ಕತರ್: ಪ್ರತಿ ತಿಂಗಳು 8000 ವೆಂಟಿಲೇಟರ್ ನಿರ್ಮಾಣ

0
637

ಸನ್ಮಾರ್ಗ ವಾರ್ತೆ

ದೋಹ,ಜು.14: ಸ್ಥಳೀಯ-ಅಂತಾರಾಷ್ಟ್ರೀಯ ಅಗತ್ಯಗಳನ್ನು ಪೂರೈಸುವ ಉದ್ದೇಶದೊಂದಿಗೆ ಕತರ್ ಕಂಪೆನಿ ಪ್ರತಿ ತಿಂಗಳು 8000 ವೆಂಟಿಲೇಟರ್‌ಗಳನ್ನು ನಿರ್ಮಿಸುತ್ತಿದೆ.

ರಕ್ಷಣಾ ಸಚಿವಾಲಯದ ಅಧೀನದ ಬರ್‍ಝಾನ್ ಹೋಲ್ಡಿಂಗ್ಸ್ ವೆಂಟಿಲೇಟರ್ ನಿರ್ಮಿಸುತ್ತಿದೆ. ಪೂರ್ಣವಾಗಿ ಸ್ಥಳೀಯವಾಗಿ ಇವು ನಿರ್ಮಾಣಗೊಳ್ಳುತ್ತಿವೆ. ಇವುಗಳ ನಿರ್ಮಾಣ ಕಾರ್ಯ ವಿವರಿಸುವ ವೀಡಿಯೊ ಸಂದೇಶದೊಂದಿಗೆ ಸರಕಾರದ ಸಂಪರ್ಕ ಕಚೇರಿ ಟ್ವೀಟ್ ಮಾಡಿದೆ.

ಕೊರೋನ ಸಮಸ್ಯೆಯ ನಡುವೆಯೂ ರಕ್ಷಣಾ ಸಚಿವಾಲಯದ ಅಧೀನ ಸಂಸ್ಥೆ ಸಂಪೂರ್ಣ ಸ್ವದೇಶೀ ವೆಂಟಿಲೇಟರ್‍ಗಳನ್ನು ನಿರ್ಮಿಸುತ್ತಿದೆ. ಅದು ಕೂಡ ದಾಖಲೆ ಸಮಯದೊಳಗೆ ಕೆಲಸವನ್ನು ಮಾಡಿ ಮುಗಿಸುತ್ತಿದೆ.

ಎಪ್ರಿಲ್‍ನಿಂದ ಕತರ್ ಸೈನ್ಸ್ ಆಂಡ್ ಟೆಕ್ನಾಲಜಿ ಪಾರ್ಕ್ ಬರ್ಝಾನ್ ಹೋಲ್ಡಿಂಗ್ಸ್‌ನ ಕೇಂದ್ರವಾಗಿ ಬಿಟ್ಟಿದೆ. ಇಲ್ಲಿ
ಸೇವರ್-ಕ್ಯೂ ವೆಂಟಿಲೇಟರ್ ನಿರ್ಮಿಸಲಾಗುತ್ತಿದೆ. ನಾಗರಿಕರಿಗೆ, ಸೇನಾ ಬಳಕೆಗೆ ಉಪಯೋಗ ವಾಗುವಂತಹ ಸೇವರ್-ಕ್ಯೂ ವೆಂಟಿಲೇಟರ್ ನಿರ್ಮಾಣ ನಡೆಯುತ್ತಿದೆ. ಪ್ರೊಜೆಕ್ಟ್ ಮ್ಯಾನೇಜರ್ ಸಈದ್ ಅಬ್ದುಲ್ಲ ಅಲ್ ಮನ್ನಾ ಈ ವಿಷಯವನ್ನು ಅಲ್‍ ಜಝೀರಾಕ್ಕೆ ತಿಳಿಸಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್‌ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.