‘ಲವ್‍ ಜಿಹಾದ್’ ವಿರುದ್ಧ ಮೊದಲ ಕೇಸ್: ಉತ್ತರ ಪ್ರದೇಶ ಸರಕಾರವನ್ನು ಅಭಿನಂದಿಸಿದ ವಿಶ್ವ ಹಿಂದೂ ಪರಿಷತ್

0
412

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ನ.30: ‘ಲವ್ ಜಿಹಾದ್’ ವಿರುದ್ಧ ಹೊಸ ಕಾನೂನಿನಡಿಯಲ್ಲಿ ಮೊದಲ ಕೇಸು ದಾಖಲಾಗಿದ್ದು ಉತ್ತರ ಪ್ರದೇಶ ಸರಕಾರವನ್ನು ವಿಶ್ವ ಹಿಂದೂ ಪರಿಷತ್ ಅಭಿನಂದಿಸಿದೆ. ಮತಾಂತರಕ್ಕೆ ಮುಸ್ಲಿಂ ಯುವಕ ಮಗಳ ಮೇಲೆ ಒತ್ತಡ ಹಾಕುತ್ತಿದ್ದಾನೆ ಎಂದು ಹಿಂದೂ ಯುವತಿಯ ತಂದೆ ಬರೇಲ್ವಿಯಲ್ಲಿ ಕೇಸು ಕೊಟ್ಟಿದ್ದಾರೆ.

“ಲವ್ ಜಿಹಾದ್ ವಿಷಯದಲ್ಲಿ ಫಲಪ್ರದವಾಗಿ ಕಾನೂನು ಜಾರಿ ಮಾಡುವ ದೇಶದ ಮೊದಲ ರಾಜ್ಯವಾದ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ನಾನು ಅಭಿನಂದಿಸುತ್ತೇನೆ. ಬಲಪ್ರಯೋಗದಿಂದ ವಂಚನೆಯಿಂದ ಮತಾಂತರ ನಡೆಸುವವರಿಗೆ ಇದು ಪಾಠವಾಗಿದೆ” ಎಂದು ವಿಶ್ವ ಹಿಂದೂ ಪರಿಷತ್ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ.

ಲವ್‍ ಜಿಹಾದ್ ವಿರುದ್ಧ ಹೊಸ ಕಾನೂನು ಜಾರಿ ಮಾಡುವ ಸುಗ್ರಿವಾಜ್ಞೆಗೆ ಶನಿವಾರ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸಹಿ ಹಾಕಿದ್ದರು. ಬರೇಲ್ವಿ ಜಿಲ್ಲೆಯ ದಿಯೊರಾನಿಯ ಪೊಲೀಸರು ಬಲವಂತದ ಮತಾಂತರ ನಿಷೇಧ ಕಾನೂನಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಉವೈಸ್ ಅಹ್ಮದ್ ಎಂಬ ಯುವಕನ ವಿರುದ್ಧ ಹಿಂದೂ ಯುವತಿಯ ತಂದೆ ದೂರು ನೀಡಿದ್ದಾರೆ.