ಕೇರಳದಲ್ಲಿ ವಿಹೆಚ್‍ಎಸ್‍ಇ ಪರೀಕ್ಷೆ ಆರಂಭ

0
347

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಮೇ.26:ಎರಡು ತಿಂಗಳುಗಳ ನಂತರ ಸಾರ್ವಜನಿಕ ಪರೀಕ್ಷೆಗಳು ಮಂಗಳವಾರ ಆರಂಭವಾಗಿದ್ದು, ವೊಕೇಶನಲ್ ಹೈಯರ್ ಸೆಕಂಡರಿ ಪರೀಕ್ಷೆ ಬೆಳಗ್ಗೆ ಆರಂಭವಾಯಿತು. ಎಸೆಸೆಲ್ಸಿ ಪರೀಕ್ಷೆಗಳು ಮಧ್ಯಾಹ್ನದ ನಂತರ ನಡೆಯಲಿದೆ. ಕೊರೋನ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಸುರಕ್ಷೆ ಮತ್ತು ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆ ಆರಂಭವಾಯಿತು.

ವಿದ್ಯಾರ್ಥಿಗಳು, ಅಧ್ಯಾಪಕರು, ಮುಖಕವಚ ಧರಿಸಿ ಶಾಲೆಗೆ ಬಂದರು. ಪರೀಕ್ಷೆ ಹಾಲ್‍ಗೆ ಹೋಗುವ ಮೊದಲು ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ನಂತರ ಸ್ಯಾನಿಟೈಸರ್ ಉಪಯೋಗಿಸಿ ಕೈಗಳನ್ನು ಶುಚೀಕರಿಸಿದ್ದಾರೆ.

ಹೆತ್ತವರಿಗೆ ಶಾಲೆಯೊಳಗೆ ಪ್ರವೇಶವಿಲ್ಲ. ಮಕ್ಕಳು ಗುಂಪು ಗೂಡುವುದು ಮತ್ತು ಪರಸ್ಪರ ಬಾಕ್ಸ್‌ನಂತಹ ವಸ್ತುಗಳನ್ನು ಹಸ್ತಾಂತರಿಸಿಕೊಳ್ಳುವಂತಿಲ್ಲ. ಹೀಗೆ ಅತೀವ ಮುನ್ನೆಚ್ಚರಿಕೆಯೊಂದಿಗೆ ಪರೀಕ್ಷೆಗಳು ಕೇರಳದಲ್ಲಿ ಆರಂಭವಾಗಿದೆ.