರನ್ನು ಹೊರಹಾಕುವುದಿಲ್ಲ: ಮೈಕ್ ಪೆನ್ಸ್; ದೋಷಾರೋಪಣೆ ಯತ್ನ ಅಪಾಯಕಾರಿ- ಟ್ರಂಪ್

0
146

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್: ಅಮೆರಿಕದ ಸಂವಿಧಾನದ 25ನೇ ತಿದ್ದುಪಡಿಯ ಪ್ರಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರನ್ನು ಹೊರಹಾಕುವುದಿಲ್ಲ ಎಂದು ಉಪಾಧ್ಯಕ್ಷ ಮೈಕ್ ಪೆನ್ಸ್ ಹೇಳಿದ್ದಾರೆ. ಒತ್ತಡಕ್ಕೆ ಮಣಿಯುವುದಿಲ್ಲ. ಇಂಪೀಚ್ಮೆಂಟ್ ಪ್ರಸ್ತಾವದಿಂದ ಹಿಂದೆ ಸರಿಯಬೇಕೆಂದು ಪೆನ್ಸ್ ಹೇಳಿದರು. ಆಡಳಿತಾತ್ಮಕ ಕರ್ತವ್ಯ ಮರೆತ ಟ್ರಂಪ್‍ರನ್ನು ಸಂವಿಧಾನದ 25ನೇ ತಿದ್ದುಪಡಿ ಉಪಯೋಗಿಸಿ ಮೈಕ್ ಪೆನ್ಸ್ ಹೊರಹಾಕಬೇಕೆಂದು ಡೆಮಕ್ರಾಟರು ಪ್ರಸ್ತಾವ ಆಗ್ರಹಿಸುತ್ತಿದ್ದಾರೆ.

ಕ್ಯಾಪಿಟಲ್‍ಹಿಲ್ ಬಿಲ್ಡಿಂಗ್ ದಾಳಿಗೆ ಟ್ರಂಪ್ ಪ್ರೇರೇಪಿಸಿದ್ದಾರೆ ಎಂಬ ಆರೋಪವನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದು, ತನ್ನ ಭಾಷಣದಲ್ಲಿ ಒಂದು ಕಡೆಯೂ ಕೂಡ ಜನರನ್ನು ಅಕ್ರಮಕ್ಕೆ ಪ್ರೇರೇಪಿಸುವ ಮಾತಿಲ್ಲ. ಇಂಪೀಚ್‍ಮೆಂಟ್ ಪ್ರಕ್ರಿಯೆ ಅಪಾಯಕಾರಿ ಎಂದು ಹೇಳಿದರು.

ಇದೇ ವೇಳೆ ಟ್ರಂಪ್ ವಿರುದ್ಧ ದೋಷಾರೋಪಣೆ ಇಂಪೀಚ್ಮೆಂಟ್‍ನಲ್ಲಿ ಇಂದು ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಮತದಾನ ನಡೆಯಲಿದೆ. ಕ್ಯಾಪಿಟಲ್ ಹಿಲ್ ದಾಳಿಗೆ ಸಂಬಂಧಿಸಿದ ಆರೋಪಗಳನ್ನು ಮುಂದಿಟ್ಟು ಇಂಪೀಚ್‍ಮೆಂಟ್ ಕ್ರಮಗಳಿಗೆ ಡೆಮಕ್ರಾಟರು ಮುಂದುವರಿದಿದ್ದಾರೆ. ಪ್ರತಿನಿಧಿ ಸಭೆಯಲ್ಲಿ ಡೆಮಕ್ರಾಟರಿಗೆ ಬಹುಮತವಿದ್ದು ಅದು ಪಾಸಾಗಬಹುದು. ಮೇಲ್ಮನೆ ಸೆನೆಟ್‍ನಲ್ಲಿ ಒಂದು ಮತಗಳ ಹೆಚ್ಚುವರಿ ಬಹುಮತ ರಿಪಬ್ಲಿಕನ್‍ಗಳಿಗಿದೆ ಹಾಗಾಗಿ ಇಂಪೀಚ್ಮೆಂಟ್ ಪಾಸಾಗಲಾರದು. ನಿಯೋಜಿತ ಅಧ್ಯಕ್ಷ ಬೈಡನ್ ಅಧಿಕಾರಕ್ಕೆ ಬರುವ ಜನವರಿ ಇಪ್ಪತ್ತಕ್ಕಿಂತ ಮೊದಲು ಮತದಾನವೂ ನಡೆಯಲಾರದು.

ಜಾರ್ಜಿಯ ಚುನಾವಣಾ ಫಲಿತಾಂಶವನ್ನು ಬುಡಮೇಲುಗೊಳಿಸಲು ಶ್ರಮಿಸಿದರು. ದೇಶದ ವಿರುದ್ಧ ಬುಡಮೇಲು ಯತ್ನ ಮಾಡಿದರು ಎಂದು ಎರಡು ಆರೋಪಗಳನ್ನು ಡೆಮಕ್ರಾಟ್ ಸದಸ್ಯೆ ಇಲ್ಹಾನ್ ಉಮರ್ ಮಂಡಿಸಿದರು. ಆಡಳಿತಾವಧಿ ಮುಗಿಯಲು ಕೆಲವೇ ದಿನಗಳಲ್ಲಿ ಟ್ರಂಪ್ ವಿರುದ್ಧ ಬಂದಿರುವ ಎರಡನೇ ಇಂಪೀಚ್ಮೆಂಟ್ ಇದು.