ಅಮೆರಿಕದಲ್ಲಿ ಭಾರತೀಯರಿಗೆ ಆರ್ಥಿಕ ಪೆಟ್ಟು- ಅಧ್ಯಯನ ‌ವರದಿ

0
209

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಜೂ.30: ಕೊರೋನ ಮಹಾಮಾರಿ ಅಮೆರಿಕದ ಭಾರತದ ವಂಶೀಯರ ಆರ್ಥಿಕತೆಗೆ ಹಾಗೂ ಆರೋಗ್ಯ ದೃಷ್ಟಿಯಿಂದಲೂ ಬಾಧಕವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದ್ದು,ಐವರಲ್ಲಿ ಇಬ್ಬರು ಭಾರತೀಯರ ದೀರ್ಘಕಾಲೀನ ಆರ್ಥಿಕ ಯೋಜನೆ ಮತ್ತು ಸುಸ್ಥಿರತೆಗೆ ಪೆಟ್ಟುಕೊಟ್ಟಿದೆ ಎಂದು ಫೌಂಡೇಶನ್ ಫಾರ್ ಇಂಡಿಯಾ ಆ್ಯಂಡ್ ಇಂಡಿಯನ್ ಡಯಸ್ಪೋರ್ ಸ್ಟಡೀಸ್ ತಿಳಿಸಿದೆ.

ಭಾರತೀಯ ವಂಶೀಯರ ಸಂಬಳದಲ್ಲಿ ಶೇ.30ರಷ್ಟು ಕಡಿತವಾಗಿದೆ. ಸಮೀಕ್ಷೆಗೆ ಬಂದವರಲ್ಲಿ ಆರು ಮಂದಿಯಲ್ಲೊಬ್ಬರು ಕೊರೋನದಿಂದ ಬಳಲುತ್ತಿದ್ದಾರೆ. ಅಥವಾ ಆತನ ಕುಟುಂಬದಲ್ಲಿ ಯಾರಿಗಾದರೂ ಕೊರೋನ ಬಾಧಿಸಿದೆ. ಕೆಲವು ಭಾರತೀಯ ವಂಶೀಯರಿಗೆ ವಾಸದ ಮತ್ತು ವಲಸೆ ಸಮಸ್ಯೆ ಇದೆ. ಕುಟುಂಬದವರಲ್ಲಿ ಉಪಯುಕ್ತ ಬದಲಾವಣೆಗೆ ಕೊರೋನ ಸಹಕರಿಸಿದೆ ಎಂದು ಹಲವರು ಹೇಳಿದ್ದಾರೆ. ಮಾನಸಿಕ ಗೊಂದಲ, ನಿರಾಶೆ ಹೆಚ್ಚಾಗಿದೆ ಎಂದು ಪ್ರತೀ ನಾಲ್ವರಲ್ಲಿ ಒಬ್ಬರು ಒಪ್ಪಿಕೊಂಡಿದ್ದಾರೆ. ಅಮೆರಿಕದ ಬಹುತೇಕ ಭಾರತೀಯರ ಜೀವನ ಶೈಲಿಯಲ್ಲಿ ಬದಲಾವಣೆ ಆಗಿದೆ ಎಂದು ಸಮೀಕ್ಷೆ ಬೆಟ್ಟು ಮಾಡಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.